..ಎಚ್‌ಡಿಡಿ ಕುಟುಂಬದಲ್ಲಿ ಸೂತಕದ ಛಾಯೆ:ಚಲುವರಾಯಸ್ವಾಮಿ ಹೇಳಿಕೆಗೆ ಆಕ್ರೋಶ

KannadaprabhaNewsNetwork |  
Published : Jun 05, 2026, 01:15 AM IST
೪ಕೆಎಲ್‌ಆರ್-೧೩ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್. | Kannada Prabha

ಸಾರಾಂಶ

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಚಲುವರಾಯಸ್ವಾಮಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಯಾರನ್ನೋ ಮೆಚ್ಚಿಸಲು ಕೇವಲವಾಗಿ ಮಾತನಾಡಬಾರದು. ಅವರು ರಾಜಕೀಯವಾಗಿ ಗುರುತಿಸಿಕೊಳ್ಳಲು ಕುಮಾರಸ್ವಾಮಿ ದೇವೇಗೌಡರು ಕಾರಣ. ಆದರೆ ಈಗ ಸಾವು, ಸೂತಕ ಎಂದೆಲ್ಲಾ ಮಾತನಾಡುತ್ತಾ ಉಂಡ ಮನೆಗೆ ಎರಡು ಬಗೆಯುತ್ತಿರುವ ಅವರ ರಾಜಕೀಯ ಜೀವನ ಅಂತ್ಯದಲ್ಲಿದೆ ಎಂದು ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಸೂತಕದ ಛಾಯೆ ನೆಲೆಸಿದೆ ಎಂದಿರುವ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಚಲುವರಾಯಸ್ವಾಮಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಯಾರನ್ನೋ ಮೆಚ್ಚಿಸಲು ಕೇವಲವಾಗಿ ಮಾತನಾಡಬಾರದು. ಅವರು ರಾಜಕೀಯವಾಗಿ ಗುರುತಿಸಿಕೊಳ್ಳಲು ಕುಮಾರಸ್ವಾಮಿ ದೇವೇಗೌಡರು ಕಾರಣ. ಆದರೆ ಈಗ ಸಾವು, ಸೂತಕ ಎಂದೆಲ್ಲಾ ಮಾತನಾಡುತ್ತಾ ಉಂಡ ಮನೆಗೆ ಎರಡು ಬಗೆಯುತ್ತಿರುವ ಅವರ ರಾಜಕೀಯ ಜೀವನ ಅಂತ್ಯದಲ್ಲಿದೆ ಎಂದು ಕಿಡಿಕಾರಿದ್ದಾರೆ.ಚಲುವರಾಯಸ್ವಾಮಿ ಮೂರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ದರ್ಪದಿಂದ ನಡೆದುಕೊಂಡಿದ್ದಾರೆ. ಈಗ ಸಚಿವ ಸಂಪುಟ ಪುನರ್ ರಚನೆಯಲ್ಲಿ ಅವರಿಗೆ ಸ್ಥಾನವು ಕಲ್ಪಿಸದೆ ಕಡೆಗಣಿಸಲಾಗಿದೆ ಅವರು ಮತ್ತೆ ಸಚಿವ ಸ್ಥಾನ ಪಡೆಯಲು ಪ್ರಯತ್ನ ಮಾಡಲಿ ಅದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ಅಹ್ಮದ್ ಖಾನ್ ಅವರನ್ನು ಈಗ ನಡು ನೀರಿನಲ್ಲಿ ಕೈಬಿಡಲಾಗಿದೆ. ಹಿಂದೆ ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಜಮೀರ್ ಅವರಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಅವರನ್ನು ಕರೆಸಿಕೊಂಡು ಕೇವಲವಾಗಿ ನಡೆಸಿಕೊಂಡಿದೆ. ಈಗಲಾದರೂ ಜಮೀರ್ ಅಹಮದ್ ಅವರು ಬುದ್ಧಿ ಕಲಿಯಬೇಕಾಗಿದೆ ಎಂದೂ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಟಿ ರಚನೆ ಆದಾಗ ಡಾ। ಹೆಗ್ಗಡೆ ಜೈಲಿಗೆ ಹೋಗ್ತಾರೆ ಅಂತ ಸಂಭ್ರಮಿಸಿತ್ತು ಬುರುಡೆ ಗ್ಯಾಂಗ್‌: ಚಿನ್ನಯ್ಯ
ಗೃಹಲಕ್ಷ್ಮಿ ಸ್ಕೀಂನಿಂದ 3.89 ಲಕ್ಷ ಮಂದಿ ಫಲಾನುಭವಿಗಳು ಔಟ್‌