ಸಿಬಿಎಸ್‌ಇ: ಶಕ್ತಿ ರೆಸಿಡೆನ್ಶಿಯಲ್‌ ಸ್ಕೂಲ್‌ಗೆ ಶೇ.99.21 ಫಲಿತಾಂಶ

KannadaprabhaNewsNetwork |  
Published : Apr 18, 2026, 02:45 AM IST
ಪುರುಷೋತ್ತಮ ಗೊರವರ್‌  | Kannada Prabha

ಸಾರಾಂಶ

ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಶೇ.೯೯.೨೧ ಫಲಿತಾಂಶ ದಾಖಲಿಸಿದೆ.

ಮಂಗಳೂರು: ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಶೇ.೯೯.೨೧ ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿರುವ ಒಟ್ಟು ೧೨೭ ವಿದ್ಯಾರ್ಥಿಗಳಲ್ಲಿ ೧೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ೫೦೦ ಅಂಕದಲ್ಲಿ ಪರೀಕ್ಷೆ ಬರೆದಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಲ್ಲಿ ಕೌಸ್ತುಭ ಸೋಮಯಾಜಿ ೪೭೫(ಶೇ.೯೫.೦೦), ಪುರುಷೊತ್ತಮ ಗೋರವರ್ ೪೭೪ (ಶೇ.೯೪.೮), ಶ್ರೀನಿಧಿ ೪೬೮(ಶೇ.೯೩.೬), ತಮೀಶ್ ಡಿ.ಎಂ. ೪೬೬(ಶೇ.೯೩.೨), ಪ್ರಭಾಸ್ ೪೬೬ (ಶೇ.೯೩.೨), ಆದ್ಯತಾ ಬಿ.ಎಸ್. ೪೬೫(ಶೇ.೯೩), ಮನಸ್ವಿ ಎ.ಆರ್. ೪೬೫ (ಶೇ.೯೩), ನಿಖಿಲ್ ಮೋಹನ್ ಪಾಟೀಲ್ ೪೬೫ (ಶೇ.೯೩), ಸಹನಾ ಸುನಿಲ್ ಜೋಶಿ ೪೬೫ (ಶೇ.೯೩), ನಯನ್ ಜೆ. ರೆಡ್ಡಿ ೪೫೯ (ಶೇ.೯೧.೮), ತುಷಾಂತ್ ಪಿ. ೪೫೮ (ಶೇ.೯೧.೬), ಸ್ವರೀತ ಬಪ್ಪಲಿಗೆ ೪೫೬ (ಶೇ.೯೧.೨), ವಂಶಿ ಕೃಷ್ಣ ೪೫೪ (ಶೇ. ೯೦.೮), ಅಮೀಷ್ ಭಾರದ್ವಜ್ ೪೫೩ (ಶೇ.೯೦.೬), ಪ್ರಫುಲ್ ೪೫೧ (ಶೇ.೯೦.೨), ಸಚಿನ್ ಪತ್ತರ್ ೪೫೧ (ಶೇ.೯೦.೨) ಅಂಕಗಳನ್ನು ಗಳಿಸಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ೨೮ ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ ೭೬ ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ ೨೨ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ತೇರ್ಗಡೆಯಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಆಡಳಿತಾಧಿಕಾರಿ ಡಾ.ಕೆ.ಸಿ. ನಾಯ್ಕ್‌, ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಸುರೇಖಾ ಭಟ್ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ
ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ