ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಶಂಕರಾಚಾರ್ಯ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿದ ವಿವಿಧ ಧರ್ಮಗಳನ್ನೊಳಗೊಂಡ ಬೃಹತ್ ದೇಶವಾಗಿದ್ದು, ದೇಶದ ಸಂಪ್ರದಾಯ ಉಳಿಸುವಲ್ಲಿ ಅನೇಕ ಸಂತ ಮಹಾಂತರು ಆಯಾ ಕಾಲಕ್ಕೆ ನಿರಂತರವಾಗಿ ಪರಿಶ್ರಮಿಸಿರುವುದು ದೇಶದ ಹಿರಿಮೆಯಾಗಿದೆ ಎಂದು ಹೇಳಿದರು.
ಅತುಲ್ ದೇಶಪಾಂಡೆ ಮಾತನಾಡಿ, ಸನಾತನ ಧರ್ಮ ಪ್ರತಿಪಾದಕರಾದ ಶಂಕರಾಚಾರ್ಯರು ದೇಶದ ಪೂರ್ವ ದಿಕ್ಕಿಗೆ ದ್ವಾರಕಾ, ದಕ್ಷಿಣಕ್ಕೆ ಕಂಚಿ, ಉತ್ತರಕ್ಕೆ ಬದರಿನಾಥ, ಪಶ್ಚಿಮಕ್ಕೆ ಜಗನ್ನಾಥಪುರಿ ಪೀಠಗಳನ್ನು ಸ್ಥಾಪಿಸಿ, ಅದ್ವೈತ ಸಿದ್ಧಾಂತವನ್ನು ದೇಶದ ಮೂಲೆಮೂಲೆಗಳಲ್ಲಿಯೂ ಪಸರಿಸಿದ ಮಹಾತ್ಮ ಎಂದರು. ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿ ಮಹಾದೇವ ಯಲ್ಲಟ್ಟಿ, ಶಂಕರ ಕಡಕೋಳ ಹಾಗೂ ಹಿರಿಯರಾದ ಗಿರೀಶ ದೇಶಪಾಂಡೆ, ರಮೇಶ ಬೆಳಗಲಿ, ರಾಮ ಜೋಶಿ, ತಿರುಪತಿ ಜೋಶಿ, ಉದಯ ಬೆಳಗಲಿ, ಗಿರೀಶ ಕುಲಕರ್ಣಿ, ಅಮಿತ ಪಾರಗಾಂವಕರ ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.