೨೦ರಿಂದ ಶಂಕರ ಪಂಚಮಿ ಉತ್ಸವ: ಜಿ.ಕೆ. ಹೆಗಡೆ

KannadaprabhaNewsNetwork |  
Published : Apr 17, 2026, 02:45 AM IST
ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವಮಠದಲ್ಲಿ ಶಂಕರಪಂಚಮಿ ಉತ್ಸವ ಆಮಂತ್ರಣ ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ಏ. ೨೦ರಿಂದ ೨೨ ರವರೆಗೆ ೧೪ನೇ ಶಂಕರ ಪಂಚಮಿ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠದಲ್ಲಿ ಬ್ರಹ್ಮೀಭೂತ ಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಕಾಲದಿಂದಲೂ ಶಂಕರ ಜಯಂತಿ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಭಾನ್ಕುಳಿಮಠದ ಆಡಳಿತವನ್ನು ಶ್ರೀ ರಾಮಚಂದ್ರಾಪುರಮಠ ವಹಿಸಿಕೊಂಡ ನಂತರ ಶಂಕರ ಜಯಂತಿ ಇಲ್ಲಿಯ ಮೊದಲನೆ ಹಬ್ಬವಾಗಿತ್ತು. ಹೀಗೆ ಅನೂಚಾನವಾಗಿ ಈ ನೆಲವು ಶಂಕರರ ಸ್ಮೃತಿಯಲ್ಲಿ ಕಾರ್ಯ ಮಾಡುತ್ತಿದ್ದು ಇದೀಗ ಇಲ್ಲಿ ಏ. ೨೦ರಿಂದ ೨೨ ರವರೆಗೆ ೧೪ನೇ ಶಂಕರ ಪಂಚಮಿ ಉತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಮಾರ್ಗದರ್ಶಕ ಜಿ.ಕೆ. ಹೆಗಡೆ ಗೋಳಗೋಡ ಹೇಳಿದರು.

ಭಾನ್ಕುಳಿ ಶ್ರೀರಾಮದೇವ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಮಿತಿಯ ಪ್ರಧಾನ ಸಂಯೋಜಕ ಆರ್.ಎಸ್. ಹೆಗಡೆ ಹರಗಿ ಮಾತನಾಡಿ, ೨೦ರಂದು ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿಪುಣ್ಯಾಹ, ದೇವನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಗೋಪೂಜೆ, ಶ್ರೀ ಮಹಾಗಣಪತಿ ಹವನ, ಶ್ರೀ ರಾಮತಾರಕ ಹವನ, ಕುಂಕುಮಾರ್ಚನೆ, ಮಾತೆಯರಿಂದ ಉಡಿಸೇವೆ ನಡೆಯಲಿದೆ. ಯಜುರ್ವೇದ ಪಾರಾಯಣ ಹಾಗೂ ಭಾಷ್ಯ ಪಾರಾಯಣ ಆರಂಭಗೊಳ್ಳಲಿದೆ. ಸಂಜೆ ರಾಘವೇಶ್ವರಭಾರತೀ ಶ್ರೀಗಳ ಪುರಪ್ರವೇಶ ನಡೆಯಲಿದೆ ಎಂದರು.

ಏ.೨೧ ರಂದು ಶ್ರೀಕರಾರ್ಚಿತ ಪೂಜೆ, ಪಂಚಾಯತನ ಹವನ, ಕುಂಕುಮಾರ್ಚನೆ, ಮಾತೆಯರಿಂದ ಉಡಿಸೇವೆ, ಸಾಯಂಕಾಲ ಶ್ರೀ ಮಹಾಪಾದುಕಾ ಪೂಜೆ, ರಾಘವೇಶ್ವರಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಉದಕಶಾಂತಿ ಪಾರಾಯಣ ನಡೆಯಲಿದೆ ಎಂದರು. ತಾಲೂಕಿನಾದ್ಯಂತ ಅಡಕೆ ತೋಟಕ್ಕೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಈ ಕುರಿತು ನಿರ್ದಿಷ್ಟ ಔಷಧ ಕಂಡುಹಿಡಿಯಲಾಗಲಿಲ್ಲ. ಈ ಹಿನ್ನೆಲೆ ಶ್ರೀಮಠವು ಸಂಶೋಧನೆಗೆ ಮುಂದಾಗಿದೆ. ಘನವಿದ್ವಾಂಸರಾದ ಸುಚೇತನ ಘನಪಾಠಿಗಳು ಹಾಗೂ ಶಂಕರನಾರಾಯಣ ಜೋಶಿಯವರ ಮಾರ್ಗದರ್ಶನದಂತೆ ಎಲೆಚುಕ್ಕಿ ರೋಗ ನಿವಾರಣಾರ್ಥ ಧಾರ್ಮಿಕ ಕಾರ್ಯಕ್ರಮವಾಗಿ ಏ.೨೨ರಂದು ಆವಹಂತೀ ಹವನ ನಡೆಯಲಿದೆ. ಯಜುರ್ವೇದ ಪಾರಾಯಣ ಹಾಗೂ ಭಾಷ್ಯ ಪಾರಾಯಣ ಮುಕ್ತಾಯ, ವಿರಾಟ್ ಗೋಪೂಜೆ, ಗೋಸೂಕ್ತ ಪಾರಾಯಣ, ಗೋದತ್ತು ಸ್ವೀಕಾರ, ಮಾತೃತ್ವಮ್ ಸಮಾವೇಶ, ಧರ್ಮಸಭೆ, ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ಆಶೀರ್ವಚನ, ಅನುಗ್ರಹ ಮಂತ್ರಾಕ್ಷತೆ, ಸಂಜೆ ಗೋದೀಪೋತ್ಸವ ಜರುಗಲಿದೆ ಎಂದು ವಿವರಿಸಿದರು. ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ ಭಟ್ಟ ಚಟ್ನಳ್ಳಿ ಮಾತನಾಡಿದರು. ಶ್ರೀಮಠ ಸಮಿತಿಯ ಕೋಶಾಧ್ಯಕ್ಷ ಎಂ.ಎಂ. ಹೆಗಡೆ ಮಗೇಗಾರ, ಸಂಯೋಜಕ ಜಿ.ಎಸ್. ಭಟ್ಟ ಕಲ್ಲಾಳ, ಗೋಸ್ವರ್ಗ ಕಾರ್ಯದರ್ಶಿ ಎಂ.ವಿ. ಹೆಗಡೆ ಮುತ್ತಿಗೆ, ಕಾರ್ಯಾಲಯ ಕಾರ್ಯದರ್ಶಿ ಚಂದನ ಶಾಸ್ತ್ರಿ, ಸಂಯೋಜಕ ರಾಘವೇಂದ್ರ ಮುಸವಳ್ಳಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಯ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಲಿ
ಐದು ವರ್ಷ ತಂದೆಯೇ ರಾಜ್ಯ ಮುುನ್ನಡೆಸಲಿ