ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್‌ ಮುಂದುವರೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಕಳೆದ ಐದಾರು ತಿಂಗಳಿಂದ ಸಿಎಂ ಕುರ್ಚಿ ವಿಚಾರದಲ್ಲಿ ನಡೆಯುತ್ತಿರುವ ಬ್ರೇಕ್‌ಫಾಸ್ಟ್ ಮೀಟಿಂಗ್,  ಡಿನ್ನರ್‌ ಮೀಟಿಂಗ್‌ಗಳಿಂದ ಬೇಸತ್ತಿದ್ದಾರೆ

 ಸುವರ್ಣ ವಿಧಾನಸೌಧ : ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್‌ ಮುಂದುವರೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಶುಕ್ರವಾರ ಸುವರ್ಣ ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಅಧಿವೇಶನ ಆರಂಭಕ್ಕೂ 10 ದಿನ ಮೊದಲೇ ನಾನು ಬೆಂಗಳೂರಿನಲ್ಲಿ ಹೇಳಿದ್ದೆ. ಮುಖ್ಯಮಂತ್ರಿ ಯಾವ ಪುರುಷಾರ್ಥಕ್ಕೆ ಬೆಳಗಾವಿ ಅಧಿವೇಶನ ಕರೆದಿದ್ದಾರೆ? ನಾಯಕತ್ವ ವಿಚಾರ ಮೊದಲು ಇತ್ಯರ್ಥಪಡಿಸಿಕೊಂಡು ಬನ್ನಿ. ಯಾರಿಗೆ ಸಿಎಂ ಕುರ್ಚಿ ಬಿಟ್ಟುಕೊಡಬೇಕು ಅಥವಾ ಯಾರು ಇರಿಸಿಕೊಳ್ಳಬೇಕು ಎಂಬುದನ್ನು ಬಗೆಹರಿಸಿಕೊಳ್ಳಿ ಎಂದಿದ್ದೆ. ಇದಕ್ಕೆ ಕಾಂಗ್ರೆಸ್ಸಿಗರು ಇದು ನಮ್ಮ ಆಂತರಿಕ ವಿಚಾರ ಎಂದಿದ್ದರು. ಆದರೆ, ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಕಳೆದ ಐದಾರು ತಿಂಗಳಿಂದ ಸಿಎಂ ಕುರ್ಚಿ ವಿಚಾರದಲ್ಲಿ ನಡೆಯುತ್ತಿರುವ ಬ್ರೇಕ್‌ಫಾಸ್ಟ್ ಮೀಟಿಂಗ್, ಲಂಚ್ ಮೀಟಿಂಗ್, ಡಿನ್ನರ್‌ ಮೀಟಿಂಗ್‌ಗಳಿಂದ ಜನ ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ದೆವ್ವ ಹೊರ ಬರ್ತಿವೆ: ಅಶೋಕ್‌ ವ್ಯಂಗ್ಯ 

ರಾಜ್ಯ ಕಾಂಗ್ರೆಸ್ ದೆವ್ವದ ಮನೆಯಾಗಿದೆ. ಒಂದು ದಿನ ಕೊಳ್ಳಿ ದೆವ್ವ, ಮತ್ತೊಂದು ದಿನ ಬಿಳಿ ದೆವ್ವ, ಮಗದೊಂದು ದಿನ ಕರಿ ದೆವ್ವ... ಹೀಗೆ ದಿನಕ್ಕೊಂದು ದೆವ್ವ ಆಚೆ ಬರುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಅಧಿವೇಶನಕ್ಕೆ ನೇರವಾಗಿ 20 ಕೋಟಿ ರು. ಮತ್ತು ಪರೋಕ್ಷವಾಗಿ ಸುಮಾರು 30 ಕೋಟಿ ರು. ಖರ್ಚಾಗುತ್ತದೆ. ಈ ಅಧಿವೇಶನದಲ್ಲಿ ಏನು ನಡೆಯುತ್ತಿದೆ? ಅಧಿವೇಶನದ ಹೆಸರಿನಲ್ಲಿ ಕಾಂಗ್ರೆಸ್ ಶಾಸಕರು, ಮಂತ್ರಿಗಳ ಡಿನ್ನರ್‌ ಪಾಲಿಟಿಕ್ಸ್‌ ನಡೆಯುತ್ತಿದೆ. ರಾತ್ರಿ ಊಟದ ನೆಪದಲ್ಲಿ ತಡರಾತ್ರಿವರೆಗೂ ಶಾಸಕರು ಮತ್ತು ಮಂತ್ರಿಗಳನ್ನು ಕೂಡಿ ಹಾಕಿಕೊಂಡು ಬಲಪ್ರದರ್ಶಿಸಲಾಗುತ್ತಿದೆ. ಹೈಕಮಾಂಡ್‌ಗೆ ಶಕ್ತಿ ತೋರಿಸಲು ಈ ಅಧಿವೇಶನ ಬಳಸುತ್ತಿದ್ದಾರೆ. ಯಾವ ಮಂತ್ರಿಗೂ ಸಮಯ ಕೊಟ್ಟು ಸದನದಲ್ಲಿ ಕೂರುತ್ತಿಲ್ಲ, ಬಂದರೂ ತಯಾರಿ ಇಲ್ಲದೆ ಬುರುಡೆ ಬಿಟ್ಟು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾ ಬಿಡೆ, ನಾ ಕೊಡೆ:

ಬೆಳಗಾವಿಯಲ್ಲೂ ಪವರ್ ಪಾಲಿಟಿಕ್ಸ್‌ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ‘ನಾ ಬಿಡೆ’ ಎಂದರೆ, ಸಿದ್ದರಾಮಯ್ಯ ‘ನಾ ಕೊಡೆ’ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಒದ್ದು ಅಧಿಕಾರ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ಧರಾಮಯ್ಯ 47 ಕೋಟಿ ರು. ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಓಡಾಡಿದ್ದಾರೆ. ಅವರು ಜಾಸ್ತಿ ಓಡಾಡಿರುವುದು ಮೈಸೂರಿಗೆ. ಅವರು ಮೈಸೂರಿಗೆ ಮುಖ್ಯಮಂತ್ರಿನಾ ಅಥವಾ ಕರ್ನಾಟಕಕ್ಕೆ ಮುಖ್ಯಮಂತ್ರಿನಾ ಎಂಬುದು ಅರ್ಥವಾಗುತ್ತಿಲ್ಲ.

ಇಡೀ ರಾಜ್ಯದ ರಸ್ತೆಗಳು ಹಾಳಾಗಿವೆ. ಅದರಲ್ಲೂ ಉತ್ತರ ಕರ್ನಾಟಕದ ರಸ್ತೆಗಳಲ್ಲಿ 10 ಕಿ.ಮೀ. ಪ್ರಯಾಣಿಸಲು 2-3 ಗಂಟೆ ಬೇಕು. ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳಿಂದ 15ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿ ಮುಚ್ಚಲು ಈ ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಓಡಾಡಲು ಸಣ್ಣ ಹೆಲಿಕಾಪ್ಟರ್‌ ನೋಡಿಕೊಳ್ಳಬೇಕು ಎಂದು ಟೀಕಿಸಿದರು.

ಬಲಪ್ರದರ್ಶಿಸಲು ಡಿನ್ನರ್‌ ಪಾಲಿಟಿಕ್ಸ್:

ಹೆಲಿಕಾಪ್ಟರ್‌ ಗೆ 47 ಕೋಟಿ ರು. ಕೊಡುವ ಮುಖ್ಯಮಂತ್ರಿಗೆ ಕಬ್ಬುಬೆಳೆಗಾರರಿಗೆ ಹಣ ನೀಡುವ ಉದಾರತೆ ಇಲ್ಲ.

ಅವರ ಪರ ಮಗ ಫುಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಪ್ಪನೇ ಐದು ವರ್ಷ ಸಿಎಂ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಡಿ.ಕೆ. ಬ್ರದರ್‌ ತಮ್ಮ ಅಣ್ಣನನ್ನು ಮುಖ್ಯಮಂತ್ರಿಯಾಗಿ ನೋಡುವ ಕನಸು ಕಾಣುತ್ತಿದ್ದಾರೆ. ಇದನ್ನು ನೋಡಿದರೆ, ಕಾಂಗ್ರೆಸ್ ಪಾರ್ಟಿ ಸತ್ತಿದೆ. ಸತ್ತಿರುವ ಪಕ್ಷವನ್ನು ಹಿಂದೆ-ಮುಂದೆ ಹೊರಲು ಕಿತ್ತಾಡುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ, ಜನರೇ ಸತ್ತಿರುವ ಈ ಸರ್ಕಾರವನ್ನು ಹೂತು ಹಾಕುತ್ತಾರೆ ಎಂದು ಕೆಂಡಕಾರಿದರು.

ಅವರಿಗೆ ರಸ್ತೆಗಳ ಮೇಲೆ ವಿಶ್ವಾಸವಿಲ್ಲ. ರಸ್ತೆಗಳ ಮೇಲೆ ಓಡಾಡಿದರೆ ಬೆನ್ನು, ಕಾಲು, ಸೊಂಟ ನೋವು ಬರುತ್ತದೆ. ಹೀಗಾಗಿ ಅವರು ಹೆಲಿಕಾಪ್ಟರ್ ಆಯ್ಕೆ ಮಾಡಿಕೊಂಡಿದ್ದಾರೆ. ಜನ ಬೇಕಾದರೆ ಕೈ, ಕಾಲು, ಸೊಂಟು ಮುರಿದುಕೊಂಡು ರಸ್ತೆಗಳಲ್ಲಿ ಓಡಾಡಬಹುದು. ಅವರು ಮಾತ್ರ ಸುರಕ್ಷಿತವಾಗಿ ಹೆಲಿಕಾಪ್ಟರ್ ಹೆಲಿಕಾಪ್ಟರ್‌ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ಧರಾಮಯ್ಯ 47 ಕೋಟಿ ರು. ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಓಡಾಡಿದ್ದಾರೆ. ಅವರು ಜಾಸ್ತಿ ಓಡಾಡಿರುವುದು ಮೈಸೂರಿಗೆ. ಅವರು ಮೈಸೂರಿಗೆ ಮುಖ್ಯಮಂತ್ರಿನಾ ಅಥವಾ ಕರ್ನಾಟಕಕ್ಕೆ ಮುಖ್ಯಮಂತ್ರಿನಾ ಎಂಬುದು ಅರ್ಥವಾಗುತ್ತಿಲ್ಲ.

ಇಡೀ ರಾಜ್ಯದ ರಸ್ತೆಗಳು ಹಾಳಾಗಿವೆ. ಅದರಲ್ಲೂ ಉತ್ತರ ಕರ್ನಾಟಕದ ರಸ್ತೆಗಳಲ್ಲಿ 10 ಕಿ.ಮೀ. ಪ್ರಯಾಣಿಸಲು 2-3 ಗಂಟೆ ಬೇಕು. ಬೆಂಗಳೂರಿನಲ್ಲಿ ಈ ರಸ್ತೆ ಗುಂಡಿಗಳಿಂದ 15ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿ ಮುಚ್ಚಲು ಈ ಸರ್ಕಾರದ ಬಳಿ ಹಣವಿಲ್ಲ. ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಓಡಾಡಲು ಸಣ್ಣ ಹೆಲಿಕಾಪ್ಟರ್‌ ನೋಡಿಕೊಳ್ಳಬೇಕು ಎಂದು ಟೀಕಿಸಿದರು.

ಬಲಪ್ರದರ್ಶಿಸಲು ಡಿನ್ನರ್‌ ಪಾಲಿಟಿಕ್ಸ್:

ಹೆಲಿಕಾಪ್ಟರ್‌ ಗೆ 47 ಕೋಟಿ ರು. ಕೊಡುವ ಮುಖ್ಯಮಂತ್ರಿಗೆ ಕಬ್ಬುಬೆಳೆಗಾರರಿಗೆ ಹಣ ನೀಡುವ ಉದಾರತೆ ಇಲ್ಲ.

ಈ ಸರ್ಕಾರದ ಲಜ್ಜೆಗೆಟ್ಟ ವರ್ತನೆಯಿಂದ ರೈತರು ಬೀದಿಗಿಳಿದಿದ್ದಾರೆ. ಸಿಎಂ ಕುರ್ಚಿ ವಿಚಾರದಲ್ಲಿನ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಸಂಪೂರ್ಣ ಸ್ಥಗಿತವಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಸಕಾಲಕ್ಕೆ ತೆರೆಯಲು ಸಾಧ್ಯವಾಗಿಲ್ಲ. ಬೆಳಗಾವಿಗೆ ಬಂದರೂ ಡಿನ್ನರ್ ಪಾಲಿಟಿಕ್ಸ್ ಮುಂದುವರೆಸಿದ್ದಾರೆ. ಇದೆಲ್ಲವನ್ನೂ ರಾಜ್ಯದ ರೈತರು, ಜನ ಗಮನಿಸುತ್ತಿದ್ದಾರೆ. ಈ ಸರ್ಕಾರ ನೀಡಿದ್ದ ಭರವಸೆಗಳು ಈಡೇರದೆ ನಾಡಿನ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹರಿಹಾಯ್ದರು.