ರಾ.ಹೆ. ಚತುಷ್ಪಥ ಕಾಮಗಾರಿ: ಸ್ಫೋಟದಿಂದ ಮನೆಗಳು ಬಿರುಕು

KannadaprabhaNewsNetwork |  
Published : Apr 18, 2026, 02:45 AM IST
ಉಪವಿಭಾಗಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಸೋಮವಾರದಂದು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸಂದರ್ಭ ಗುತ್ತಿಗೆದಾರ ಕಂಪನಿಯು ಕಲ್ಲುಗಳನ್ನು ಸ್ಫೋಟಕ ಬಳಸಿ ಸ್ಫೋಟಿಸಿದರಿಂದ ನೀರಕಟ್ಟೆ ಎಂಬಲ್ಲಿ ಸುಮಾರು 60 ಮನೆಗಳು ಬಿರುಕು ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವ್ಯಕ್ತಗೊಂಡ ಪ್ರತಿಭಟನೆಯ ಕಾರಣಕ್ಕೆ ಬಂಡೆಕಲ್ಲು ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಸಂದರ್ಭ ಗುತ್ತಿಗೆದಾರ ಕಂಪನಿಯು ಕಲ್ಲುಗಳನ್ನು ಸ್ಫೋಟಕ ಬಳಸಿ ಸ್ಫೋಟಿಸಿದರಿಂದ ನೀರಕಟ್ಟೆ ಎಂಬಲ್ಲಿ ಸುಮಾರು 60 ಮನೆಗಳು ಬಿರುಕು ಬಿಟ್ಟಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವ್ಯಕ್ತಗೊಂಡ ಪ್ರತಿಭಟನೆಯ ಕಾರಣಕ್ಕೆ ಬಂಡೆಕಲ್ಲು ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಸೇರಿದಂತೆ ಅಧಿಕಾರಿಗಳ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳೀಯ ಜನರು ಅನುಭವಿಸುವ ಸಮಸ್ಯೆಗೆ ಪರಿಹಾರ ಕಲ್ಪಿಸದೇ ಯಾವುದೇ ಕಾರಣಕ್ಕೂ ಇಲ್ಲಿ ಕಲ್ಲುಗಳನ್ನು ಸ್ಫೋಟಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳಲ್ಲಿ ಆಗ್ರಹಿಸಿದರು. ಸ್ಥಳ ಪರಿಶೀಲನೆ ನಡೆಸಿ ಬಜತ್ತೂರು ಗ್ರಾ.ಪಂ.ನಲ್ಲಿ ಸಭೆ ನಡೆಸಿದ ಅಧಿಕಾರಿಗಳ ತಂಡವು 15 ದಿವಸಗಳೊಳಗೆ ಸಮಸ್ಯೆಕ್ಕೀಡಾದ ಎಲ್ಲಾ ಮನೆಗಳಿಗೆ ಎಂಜಿನಿಯರ್‌ಗಳನ್ನು ಕಳಿಸಿ ಹಾನಿಗೊಳಗಾದ ಬಗ್ಗೆ ಎಸ್ಟಿಮೇಟ್ ತಯಾರಿಸಿ, ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಮುಂದಕ್ಕೆ ಪರಿಸರದ ಮನೆಗಳಿಗೆ ಹಾನಿಯಾಗದಂತೆ ಸಣ್ಣ ಸ್ಫೋಟಕಗಳನ್ನು ಬಳಸಿ ಬಂಡೆ ಒಡೆಯುವ ಕೆಲಸ ಮಾಡಲಾಗುವುದು ಎಂದು ಅಧಿಕಾರಿಗಳ ತಂಡ ಈ ಸಂದರ್ಭ ಭರವಸೆ ನೀಡಿತು.ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ನೇತೃತ್ವದ ಅಧಿಕಾರಿಗಳ ತಂಡದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಖ್ತರ್, ಭೂ ವಿಜ್ಞಾನಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಗ್ರಾ.ಪಂ. ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳು ಇದ್ದರು. ರೈತಸಂಘದ ಮುಂದಾಳು ಅಲಿಮಾರ ರೂಪೇಶ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್, ಪದಾಧಿಕಾರಿಗಳಾದ ಇಬ್ರಾಹೀಂ ಕಲೀಲ್, ಇಸಾಕ್ ಮಠ, ಪುಚ್ಚ ತಡಕ, ರಫೀಕ್, ಸೀಯಾಕ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ
ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ