ಕನ್ನಡಪ್ರಭ ವಾರ್ತೆ ಭಾರತೀನಗರ
ಮುಟ್ಟನಹಳ್ಳಿ ಸೂಳೆಕೆರೆ ನಾಲೆ ತುಂಬಿ ದಕ್ಷಿಣ ಭಾಗದ ನಾಲೆಯಿಂದ ಎತ್ತೇಚ್ಚವಾಗಿ ನೀರು ಬಂದ ಕಾರಣ ಬಲಭಾಗದ ಕಾಲುವೆಗಳಲ್ಲಿ ಹೂಳು ತೆಗೆಯದೆ ಮತ್ತು ಗಿಡಗೆಂಟೆಗಳನ್ನು ತೆರವುಗೊಳಿಸದ ಕಾರಣ ಅಕ್ಕ-ಪಕ್ಷದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶಗೊಂಡಿದೆ. ಸೂಳೆಕೆರೆ ಬಲಭಾಗದ ಕಾಲುವೆಯಲ್ಲಿ ನೀರು ಎತ್ತೇಚ್ಚವಾಗಿ ಹರಿದು ಬರುತ್ತಿರುವುದರಿಂದ 3ರಿಂದ 4 ಕಿಮೀ ದೂರದ ವರೆವಿಗೂ ನೀರು ಜಮೀನುಗಳಿಗೆ ನುಗ್ಗಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಎಂದು ಮುಟ್ಟನಹಳ್ಳಿ ಗ್ರಾಮದ ಮೂಲೆಅಟ್ಟಿ ಚಂದ್ರಶೇಖರ್ ತಿಳಿಸಿದ್ದಾರೆ.ಈ ಕೂಡಲೇ ಬೆಳೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಕಡ್ಡಾಯ
ಮಂಡ್ಯ:ಜಿಲ್ಲೆಯ ಪಡಿತರ ಚೀಟಿದಾರರು ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಶೇ. 96.01 ರಷ್ಟು ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಉಳಿದ 61207 ಸದಸ್ಯರು ಇ-ಕೆವೈಸಿ ಮಾಡಿಕೊಳ್ಳಲು ಬಾಕಿ ಇದೆ. ಘನ ಸರ್ಕಾರವು ಆಗಸ್ಟ್ 31 ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಅಂತಿಮ ಗಡುವು ನೀಡಿದೆ. ಇ-ಕೆವೈಸಿ ಯಾಗದ ಪಡಿತರ ಚೀಟಿಗಳಿಗೆ ಪಡಿತರ ಹಂಚಿಕೆ ನಿಲ್ಲುವ ಸಾಧ್ಯತೆ ಇರುವುದರಿಂದ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವುದು. ಬಾಕಿ ಇರುವ 61207 ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಮತು ದ್ವಿತೀಯ ವಾರ್ಷಿಕ ಘಟಿಕೋತ್ಸವವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ 2019-20 ಮತ್ತು 2020-21 ನೇ ಶೈಕ್ಷಣಿಕ ಸಾಳಿನ (ಸ್ನಾತಕ ಮತ್ತು ಸ್ನಾತಕೋತ್ತರ ಪದವಿ) ಹಾಗೂ 2021-22 ನೇ ಶೈಕ್ಷಣಿಕ ಸಾಲಿನ (ಸ್ನಾತಕೋತ್ತರ ಪದವಿ) ಕೋರ್ಸುಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರಧಾನ ಮಾಡಲಾಗುವುದು. ಫಲಿತಾಂಶ ಪ್ರಕಟಗೊಂಡಂತಹ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು UUCMS ತಂತ್ರಾಂಶದ ಮುಖಾಂತರ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹು. ಹೆಚ್ಚಿನ ಮಾಹಿತಿಗಾಗಿ ಪರೀಕ್ಷಾ ವಿಭಾಗವನ್ನು ಸಂಪರ್ಕಿಸುವಂತೆ ಮಂಡ್ಯ ವಿವಿ ಕುಲಸಚಿವರು ತಿಳಿಸಿದ್ದಾರೆ.
ವಿವಿಗೆ ಗೀತೆ, ಆವರಣಕ್ಕೆ ಸೂಕ್ತ ಹೆಸರು ಆಹ್ವಾನಮಂಡ್ಯ: ನೂತನ ಪ್ರರಾಂಭವಾಗಿರುವ ಮಂಡ್ಯ ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಗೀತೆ ಮತ್ತು ವಿಶ್ವವಿದ್ಯಾಲಯದ ಆವರಣಕ್ಕೆ ಸೂಕ್ತ ಹೆಸರು ಅಗತ್ಯವಾಗಿದ್ದು ಹೆಸರನ್ನು ಆಹ್ವಾನಿಸಲಾಗಿದೆ. ಆಸಕ್ತ ಹವ್ಯಾಸಿ ಸಾಹಿತಿಗಳು, ಬರಹಗಾರರು, ಹಾಡುಗಾರರಿಂದ ಮಂಡ್ಯ ಜಿಲ್ಲೆಯ ಸಮಗ್ರ ಇತಿಹಾಸ, ಸಾಹಿತ್ಯ ಜಾನಪದ, ವಿದ್ವಾಂಸರು, ಸ್ವಾತಂತ್ರ‍್ಯ, ಕೃಷಿ, ನೀರಾವರಿ ಹಾಗೂ ಸಾಮಾಜಿಕ ಆರ್ಥಿಕ ಐತಿಹ್ಯ ಒಳಗೊಂಡ ವಿಶ್ವವಿದ್ಯಾಲಯ ಗೀತೆ ಮತ್ತು ವಿಶ್ವವಿದ್ಯಾಲಯದ ಆವರಣಕ್ಕೆ ಸೂಕ್ತ ಹೆಸರನ್ನು ಆಹ್ವಾನಿಸಲಾಗಿದೆ. ಆಸಕ್ತರು ಆಗಸ್ಟ್ 23 ರೊಳಗೆ ಮಂಡ್ಯ ವಿಶ್ವವಿದ್ಯಾಲಯ ಕುಲಸಚಿವರು ಇವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತಕ್ಕದ್ದು. ಆಯ್ಕೆಯಾದ ಗೀತೆ ರಚನಕಾರರಿಗೆ ಮತ್ತು ವಿಶ್ವವಿದ್ಯಾಲಯದ ಆವರಣಕ್ಕೆ ಹೆಸರು ಸೂಚಿಸಿದವರಿಗೆ ವಿಶ್ವವಿದ್ಯಾನಿಲಯದಿಂದ ಸೂಕ್ತ ಬಹುಮಾನ ನೀಡಲಾಗುವುದು. ಈ ನಿಟ್ಟಿನಲ್ಲಿ ರಚಿಸಿರುವ ವಿಶ್ವವಿದ್ಯಾಲಯದ ಸಮಿತಿಯ ತೀರ್ಪು ಅಂತಿಮವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲ ಸಚಿವರು ತಿಳಿಸಿದ್ದಾರೆ.