- ಡೆಂಘೀಜ್ವರ ಹಿನ್ನೆಲೆ ಮಾಲೀಕರು ಸ್ಪಂದಿಸಲಿ: ಮುಖ್ಯಾಧಿಕಾರಿ - - - ಹೊನ್ನಾಳಿ: ನಗರದ ಎಲ್ಲ ಖಾಲಿ ನಿವೇಶನಗಳಲ್ಲಿ ಬೆಳದಿರುವ ಗಿಡಗಳನ್ನು, ತ್ಯಾಜ್ಯವನ್ನು ಮಾಲೀಕರು ಶೀಘ್ರ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಸೂಚನೆ ನೀಡಿದರು.
ಈ ಹಿನ್ನೆಲೆ ಕೂಡಲೇ ಮಾಲೀಕರು ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲ್ಲವಾದರೆ ಪುರಸಭೆ ವತಿಯಿಂದಲೇ ಸ್ವಚ್ಛತೆ ಮಾಡಿಸಿ, ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಆಸ್ತಿ ಮಾಲೀಕರ ಖಾತೆಗೆ ಸೇರಿಸಿ, ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಹೊನ್ನಾಳಿ ಪಟ್ಟಣದ ಅಗಳ ಮೈದಾನದ ಸಮೀಪ ಇರುವ ವಾಣಿಜ್ಯ ಕಟ್ಟಡಗಳಿಂದ ಅನಗತ್ಯ ತ್ಯಾಜ್ಯ ನೀರನ್ನು ಮೈದಾನಕ್ಕೆ ಹರಿಸುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಶೀಘ್ರ ಸಂಬಂಧಪಟ್ಟ ವಾಣಿಜ್ಯ ಕಟ್ಟಡದ ಮಾಲೀಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.ನಗರದಲ್ಲಿ ಮನೆಗಳ ಆಸುಪಾಸಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೆಸರು ನೀರಲ್ಲಿ ಲಾರ್ವಗಳು ಉತ್ಪತ್ತಿಯಾಗಿ, ನಂತರ ಅವು ಸೊಳ್ಳೆಗಳಾಗಿ ಡೆಂಘೀಜ್ವರ, ಚಿಕೂನ್ ಗುನ್ಯಾ, ಮಲೇರಿಯಾದಂಥ ಕಾಯಿಲೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇಂತಹ ಪ್ರಕರಣಗಳಿಗೆ ಅವಕಾಶ ನೀಡದೇ ಮನೆ ಮುಂದೆ ನೀರು ನಿಂತರೆ ಕೂಡಲೇ ತೆರವುಗೊಳಿಸಲು ತಿಳಿಸಿದರು.
ಪುರಸಭೆ ವ್ಯಾಪ್ತಿಯ ಅನೇಕ ವಾರ್ಡ್‌ಗಳ ಮನೆಗಳ ಮುಂದಿನ ನಳಗಳಿಗೆ ಟ್ಯಾಪ್ ಅಳವಡಿಸಿಲ್ಲ. ಇದರಿಂದಾಗಿ ಪ್ರತಿನಿತ್ಯ ಹೆಚ್ಚಿನ ನೀರು ಪೋಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರ ವಹಿಸಬೇಕು. ಕೂಡಲೇ ನಳಗಳ ಟ್ಯಾಪ್ ಅಳವಡಿಸಿ, ನೀರು ಹಿತಮಿತವಾಗಿ ಬಳಸಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಪುರಸಭೆ ಕಾಯ್ದೆ ಅನ್ವಯ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.- - - -ಫೋಟೋ:
ಲೀಲಾವತಿ, ಮುಖ್ಯಾಧಿಕಾರಿ, ಪುರಸಭೆ.