ಮೊದಲೇ ದಶಕದಿಂದ ಕುಂಟುತ್ತ ಸಾಗಿರೋ ಯೋಜನೆ ಇದಾಗಿದ್ದು, ಇನ್ನೇನು ಎಲ್ಲವೂ ಪೂರ್ಣಗೊಂಡಿದೆ, ನೀರು ಹರಿಯುತ್ತದೆ ಎಂದು ರೈತರು ಕಾದಿದ್ದೇ ಬಂತು. ಆದರೆ ಅಫಜಲ್ಪುರ, ಆಳಂದ ಜನ, ಜಾನುವಾರುಗಳ ದುರಾದೃಷ್ಟ. 9 ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಸದರಿ ಯೋಜನೆಯ ಭಾರಿ ಗಾತ್ರದ ಪೈಪ್ ತುಂಡಾಗಿ ಭೀಮಾ, ಅಮರ್ಜಾ ತೀರ ಜನ- ಜಾನುವಾರುಗಳ ಬಾಯಾರಿಕೆ ನೀಗಿಸುವ ತಾಕತ್ತಿರುವ ಭೀಮಾ ಯೋಜನೆ ಇನ್ನಷ್ಟೂ ವಿಳಂಬವಾಗುವ ಆತಂಕ ಎದುರಾಗಿದೆ.
- ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ.ಮೊದಲೇ ದಶಕದಿಂದ ಕುಂಟುತ್ತ ಸಾಗಿರೋ ಯೋಜನೆ ಇದಾಗಿದ್ದು, ಇನ್ನೇನು ಎಲ್ಲವೂ ಪೂರ್ಣಗೊಂಡಿದೆ, ನೀರು ಹರಿಯುತ್ತದೆ ಎಂದು ರೈತರು ಕಾದಿದ್ದೇ ಬಂತು. ಆದರೆ ಅಫಜಲ್ಪುರ, ಆಳಂದ ಜನ, ಜಾನುವಾರುಗಳ ದುರಾದೃಷ್ಟ. 9 ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಸದರಿ ಯೋಜನೆಯ ಭಾರಿ ಗಾತ್ರದ ಪೈಪ್ ತುಂಡಾಗಿ ಭೀಮಾ, ಅಮರ್ಜಾ ತೀರ ಜನ- ಜಾನುವಾರುಗಳ ಬಾಯಾರಿಕೆ ನೀಗಿಸುವ ತಾಕತ್ತಿರುವ ಭೀಮಾ ಯೋಜನೆ ಇನ್ನಷ್ಟೂ ವಿಳಂಬವಾಗುವ ಆತಂಕ ಎದುರಾಗಿದೆ. 318 ಕೋಟಿ ರು.:3 ಹಂತದ ಕಾಮಗಾರಿ: ಭೀಮಾ ನದಿಗೆ ಅಡ್ಡಲಾಗಿರುವ ಸೊನ್ನ ಜಲಾಶಯದಿಂದ ನೀರನ್ನೆತ್ತಿ ಅಫಜಲ್ಪೂರ, ಆಳಂದದ 13 ಕೆರೆ, ಅಮರ್ಜಾ ಕೆರೆಗೆ ನೀರು ತುಂಬಿಸುವ ಯೋಜನೆ ಹಲವು ಕಾರಣಗಳಿಂದಾಗಿ ಮೊದಲೇ ಕುಂಟುತ್ತಲೇ ಸಾಗಿರುವುದು ರೈತರ ದೌರ್ಬಾಗ್ಯ. ಬರ ಪೀಡಿತ ಆಳಂದ ಹಾಗೂ ಅಫಜಲ್ಪೂರ ತಾಲೂಕಿನ ಜನ- ಜಾನುವಾರುಗಳಿಗೆ, ಅನ್ನದಾತರಿಗೆ ಅನುಕೂಲವಾಗಲೆಂದು 2028ರಲ್ಲಿ ಶಾಸಕ ಬಿಆರ್ ಪಾಟೀಲರ ಒತ್ತಾಸೆಯಿಂದ 318 ಕೋಟಿ ರು. ಮೊತ್ತದ ಕರೆ, ಕಟ್ಟೆಗೆ ನೀರು ತುಂಬಿಸುವ ಸದರಿ ಯೋಜನೆಗೆ ಅನುಮತಿ ದೊರಕಿತ್ತು.2019ರ ಮಾರ್ಚ್‌ನಲ್ಲಿ ಅಧಿಕೃತವಾಗಿ ಕಾಮಗಾರಿ ಆರಂಭಗೊಂಡು ಗುತ್ತಿಗೆ ಕರಾರಿನ ಅನ್ವಯ 18 ತಿಂಗಳಲ್ಲಿ ಅಂದರೆ ಜುಲೈ 2020 ರೊಳಗೆ ಅದು ಪೂರ್ಣಗೊಂಡು ಅಫಜಲ್ಪೂರ ಹಾಗೂ ಆಳಂದದ ಕೆರೆ, ಕಟ್ಟೆಗಳು ನೀರಿನಿಂದ ತುಂಬಿತುಳುಕಾಡಬೇಕಿತ್ತು. ಆದರೆ ಹಲವು ಕಾರಣಗಳಿಂದ ಸದರಿ ಯೋಜನೆಗೆ ನನಗೆಗುದಿಗೆ ಬಿದ್ದಂತಾಗಿದೆ.ಭೀಮಾ ಕೊಳವೆ ಮಾರ್ಗದಲ್ಲೇ ಚೆನ್ನೈ- ಸೂರತ್ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದರಿ ಕಾಮಗಾರಿ ನಡೆಯುತ್ತಿದೆ. ಇದನ್ನು ನಿರ್ವಹಿಸುತ್ತಿರುವ ರಾ.ಹೆ. ಪ್ರಾಧಿಕಾರದವರು ರಸ್ತೆ ನಿರ್ಮಿಸಲು ಅಗೆಯುವಾಗ ಬಡದಾಳ- ಅರ್ಜುಣಗಿ ನಡುವೆ 19. 66 ಕೀಮೀ, ಚೈನೇಜ್ ಬಳಿ 1. 80 ಮೀ ವ್ಯಾಸದ ಕೊಳವೆ ತುಂಡಾಗಿ ಬಿದ್ದು 9 ತಿಂಗಳಾದರೂ ಕ್ಯಾರೆ ಎನ್ನುತ್ತಿಲ್ಲ! 2019 ರಲ್ಲಿಯೇ ಅಳಡಿಸಲಾಗಿದ್ದ ನೀರೆತ್ತುವ ಭಾರಿ ಗಾತ್ರದ ಪೈಪ್ ಲೈನ್ ಬಳಿ ಕಾಮಗಾರಿ ಮಾಡುವ ಮುನ್ನವೇ ನಿಯಮದಂತೆ ಕರ್ನಾಟಕ ನೀರಾವರಿ ನಿಗಮ, ಗುತ್ತಿಗೆದಾರರಿಗೆ ಯಾವುದೇ ಪೂರ್ವ ಸೂಚನೆ ನೀಡದೆ, ಅನುಮತಿ ಪಡೆಯದೆ ಹೆದ್ದಾರಿ ಪ್ರಾಧಿಕಾರ ತೋರಿದ ಬೇಕಾಬಿಟ್ಟಿತನ ಇದೀಗ ಸದರಿ ಕಾಮಗಾರಿ ಇನ್ನೂ ವಿಳಂಬವಾಗುವಂತೆ ಮಾಡಿದೆ. ಕೆಎನ್‌ಎನ್‌ಎಲ್, ಗುತ್ತಿಗೆದಾರರು ಈ ತೊಂದರೆ ಬಗ್ಗೆ ಸಾಕಷ್ಟು ಬಾರಿ ದೂರು ದಾಖಲಿಸಿದ್ದರೂ ಯಾರು ಕಿವಿಗೊಡುತ್ತಿಲ್ಲ.ಕೊಳವೆ ತುಂಡಾಗಿರುವ ಬಗ್ಗೆ ಕೆಎನ್‌ಎನ್‌ಎಲ್ ಇಇಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಮಾ.26 ರಂದು ಲಿಖಿತ ದೂರು ನೀಡಲಾಗಿತ್ತು. ಕಾಮಾಗಾರಿ ಗುತ್ತಿಗೆದಾರ ಶಂಕರ್ ಅವರಿಂದ ಏ.4ಕ್ಕೆ ಅಫಜಲ್ಪುರ ಪೊಲೀಸ್‌ಗೆ ದೂರು ಕೂಡ ನೀಡಲಾಗಿತ್ತು. ಜತೆಗೆ ಭೀಮಾ ಏತ ನೀರಾವರಿ ಅಫಜಲ್ಪೂರ ಇಇ ಅವರಿಂದಲೂ ಅಫಜಲ್ಪೂರ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.