ಬೆಂಗಳೂರು : ರೈಲುಗಳ ಸಂಚಾರ ಭಾಗಶಃ ರದ್ದು

KannadaprabhaNewsNetwork |  
Published : May 17, 2024, 01:31 AM ISTUpdated : May 17, 2024, 11:31 AM IST
ರೈಲು | Kannada Prabha

ಸಾರಾಂಶ

ರಾವು-ಅಂಬೇಡ್ಕರ್‌ನಗರ ನಿಲ್ದಾಣಗಳ ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಕಾಮಗಾರಿ ಭಾಗಶಃ ರದ್ದಾಗಿದೆ.

 ಬೆಂಗಳೂರು : ರತ್ಲಾಮ್ ವಿಭಾಗದ ರಾವು ಮತ್ತು ಡಾ। ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಕೈಗೊಳ್ಳುವುದರಿಂದ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 21 ಮತ್ತು 28ರಂದು ಯಶವಂತಪುರದಿಂದ ಹೊರಡುವ ರೈಲು (19302) ಯಶವಂತಪುರ - ಡಾ। ಅಂಬೇಡ್ಕರ್ ನಗರ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇಂದೋರ್-ಡಾ.ಅಂಬೇಡ್ಕರ್ ನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಡಾ.ಅಂಬೇಡ್ಕರ್ ನಗರದ ಬದಲು ಇಂದೋರ್ ಜಂಕ್ಷನ್ ನಲ್ಲಿ ಕೊನೆಗೊಳ್ಳುತ್ತದೆ.

ಮೇ 19 ಮತ್ತು 26ರಂದು ಡಾ। ಅಂಬೇಡ್ಕರ್ ನಗರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲು (19301) ಡಾ। ಅಂಬೇಡ್ಕರ್ ನಗರ ನಿಲ್ದಾಣದ ಬದಲು ಇಂದೋರ್ ನಿಲ್ದಾಣದಿಂದ ಪ್ರಾರಂಭವಾಲಿದೆ. ಡಾ। ಅಂಬೇಡ್ಕರ್ ನಗರ ಮತ್ತು ಇಂದೋರ್ ನಿಲ್ದಾಣಗಳ ನಡುವಿನ ಪ್ರಯಾಣ ರದ್ದಾಗಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಸುರಕ್ಷತಾ ನಿರ್ವಹಣೆ ಮತ್ತು ವಿವಿಧ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಮೇ 31ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು (11302) ಕೆಎಸ್ಆರ್ ಬೆಂಗಳೂರು-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ ಉದ್ಯಾನ್ ಡೈಲಿ ಎಕ್ಸ್‌ಪ್ರೆಸ್ ರೈಲು ಮುಂಬೈನ ಸಿಎಸ್ಎಂಟಿ ನಿಲ್ದಾಣದ ಬದಲು ಪುಣೆಯಲ್ಲಿ ಸೇವೆ ಕೊನೆಗೊಳ್ಳಲಿದೆ.

ಜೂ.1 ಮತ್ತು 2ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು (11301) ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಮುಂಬೈ-ಕೆಎಸ್ಆರ್ ಬೆಂಗಳೂರು ಉದ್ಯಾನ್ ಡೈಲಿ ಎಕ್ಸ್ ಪ್ರೆಸ್ ರೈಲು ಸಿಎಸ್ಎಂಟಿ, ಮುಂಬೈ-ಪುಣೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ