ಶಂಕರ, ರಾಮಾನುಜರ ಸಂದೇಶಗಳು ಸಮಾಜಕ್ಕೆ ಮಾದರಿ: ಟಿ.ಎಸ್.ಶ್ರೀವತ್ಸ

KannadaprabhaNewsNetwork |  
Published : May 13, 2024, 12:01 AM IST
33 | Kannada Prabha

ಸಾರಾಂಶ

ಹಿಂದೂ ಧರ್ಮವನ್ನು ಪುನರತ್ಥಾನಗೊಳಿಸಿದ ಶಂಕರರು ಸಹಸ್ರಾಮಾನದ ಹಿಂದೆಯೇ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜರು ಇಬ್ಬರು ಮಹನೀಯರ ಧ್ಯೇಯ ಸಿದ್ಧಾಂತಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದೆ. ಧಾರ್ಮಿಕ ಆಧ್ಯಾತ್ಮಿಕವಲ್ಲದೇ ಸಾಂಸ್ಕೃತಿಕ ವೈಜ್ಞಾನಿಕವಾಗಿಯೂ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಬಿಜೆಪಿ ಕಚೇರಿಯಲ್ಲಿ ಆದಿ ಜಗದ್ಗುರು ಶ್ರೀಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ಆಚರಿಸಲಾಯಿತು.

ಜಗದ್ಗುರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, ಶಂಕರಾಚಾರ್ಯರು 1236 ವರ್ಷಗಳ ಹಿಂದೆಯೇ ಜನಿಸಿ ಹಿಂದೂ ಧರ್ಮದ ಉಳಿವಿಗಾಗಿ ಭಾರತವನ್ನು ಕಾಲ್ನಡಿಗೆಯಲ್ಲಿ 3 ಬಾರಿ ಪರ್ಯಟನೆ ಮಾಡಿ 4 ಪೀಠಗಳನ್ನ ಸ್ಥಾಪಿಸಿದ್ದಾರೆ.

ಹಿಂದೂ ಧರ್ಮವನ್ನು ಪುನರತ್ಥಾನಗೊಳಿಸಿದ ಶಂಕರರು ಸಹಸ್ರಾಮಾನದ ಹಿಂದೆಯೇ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜರು ಇಬ್ಬರು ಮಹನೀಯರ ಧ್ಯೇಯ ಸಿದ್ಧಾಂತಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಧಾರ್ಮಿಕ ಆಧ್ಯಾತ್ಮಿಕವಲ್ಲದೇ ಸಾಂಸ್ಕೃತಿಕ ವೈಜ್ಞಾನಿಕವಾಗಿಯೂ ಹಲವು ಕೊಡುಗೆಗಳನ್ನು ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಶಂಕರ ಜಯಂತಿಯನ್ನು ವಿಶ್ವ ತತ್ವಜ್ಞಾನಿ ದಿನಾಚರಣೆ ಎಂದು ಘೋಷಿಸಿದ್ದಾಗಿ ಅವರು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಶಂಕರಾಚಾರ್ಯರು ಕೇವಲ 32ವರ್ಷಗಳಿದ್ದರೂ ಕೂಡ ಅವರು ಹಿಂದೂ ಧರ್ಮವನ್ನು ದೇಶದೆಲ್ಲಡೆ ಪ್ರಜ್ವಲಿಸಿದರು, ಇಂದಿಗೂ‌ ಸಹ ಶಂಕರ ತತ್ವಗಳು‌ ಯುವ ಮನಸ್ಸುಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದೆ ಎಂದರು.

ಮೈಲಾಕ್ ಮಾಜಿ ಅಧ್ಯಕ್ಷ ಎನ್.ವಿ. ಫಣೀಶ್‌, ಮಾಜಿ ಮೇಯರ್‌ ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ಗಿರಿಧರ್, ಕೇಬಲ್ ಮಹೇಶ್, ಗೋಪಾಲ್ ರಾವ್, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಬಿ.ವಿ. ಮಂಜುನಾಥ್‌, ಚಾಮುಂಡೇಶ್ವರಿ ಕ್ಷೇತ್ರದ ನಗರಾಧ್ಯಕ್ಷ ರಾಕೇಶ್ ಭಟ್, ಮಂಡಲ ಅಧ್ಯಕ್ಷ ಪೈ. ಟಿ. ರವಿ, ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ, ಎಸ್ಸಿ ಮೊರ್ಚಾ ಅಧ್ಯಕ್ಷ ವಿ. ಶೈಲೇಂದ್ರ, ಅಜಯ್ ಶಾಸ್ತ್ರಿ, ಕೆ.ಎಂ. ನಿಶಾಂತ್, ಎಂಡಿಎ ಮಾಜಿ ಸದಸ್ಯ ನವೀನ್ ಕುಮಾರ್, ಜಗದೀಶ್, ಎಂ.ಆರ್. ಬಾಲಕೃಷ್ಣ ಮೊದಲಾದವರು ಇದ್ದರು.ಜಿಲ್ಲಾಡಳಿತದಿಂದ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

ಮೈಸೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಶ್ರೀಶಂಕರಾಚಾರ್ಯರ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಅವರು ಶ್ರೀಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಣೆ ಮೂಲಕ ನಮಿಸಿದರು.ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಸಮುದಾಯದ ಮುಖಂಡರಾದ ಗೋಪಾಲ ರಾವ್, ಬಾಲಕೃಷ್ಣ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಅರವಿಂದ ಶರ್ಮ, ಮಂಜುನಾಥ್, ಹರೀಶ್, ಸುಚೀಂದ್ರ, ನಾಗಶ್ರೀ, ಪ್ರಶಾಂತ್, ರಂಗನಾಥ್, ನಾಗರಾಜ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ