ಹಿಂದೂ ಸಂಸ್ಕೃತಿ ಪುನರುಜ್ಜೀವನಗೊಳಿಸಿದ ಶಂಕರಾಚಾರ್ಯರು

KannadaprabhaNewsNetwork |  
Published : May 15, 2024, 01:36 AM IST
13ಕೆಆರ್ ಎಂಎನ್ 2.ಜೆಪಿಜಿರಾಮನಗರದ ಶ್ರೀ ಶಂಕರ ಸೇವಾ ಟ್ರಸ್ಟ್ ನಲ್ಲಿ  ಶ್ರೀ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವರು ಶಂಕರಾಚಾರ್ಯರು ಎಂದು ಶೇಷಾದ್ರಿ ಅಯ್ಯರ್ ಹೇಳಿದರು.

ರಾಮನಗರ: ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವರು ಶಂಕರಾಚಾರ್ಯರು ಎಂದು ಶೇಷಾದ್ರಿ ಅಯ್ಯರ್ ಹೇಳಿದರು.

ನಗರದ ಶ್ರೀ ಶಂಕರ ಸೇವಾ ಟ್ರಸ್ಟ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಚೀನ ಭಾರತೀಯ ಉಪನಿಷತ್ತುಗಳ ತತ್ವಗಳು ಮತ್ತು ಹಿಂದೂ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಶ್ರೀ ಆದಿ ಶಂಕರಾಚಾರ್ಯರು ಶ್ರಮಿಸಿದರು. ಅದ್ವೈಂತ ಸಿದ್ಧಾಂತ ಸ್ಥಾಪಿಸಿದರು. ಶತಮಾನಗಳಿಂದ ಪಂಡಿತರು ಧರ್ಮಗ್ರಂಥಗಳ ಹೆಸರಿನಲ್ಲಿ ಜನರಿಗೆ ನೀಡುತ್ತಿದ್ದ ತಪ್ಪು ಶಿಕ್ಷಣದ ಬದಲಾಗಿ ಸರಿಯಾದ ಶಿಕ್ಷಣ ನೀಡುವ ಕೆಲಸವನ್ನು ಆದಿ ಶಂಕರಾಚಾರ್ಯರು ಮಾಡಿದರು ಎಂದರು.

ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ಸನ್ಯಾಸಿಯಾದರು. ಅವರು ಕೇವಲ 32 ನೇ ವಯಸ್ಸಿನಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಶ್ರೀ ಆದಿಗುರು ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪ್ರಚಾರ ಮಾಡಲು ಉತ್ತರದಲ್ಲಿ ಬದರಿಕಾಶ್ರಮದ ಜ್ಯೋತಿರ್ಮಠ, ಪಶ್ಚಿಮದಲ್ಲಿ ದ್ವಾರಕಾದಲ್ಲಿರುವ ಶಾರದಾ ಮಠ, ಪೂರ್ವದಲ್ಲಿ ಜಗನ್ನಾಥಪುರಿಯಲ್ಲಿರುವ ಗೋವರ್ಧನ ಮಠ ಮತ್ತು ದಕ್ಷಿಣದಲ್ಲಿ ಶೃಂಗೇರಿ ಮಠಗಳನ್ನು 4 ದಿಕ್ಕುಗಳಲ್ಲಿ ಸ್ಥಾಪಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಶ್ರೀ ಶಂಕರ ಸೇವಾ ಟ್ರಸ್ಟಿನ ಕೆ.ಸತ್ಯ ನಾರಾಯಣ, ಜೆ. ಶೇಷಗಿರಿ ರಾವ್, ಗಣೇಶ್ ರಾವ್, ಜಯರಾಂ, ಕೇಶವ ಮೂರ್ತಿ ಹಾಗೂ ಇತರರು ಉಪ್ಥಿತರಿದ್ದರು.13ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಶ್ರೀ ಶಂಕರ ಸೇವಾ ಟ್ರಸ್ಟ್ ನಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ