14ರಂದು ಶಾಂತವೇರಿ ಗೋಪಾಲಗೌಡ ಜನ್ಮದಿನ ಕಾರ್ಯಕ್ರಮ

KannadaprabhaNewsNetwork | Published : Mar 12, 2024 2:03 AM

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಮಾ.14ರಂದು ಎ.ಟಿ.ಎನ್.ಸಿ. ಕಾಲೇಜಿನ ಚಂದನ ಸಭಾಂಗಣದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಸಾಪ ಅಧ್ಯಕ್ಷ ಡಿ. ಮಂಜುನಾಥ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಮಾ.14ರಂದು ಎ.ಟಿ.ಎನ್.ಸಿ. ಕಾಲೇಜಿನ ಚಂದನ ಸಭಾಂಗಣದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮದಿನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಭಾಗವಹಿಸಲಿದ್ದಾರೆ. ಸಾಹಿತಿ ಪ್ರೊ. ಎಂ.ಬಿ. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಕುವೆಂಪು ವಿ.ವಿ. ಸಿಂಡಿಕೇಟ್ ಸದಸ್ಯರಾದ ಡಾ. ಪರಮೇಶ್ವರ ಮಸಲವಾಡ ಎಸ್., ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಿದಾನಂದ ಎನ್.ಕೆ., ಡಾ. ಮಧು ಜಿ., ಡಾ. ಸೋಮಶೇಖರ್ ಎಂ. ನಮ್ಮೊಂದಿಗೆ ಭಾಗವಹಿಸಲಿದ್ದಾರೆ.

ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಮೊದಲ ಗೋಷ್ಟಿಯಲ್ಲಿ ಹೊಸಪೇಟೆಯ ಸಾಹಿತಿಗಳಾದ ಬಿ.ಪೀರ್ ಬಾಷಾ ಅವರು "ಚಳವಳಿ ಮತ್ತು ಅಧಿಕಾರ ರಾಜಕಾರಣ " ವಿಚಾರವಾಗಿ, ಮೈಸೂರಿನ ಸಾಹಿತಿ ಡಾ. ಜಗದೀಶ್ ಕೊಪ್ಪ "ಸಮಾಜವಾದಿ ನಿಲುವು " ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.

ಎರಡನೇ ಗೋಷ್ಟಿಯಲ್ಲಿ ಸಾಹಿತಿಗಳಾದ ಡಾ. ಜೆ.ಕೆ. ರಮೇಶ್ ಅವರು "ಗೋಪಾಲಗೌಡ- ಚುನಾವಣೆ " ಕುರಿತು, ತುಮಕೂರು ಸಾಹಿತಿ ಜಿ.ವಿ. ಆನಂದಮೂರ್ತಿ ಅವರು "ಜಾತಿ ವಿನಾಶ-ಕನ್ನಡಪ್ರಜ್ಞೆ " ವಿಷಯದ ಕುರಿತು ಮಾತನಾಡಲಿದ್ದಾರೆ.

ಮೂರನೇ ಗೋಷ್ಠಿಯಲ್ಲಿ ರೈತನಾಯಕ ಕೆ.ಟಿ.ಗಂಗಾಧರ ಅವರು "ಕಾಗೋಡು ಚಳವಳಿ -ಭೂ ಸುಧಾರಣೆ " ಕುರಿತು, ಚಿಂತಕ, ಪ್ರಗತಿಪರ ರೈತ ಕಡಿದಾಳು ದಯಾನಂದ ಅವರು "ಹಿರಿಯ-ಕಿರಿಯ ರಾಜಕಾರಣಿಗಳೊಂದಿಗೆ ಒಡನಾಟ " ಕುರಿತು ಮಾತನಾಡಲಿದ್ದಾರೆ.

ಮಾತು-ಮಂಥನದಲ್ಲಿ ಸಾಹಿತಿಗಳಾದ ಬಿ. ಚಂದ್ರೇಗೌಡ ಮತ್ತು ಡಾ. ಎಚ್.ಟಿ. ಕೃಷ್ಣಮೂರ್ತಿ ನಡೆಸಿಕೊಡಲಿದ್ದಾರೆ. ಒಡನಾಟದ ಮಾತುಗಳನ್ನು ಹಿರಿಯ ಪಿ.ಪುಟ್ಟಯ್ಯ ಮತ್ತು ಕೋಡ್ಲು ಯಜ್ಞಯ್ಯ ಮಾತನಾಡಲಿದ್ದಾರೆ. ಆಸಕ್ತ ಕನ್ನಡ ಮನಸ್ಸುಗಳು ಭಾಗವಹಿಸಲು ಡಿ.ಮಂಜುನಾಥ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾದೇವಿ, ಯು.ಮಧುಸೂದನ್ ಐತಾಳ್, ಟಿ.ಕೆ. ರಮೇಶ್ ಶೆಟ್ಟಿ, ಅನುರಾಧ, ಪ್ರತಿಮಾ ಡಾಕಪ್ಪಗೌಡ, ಎಸ್. ಷಣ್ಮುಖಪ್ಪ, ಎ.ಎಸ್.ನಾರಾಯಣ, ಕೆ.ಜಿ.ವೆಂಕಟೇಶ್, ಸೋಮಿನಕಟ್ಟಿ ಮತ್ತಿತರರು ಇದ್ದರು.

- - - -11ಎಸ್‌ಎಂಜಿಕೆಪಿ05:

ಶಿವಮೊಗ್ಗದ ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿದರು.

Share this article