
ಕನ್ನಡಪ್ರಭ ವಾರ್ತೆ ವಿಜಯಪುರ
ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ.ಅಕ್ಷತಾ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆ ನನಗೆ ಶಿಸ್ತು, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮುಂತಾದ ಗುಣಗಳನ್ನು ಕಲಿಸಿದೆ. ನಾನು ಅಂದುಕೊಂಡದ್ದನ್ನು ಸಾಧಿಸಲು ಈ ಶಾಲೆಯ ಶಿಕ್ಷಕರು ನನಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡಿದ್ದಾರೆ. ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದರು.
ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಚೇರಮನ್ ಡಾ.ಸುರೇಶ ಬಿರಾದಾರ ಮಾತನಾಡಿ, ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರ ಆಶೀರ್ವಾದದಿಂದ ಪ್ರಾರಂಭವಾದ ಈ ಸಂಸ್ಥೆ ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನೇ ಅತಿಥಿಗಳನ್ನಾಗಿ ಕರೆಯುವ ಒಂದು ಪರಿಪಾಠವನ್ನು ನಾವು ಹಾಕಿಕೊಂಡಿದ್ದೇವೆ. ಈ ಶಾಲೆಯಲ್ಲಿ ಕಲಿತು ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿದ್ದೇವೆ. ನಮ್ಮ ಶಾಲೆಯ ಶಿಕ್ಷಕರು ಸಾಕಷ್ಟು ಚಟುವಟಿಕೆಗಳನ್ನು ಹಾಕಿಕೊಂಡು ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಶ್ರಮವಹಿಸುತ್ತಿದ್ದಾರೆ. ಪಾಲಕರು ಸಹ ಅದಕ್ಕೆ ಸಹಕಾರವನ್ನು ಕೊಟ್ಟಾಗ ಮಾತ್ರ ಮಗು ಅಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಶಿಕ್ಷಣವೆಂದರೆ ಕೇವಲ ಶಾಲೆಗೆ ಸೀಮಿತವಾಗಿಲ್ಲ, ಕಲಿಕೆ ಎಂಬುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರವರು ಬಹುಮಾನ ವಿತರಣೆ ನೆರವೇರಿಸಿದರು. ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ವೇಳೆ ಸಿದ್ದಣ ದೇಸಾಯಿ, ಬಸವರಾಜ ಕಳಸಗೊಂಡ, ಸಂಸ್ಥೆಯ ನಿರ್ದೇಶಕರಾದ ಶರತ ಬಿರಾದಾರ, ಭರತ ಬಿರಾದಾರ, ದಿವ್ಯಾ ಬಿರಾದಾರ, ವಿಷ್ಣುಪ್ರೀಯಾ ಬಿರಾದಾರ, ನಿಖಿಲ ಶೇಖದಾರ, ರಿಜೇಶ.ಪಿ.ಎನ್, ಡಿ.ಚರಣ, ಶಿಕ್ಷಕರಾದ ಪ್ರವೀಣ ಗೆಣ್ಣೂರ, ಸುರೇಖಾ ಪಾಟೀಲ, ಎ.ಎಚ್.ಸಗರ, ಆಶ್ವಿನ, ಅನೀಲ ಬಾಗೇವಾಡಿ, ಮಧುಮತಿ, ಸರೋಜಾ, ತಬಸ್ಸುಮ, ಶಶಿಧರ ಲೋಣಾರಮಠ, ಉಮಾ ಬಡಾನೂರ, ಶಾಲಾ ನಾಯಕಿ ಲಕ್ಷ್ಮೀ ಉತ್ನಾಳ ಇದ್ದರು.ಪ್ರಾಚಾರ್ಯೆ ಫರೀನಖಾನ ಶಾಲಾ ವಾರ್ಷಿಕ ವರದಿ ಓದಿದರು. ಶಿಕ್ಷಕಿ ಶ್ರೀದೇವಿ ಜೋಳದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅರ್ಪಿತಾ ಪಟ್ಟಣಶೆಟ್ಟಿ, ಸಿದ್ಧಾಂತ ಬೊಂಬಳಿ ನಿರೂಪಿಸಿದರು, ವಿದ್ಯಾರ್ಥಿನಿ ಆದಿತಿ ರಾಜಮಾನ್ಯ ವಂದಿಸಿದರು.