ಕುಮಟಾ: ತಾಲೂಕಿನ ಕೂಜಳ್ಳಿಯ ಪಂ. ಷಡಕ್ಷರಿ ಗವಾಯಿ ಅಕಾಡೆಮಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಸಮಾರಂಭ ಜ. 4ರಂದು ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ವೇ.ಮೂ. ಗಿರೀಶ ಭಟ್ಟ ಹಳದೀಪುರ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ವಿ.ಜಿ. ಹೆಗಡೆ ಭಾಗವಹಿಸುವರು.
ಬಳಿಕ ನಡೆಯುವ ಸ್ವರ ನಮನ ಕಾರ್ಯಕ್ರಮದಲ್ಲಿ ಪಂ. ನಿತ್ಯಾನಂದ ಹಳದೀಪುರ ಅವರಿಂದ ಬಾನ್ಸುರಿ ವಾದನ, ಶ್ರೀಪಾದ ಹೆಗಡೆ ಕಂಪ್ಲಿ, ಮುಂಬೈನ ಭಾಗೇಶ ಮರಾಠೆ, ಕವಲಕ್ಕಿಯ ವಿ. ಶಾರದಾ ಹೆಗಡೆ, ಶಿರಸಿಯ ಡಾ. ಸಂಧ್ಯಾ ಭಟ್ಟ ಅವರಿಂದ ಗಾಯನ, ಕೊಂಡದಕುಳಿಯ ಕಿಶೋರ ಹೆಗಡೆ ಅವರಿಂದ ಬಾನ್ಸುರಿ ವಾದನ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ, ಮುಂಬೈನ ಸ್ವಪ್ನಿಲ್ ಭಿಸೆ, ವಿದ್ವಾನ್ ಪರಮೇಶ್ವರ ಹೆಗಡೆ ಮೈಸೂರು, ಅಕ್ಷಯ ಭಟ್ಟ ಅಂಸಳ್ಳಿ, ಭರತ ಹೆಗಡೆ ಕವಲಕ್ಕಿ ಸಾಥ್ ನೀಡುವರು. ಗೌರೀಶ ಯಾಜಿ, ಅಜಯ ಹೆಗಡೆ ವರ್ಗಾಸರ ಸಂವಾದಿನಿ ಸಾಥ್ ನೀಡುವರು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತ, ಸಾಹಿತಿ ಅಶೋಕ ಹಾಸ್ಯಗಾರ, ನಿವೃತ್ತ ಉಪನ್ಯಾಸಕ ಶಂಕರ ಭಟ್ಟ ಧಾರೇಶ್ವರ, ವಿಶ್ರಾಂತ ಮುಖ್ಯಾಧ್ಯಾಪಕ ಎಂ.ಟಿ. ಗೌಡ, ವೇದ ಅಧ್ಯಾಪಕ ಮನೋಜ ಕೃಷ್ಣ ಭಟ್ಟ ಪಾಲ್ಗೊಳ್ಳುವರು. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತ ರಾವ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.