ಕನ್ನಡಪ್ರಭ ವಾರ್ತೆ ಹರಿಹರ
ಪ್ರಗತಿಪರ ಚಿಂತಕರು, ಸಾಹಿತಿಗಳು, ಕ್ರೀಡಾಪಟುಗಳು, ರಾಜಕೀಯ ಧುರೀಣರು, ಶಾಮನೂರು ರವರ ಅಭಿಮಾನಿಗಳು ಭಾಗವಹಿಸಿ, ಶಾಮನೂರು ಶಿವಶಂಕರಪ್ಪನವರ ಸಾಧನೆ, ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು.
ಶಾಮನೂರು ಶಿವಶಂಕರಪ್ಪ ಅವರು, ಓದಿದ್ದು ಅಲ್ಪವಾದರೂ ಡಬಲ್ ತ್ರಿಬಲ್ ಡಿಗ್ರಿ ತೆಗೆದುಕೊಂಡ ಪದವೀಧರರಿಗೆ, ಉದ್ಯೋಗ ಕೊಡುವಷ್ಟು ಕ್ರಿಯಾಶೀಲತೆ ಬೆಳೆಸಿಕೊಂಡಿದ್ದರು. ಶುಗರ್ ಫ್ಯಾಕ್ಟರಿ, ರೈಸ್ ಮಿಲ್, ಬ್ಯಾಂಕ್, ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವುದರ ಮೂಲಕ ಸಾವಿರಾರು ಜನಗಳಿಗೆ ಉದ್ಯೋಗ ಕಲ್ಪಿಸಿ ಕೊಟ್ಟು, ಅವರ ಕುಟುಂಬಗಳಿಗೆ ಅನ್ನದಾತರಾಗಿದ್ದರು ಎಂದು ಸ್ಮರಿಸಿದರು.ದೇವಸ್ಥಾನಗಳಿಗೆ, ಸಮಾಜಗಳಿಗೆ, ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಮಾಡಿದ ಆರ್ಥಿಕ ಸಹಾಯಗಳನ್ನು ನೆನಪಿಸಿಕೊಂಡು, ಅವರು ಸಮಾಜದ ಏಕತೆಗಾಗಿ ಶ್ರಮಿಸಿ, ಐಕ್ಯತೆಯನ್ನು ಕಾಪಾಡಿದ್ದು ಶ್ಲಾಘನೀಯ ವೆಂದರು.
ಅವರ ಅಂತಿಮ ದರ್ಶನ ಪಡೆಯಲು ಮಠಾಧೀಶರು, ಬಹುತೇಕ ಎಲ್ಲಾ ರಾಜಕೀಯ ಪಕ್ಷದ ರಾಜಕಾರಣಿಗಳು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲಾ ಸಚಿವರು , ಲಕ್ಷಾಂತರ ಅವರ ಅಭಿಮಾನಿಗಳು ದರ್ಶನ ಪಡೆದಿದ್ದು ನೋಡಿದರೆ, ಅವರು ಅಜಾತಶತ್ರು ಎಂಬುದಕ್ಕೆ ಇದು ದೊಡ್ಡ ಸಾಕ್ಷಿ ಎಂದು ಬಣ್ಣಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಎನ್ ಜಿ ನಾಗನಗೌಡ್ರು ವಹಿಸಿದ್ದರು. ಹಿರಿಯ ಕ್ರೀಡಾಪಟು ಎಚ್.ನಿಜಗುಣ ಮಾತನಾಡಿದರು.
ಪ್ರೊ.ಬಿಕ್ಷಾವರ್ತಿ ಮಠ, ಪ್ರೊ.ಸಿವಿ ಪಾಟೀಲ್, ಪ್ರೊ.ಎಸ್.ಎಚ್.ಪ್ಯಾಟಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎ.ಗೋವಿಂದರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷರಾದ ಶಂಕರ ಖಟ್ವಾಕರ್, ಬಿ ರೇವಣಸಿದ್ದಪ್ಪ, ನಿವೃತ್ತ ಎಸ್‌ಪಿ ರವಿ ನಾರಾಯಣ್, ಎನ್.ರುದ್ರಮನಿ, ಎಚ್‌ಕೆ ಕೊಟ್ರಪ್ಪ, ಎಸ್.ಎಚ್.ಹೂಗಾರ್, ಡಿ.ಎಂ.ಮಂಜುನಾಥಯ್ಯ, ಎ.ರಿಯಾಜ್ ಅಹ್ಮದ್, ಬಿ.ಬಿ.ರೇವಣ್ಣ ನಾಯಕ್, ಡಾ.ಜಗನ್ನಾಥ್, ರೇವಣಸಿದ್ದಪ್ಪ ಅಂಗಡಿ, ಕೆ.ಬಿ.ರಾಜಶೇಖರ್, ವೈ.ಕೃಷ್ಣಮೂರ್ತಿ, ಚಂದ್ರಶೇಖರಪ್ಪ ಗುಂಡೇರಿ, ಶ್ರೀನಿವಾಸ್ ಕಲಾಲ್, ಮಧು ನಿಡಗಲ್, ಎಸ್.ಹನುಮಂತಪ್ಪ, ಸಂತೋಷ್, ರವೀಂದ್ರನಾಥ್, ಅಜಿತ್ ಸಾವಂತ್, ಕಾಂತರಾಜ್, ಮಂಜುನಾಥ್, ವೀರಣ್ಣ, ವೀರಯ್ಯ, ಪ್ರವೀಣ್, ಪ್ರವೀಣ್, ಶಿವಕುಮಾರ್, ಪೈಲ್ವಾನ್ ಆನಂದ್ ಗೌಡ, ಶಂಕರ್ ಮೂರ್ತಿ, ಪೈಲ್ವಾನ್ ಸದಾಶಿವ, ವೀರಣ್ಣ ಅಗಡಿ, ಗಂಗಾಧರ ಕೊಟಗಿ, ಮಂಜುನಾಥ ಅಗಡಿ, ಸನಾವುಲ್ಲಾ, ಫೈರೋಜ್, ಸನಾವುಲ್ಲ, ನಾಗರಾಜ್, ಜಿಗಳಿ ಪ್ರಕಾಶ್, ಕತ್ತಿಗೆ ಪರಮೇಶ್ವರಪ್ಪ, ಕೊಟ್ರೇಶಪ್ಪ, ಮುದ್ದುಮ್, ಅಬ್ದುಲ್ ಖಯ್ಯಮ್ ಇತರರು ಹಾಜರಿದ್ದರು.