ಹಿಂದುಗಳನ್ನು ಜಾಗೃತಿ ಗೊಳಿಸಿದ ಶಂಕರಾಚಾರ್ಯ, ರಾಮಾನುಜರು: ವಿಕ್ರಂ ಅಯ್ಯಂಗಾರ್

KannadaprabhaNewsNetwork |  
Published : May 06, 2025, 12:21 AM IST
37 | Kannada Prabha

ಸಾರಾಂಶ

ಶಂಕರಾಚಾರ್ಯರು ಆದಿಶಂಕರ ಎಂದೆ ಗುರುತಿಸಲ್ಪಟ್ಟವರು ಏಳನೇ ವಯಸ್ಸಿನಲ್ಲಿ ವೇದಗಳ ಅಧ್ಯಯನಕ್ಕಾಗಿ ಮನೆ ಬಿಟ್ಟು ಹೊರಟ ಶ್ರೀ ಶಂಕರರು ಅದ್ವೈತ ಸಿದ್ದಾಂತ ಪ್ರತಿಪಾದಿಸಿದರು. ಶ್ರೀ ಪೆರಂದೂರ್ ನಲ್ಲಿ ಜನಿಸಿದ ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತ ಸಾರಿದರು.

ಕನ್ನಡಪ್ರಭ ವಾರ್ತೆ ಮೈಸೂರುಹಿಂದುತ್ವ ಅವನತಿ ಕಡೆ ಸಾಗುತ್ತಿರುವಾಗ ತಮ್ಮ ತತ್ತ್ವ ಸಂದೇಶಗಳ ಮೂಲಕ ಹಿಂದುಗಳನ್ನು ಜಾಗೃತಿ ಗೊಳಿಸಿದ ಶ್ರೀ ಶಂಕರಾಚಾರ್ಯರು, ರಾಮಾನುಜಾಚಾರ್ಯರು ತಮ್ಮದೇ ಆದ ದಾರ್ಶನಿಕತೆ ಕಟ್ಟಿಕೊಟ್ಟ ದೈವಾಂಶ ಸಂಭೂತರು ಎಂದು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.ನಗರದ ಸರಸ್ವತಿಪುರಂ ಪಂಪಾಪತಿ ರಸ್ತೆಯ ಸಾನಿಧ್ಯ ವೃದ್ಧಾಶ್ರಮದಲ್ಲಿ ಎಸ್. ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನಸಿ ಸಾಮಗ್ರಿ, ಹಣ್ಣು ಹಂಪಲು ವಿತರಿಸಿ ಮಾತನಾಡಿದರು. ಶಂಕರಾಚಾರ್ಯರು ಆದಿಶಂಕರ ಎಂದೆ ಗುರುತಿಸಲ್ಪಟ್ಟವರು ಏಳನೇ ವಯಸ್ಸಿನಲ್ಲಿ ವೇದಗಳ ಅಧ್ಯಯನಕ್ಕಾಗಿ ಮನೆ ಬಿಟ್ಟು ಹೊರಟ ಶ್ರೀ ಶಂಕರರು ಅದ್ವೈತ ಸಿದ್ದಾಂತ ಪ್ರತಿಪಾದಿಸಿದರು. ಶ್ರೀ ಪೆರಂದೂರ್ ನಲ್ಲಿ ಜನಿಸಿದ ಶ್ರೀ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತ ಸಾರಿದರು. ಈ ಇಬ್ಬರು ಮಹನೀಯರು ತಮ್ಮ ಕಾಲಾವಧಿಯಲ್ಲಿ ಹಿಂದೂ ಧರ್ಮಕ್ಕಾಗಿ ಲೋಕ ಸಂಚಾರ ಮಾಡಿದ್ದಾಗಿ ಅವರು ಹೇಳಿದರು.ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ,ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಸಾನಿಧ್ಯ ವೃದ್ಧಾಶ್ರಮದ ಚಂದ್ರಶೇಖರ್, ಭುವನೇಶ್ವರಿ, ಗಾಯಕ ಯಶ್ವಂತ್ ಕುಮಾರ್, ಛಾಯಾ, ಹಿರಿಯ ಕ್ರೀಡಾಪಟು ಮಹಾದೇವ್, ಕ್ರೀಡಾ ತರಬೇತಿದಾರ ಜಗದೀಶ್, ಮಹೇಶ್, ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ಎಸ್‌. ಹರ್ಷಿತ್, ನಾಗೇಶ್, ದತ್ತ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ