ಗಾಣಿಗ ಸಮುದಾಯದಿಂದ ಶನಿದೇವರ ವೈಭವದ ಉತ್ಸವ

KannadaprabhaNewsNetwork |  
Published : Sep 01, 2024, 01:48 AM ISTUpdated : Sep 01, 2024, 01:49 AM IST
31ಎಚ್ಎಸ್ಎನ್7 :  | Kannada Prabha

ಸಾರಾಂಶ

ಚನ್ನರಾಯಪಟ್ಟಣದ ಬಾಗೂರು ರಸ್ತೆಯಿಂದ ಪ್ರಾರಂಭಗೊಂಡ ಶನಿದೇವರ ಮೂರ್ತಿ ಹೊತ್ತ ಬೆಳ್ಳಿರಥ ಕೆ. ಆರ್‌. ವೃತ್ತ, ಹಳೇ ಬಸ್‌ನಿಲ್ದಾಣ, ಆಂಜನೇಯಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕೋಟೆ ಬೀದಿ, ಹೊಸ ಬಸ್ ನಿಲ್ದಾಣದ ವರೆಗೆ ಚಂಡೆ, ವಾದ್ಯಗೋಷ್ಠಿ, ಮಹಿಳೆಯರಿಂದ ಭದ್ರಕಾಳಿ, ವೀರಭದ್ರನ ಕುಣಿತ, ಲಂಬಾಣಿ ಕುಣಿತ, ಚಂಡೆವಾದ್ಯ, ಮಂಗಳವಾದ್ಯದೊಂದಿಗೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು. ಗಾಣಿಗರ ಶ್ರೀ ಶನಿದೇವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ಶ್ರೀ ಶನಿದೇವರ ವೈಭವದ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಗಾಣಿಗರ ಶ್ರೀ ಶನಿದೇವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ಶ್ರೀ ಶನಿದೇವರ ವೈಭವದ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಪಟ್ಟಣದ ಬಾಗೂರು ರಸ್ತೆಯಿಂದ ಪ್ರಾರಂಭಗೊಂಡ ಶನಿದೇವರ ಮೂರ್ತಿ ಹೊತ್ತ ಬೆಳ್ಳಿರಥ ಕೆ. ಆರ್‌. ವೃತ್ತ, ಹಳೇ ಬಸ್‌ನಿಲ್ದಾಣ, ಆಂಜನೇಯಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕೋಟೆ ಬೀದಿ, ಹೊಸ ಬಸ್ ನಿಲ್ದಾಣದ ವರೆಗೆ ಚಂಡೆ, ವಾದ್ಯಗೋಷ್ಠಿ, ಮಹಿಳೆಯರಿಂದ ಭದ್ರಕಾಳಿ, ವೀರಭದ್ರನ ಕುಣಿತ, ಲಂಬಾಣಿ ಕುಣಿತ, ಚಂಡೆವಾದ್ಯ, ಮಂಗಳವಾದ್ಯದೊಂದಿಗೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು.

ಗಾಣಿಗ ಸಮಾಜದ ಕಾರ್ಯದರ್ಶಿ ಬ್ರೆಡ್ ರಾಜಣ್ಣ ಮಾತನಾಡಿ, ರಾಣೆಬೆನ್ನೂರಿನ ಕಣ್ಣನೂರು ಪಂದರಿನಾಥರವರ ಬೆಳ್ಳಿ ರಥದಲ್ಲಿ ಶ್ರೀಸ್ವಾಮಿರವರ ವೈಭವದ ಉತ್ಸವ ನಡೆಸಲಾಗುತ್ತಿದ್ದು, ಇಂದು ಕಡೇ ಶ್ರಾವಣ ಶನಿವಾರ ನಿಮಿತ್ತ ಇಂದು ನಮ್ಮ ಗಾಣಿಗ ಸಮಾಜದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸ.೧ರಂದು ಭಾನುವಾರ ೧೨.೩೦ಕ್ಕೆ ಶನಿದೇವರ ದೇವಸ್ಥಾನದ ಮುಂಭಾಗ ಮಹಾ ಅನ್ನದಾನ ಏರ್ಪಡಿಸಲಾಗಿತ್ತು. ಪಟ್ಟಣದ ಶನಿದೇವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಗಾಣಿಗ ಸಮಾಜದ ಅಧ್ಯಕ್ಷ ಸ್ವಾಮಿ, ಖಜಾಂಚಿ ಗಿರೀಶ್, ಪುರಸಭಾ ಸದಸ್ಯೆ ಕವಿತಾ ರಾಜಣ್ಣ, ಗಾಣಿಗ ಸಮಾಜದ ಮುಖಂಡರಾದ ಶಾಂತರಾಜ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!