ಸಿದ್ದಾಪುರ: ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ಶಂಕರಪಂಚಮಿ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭಗೊಂಡಿದೆ.
ಚಂಡೀಹವನದ ಪಾರಾಯಣ, ಯಜುರ್ವೇದ ಹವನದ ಪಾರಾಯಣ, ಭಾಷ್ಯ ಹವನದ ಪಾರಾಯಣಗಳು ಆರಂಭಗೊಂಡವು. ಮಧ್ಯಾಹ್ನ ಹವ್ಯಕ ಸಮುದಾಯದಲ್ಲಿ ಮಂಗಳ ಕಾರ್ಯಗಳ ಸಂದರ್ಭದಲ್ಲಿ ನಡೆಸಲಾಗುವ ದೊನ್ನೆ ಬಾಳೆ(ಊಟಕ್ಕೆ ಬಾಳೆ ಎಲೆಗಳ ಸಿದ್ಧತೆ, ದೊನ್ನೆಗಳ ತಯಾರಿಕೆ) ಎನ್ನುವ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶನಿವಾರ ಶ್ರೀರಾಮದೇವ ಮಠದ ವಾರ್ಷಿಕೋತ್ಸವ, ಬಿಳಗಿ ಸೀಮಾ ವತಿಯಿಂದ ಗುರುಭೀಕ್ಷಾ ಸೇವೆ ನಡೆಯುವುದು. ರಾಮತಾರಕ ಹವನ, ಚಂಡೀಹವನ, ಪುರುಷಸೂಕ್ತ ಹವನ, ಆದಿತ್ಯ ಹವನ, ಕುಂಕುಮಾರ್ಚನೆ, ಗೋಸೀಮಂತ ಕಾರ್ಯಕ್ರಮ ನಡೆಯಲಿದೆ.ನಂತರ ಗೋಪಾಲ ಗೌರವ, ಗೋಸ್ವರ್ಗದ ದಾನಿಗಳಿಗೆ ದಾನಮಾನ ಕಾರ್ಯಕ್ರಮ ಜರುಗುವುದು. ಸಂಜೆ ಗೋಭಾರತ ಸಾಂಸ್ಕೃತಿಕ ಕಾರ್ಯಕ್ರಮ, ಗೋಸ್ವರ್ಗದಲ್ಲಿ ಗೋಗಂಗಾರತಿ ನಡೆಯಲಿದೆ.