ಮುರಳಿ ಕಡೆಕಾರ್‌ಗೆ ಶಾರದಾಕೃಷ್ಣ ಪ್ರಶಸ್ತಿ - 2027

KannadaprabhaNewsNetwork |  
Published : Nov 20, 2026, 02:30 AM IST
18ಮುರಳಿ | Kannada Prabha

ಸಾರಾಂಶ

ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ ಶಾರದಾಕೃಷ್ಣ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ, ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಆಯ್ಕೆಯಾಗಿದ್ದಾರೆ.

ಉಡುಪಿ : ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ ಶಾರದಾಕೃಷ್ಣ ಪ್ರಶಸ್ತಿಗೆ ಈ ಬಾರಿ ಶಿಕ್ಷಕ, ಸಂಘಟಕ, ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಆಯ್ಕೆಯಾಗಿದ್ದಾರೆ.

23ರಂದು ಸಂಜೆ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ 50 ಸಾವಿರ ರು. ಗೌರವಧನ ಒಳಗೊಂಡಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ ಅಧ್ಯಕ್ಷರಾದ ಪ್ರೊ. ಶಂಕರ್, ಉಪಾಧ್ಯಕ್ಷೆ ಡಾ. ಭಾರ್ಗವಿ ಐತಾಳ್, ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ವಾಸುದೇವ ಅಡಿಗ ಉಪಸ್ಥಿತರಿದ್ದರು.

ಬೆಳಕು ಹಂಚುವ ಬದುಕು: ಮುರುಳಿ ಕಡೆಕಾರ್ ನಿಟ್ಟೂರು ಪ್ರೌಢಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ, 5 ವರ್ಷ ಮುಖ್ಯ ಶಿಕ್ಷಕರಾಗಿ, 1991ರಲ್ಲಿ ಕಿದಿಯೂರು ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ, ಕೇವಲ 110 ದಿನಗಳಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಿದರು.

ಶಾಲೆಯ ಸುವರ್ಣ ಮಹೋತ್ಸವದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ಕಟ್ಟಡ ನವೀಕರಣ, ಶಾಲೆಯ ಸುತ್ತ 50 ಎಕರೆ ಹಡಿಲು ಭೂಮಿಯಲ್ಲಿ ಭತ್ತ ಕೃಷಿ, ನಿವೃತ್ತಿಯ ದಿನವೇ ಓರ್ವ ಕೊರಗ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿ ಕೊಟ್ಟದ್ದು, ಅವರ ಮಾನವೀಯತೆಯ ಪರಾಕಾಷ್ಠೆ. ಅವರ ಸೇವೆಗೆ ದಾನಿ ಡಾ. ಎಚ್.ಎಸ್. ಶೆಟ್ಟಿಯವರು ಶಾಲೆಗೆ 1 ಕೋಟಿ ರು. ನಿಧಿ ನೀಡಿದರು.

1990ರಿಂದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಯಾಗಿ, 45 ವರ್ಷಗಳಿಂದ ಅಂಬಲಪಾಡಿ ಯಕ್ಷಗಾನ ಕಲಾಮಂಡಳಿಯಲ್ಲಿ ವೇಷಧಾರಿ, ಕಾರ್ಯದರ್ಶಿ, ಅಧ್ಯಕ್ಷರಾಗಿ, 2004ರಲ್ಲಿ ಅಮೇರಿಕಾದ ಅಕ್ಕ ಸಮ್ಮೇಳನದಲ್ಲಿ 11 ಯಕ್ಷಗಾನ ಪ್ರದರ್ಶನ ನೀಡಿದರು.

11 ಕೋಟಿ ರು.ಗೂ ಹೆಚ್ಚು ಆರ್ಥಿಕ ನೆರವು: 2005ರಲ್ಲಿ ಆರಂಭಿಸಿದ ವಿದ್ಯಾಪೋಷಕ್ ಅವರ ಜೀವನದ ಮಹತ್ವದ ಸಾಧನೆ. ಇದರ ಮೂಲಕ ಇಲ್ಲಿಯವರೆಗೆ 13,827 ವಿದ್ಯಾರ್ಥಿಗಳಿಗೆ 11 ಕೋಟಿ ರು.ಗೂ ಹೆಚ್ಚು ಆರ್ಥಿಕ ನೆರವು, ಒಟ್ಟು 109 ಮನೆಗಳ ನಿರ್ಮಾಣವಾಗಿದೆ. ಯಕ್ಷಶಿಕ್ಷಣ ಟ್ರಸ್ಟ್ ಮೂಲಕ 99 ಶಾಲೆಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆ ಅವಕಾಶ ಸಿಕ್ಕಿದೆ. 1000ಕ್ಕೂ ಹೆಚ್ಚು ಎಕರೆ ಹಡಿಲು ಭೂಮಿಯ ಬೇಸಾಯದಲ್ಲಿ ಕೇದಾರೋತ್ಥಾನ ಟ್ರಸ್ಟ್ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ವಿಟಿಯುನಲ್ಲಿ ಕನ್ನಡ ಹಬ್ಬ -26 ಸಂಭ್ರಮ
ಗೃಹಲಕ್ಷ್ಮಿ ಹಣದಾಸೆಗೆ ಅಜ್ಜಿ ಕೊಂದ ಮೊಮ್ಮಗ