ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲೂಕಿನಲ್ಲಿ 250-300 ಎಕರೆ ಅರಣ್ಯ ಪ್ರದೇಶ, ಗುಡ್ಡ ಪ್ರದೇಶ ಒತ್ತುವರಿಯಾದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೇ, ಅಸಡ್ಡೆ ತೋರುತ್ತಿದ್ದಾರೆ. ತಕ್ಷಣವೇ ಈ ಮೂವರೂ ಅಧಿಕಾರಿಗಳನ್ನು ಅಮಾನತುಪಡಿಸಿ, ತನಿಖೆಗೊಳಪಡಿಸಬೇಕು ಎಂದರು. ಕೋಟ್ಯಾಂತರ ರು. ಮೌಲ್ಯದ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ 15 ಎಕರೆ ಮಾತ್ರ ಒತ್ತುವರಿಯಾಗಿದೆಯೆಂಬ ವರದಿ ನೀಡಿದ್ದಾರೆ. ಸರ್ಕಾರವೇ ಒತ್ತುವರಿಯಾಗಿದ್ದನ್ನು ಒಪ್ಪಿಕೊಂಡಂತಾಗಿದೆ. ತಕ್ಷಣವೇ ಈ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಳೆದೊಂದು ವರ್ಷದಿಂದ 250-300 ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಲಾಗಿದೆ. ಅರಣ್ಯ ಗುಡ್ಡಗಳನ್ನು ಕಡಿದು, ಅಕ್ರಮ ಗಣಿಗಾರಿಕೆ ನಡೆಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ, ಪ್ರಕರಣವನ್ನೇ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಅರಣ್ಯ ಒತ್ತುವರಿ ಮಾಡಿ, ಅಡಿಕೆ ತೋಟ ಮಾಡಲಾಗಿದೆ. ಅರಣ್ಯ ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಅನೇಕ ಸಲ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಸ್ಪಂದನೆ ಇಲ್ಲ. ಅರಣ್ಯ ಇಲಾಖೆ ಸಹಾಯವಾಣಿ 1926ಗೆ ಕರೆ ಮಾಡಿ, ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈ ವೇಳೆ ಸಾಮಾಜಿಕ ಹೋರಾಟಗಾರ ಚಿತ್ರಪ್ಪ ರಾಯಭಾಗ ಸೇರಿದಂತೆ ಇತರರು ಇದ್ದರು.-----
ಅರಣ್ಯಾಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ
ಸೈಯದ್ ನಯಾಜ್‌ಖಡ್ಗ ಸ್ವಯಂ ಸೇವಕರ ಸಂಘ
28ಕೆಡಿವಿಜಿ9: ಸೂಳೆಕೆರೆ ಭಾಗದಲ್ಲಿ ಅರಣ್ಯ, ಗುಡ್ಡ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು, ಮಣ್ಣು ತೆರವು ಮಾಡಿ, ಸಮತಟ್ಟು ಮಾಡುತ್ತಿರುವುದು.