ಶರಣರು ಜಗತ್ತಿನ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿಗಳು: ಡಾ. ತೋಂಟದ ಸಿದ್ದರಾಮ ಸ್ವಾಮಿಗಳು

KannadaprabhaNewsNetwork |  
Published : Dec 28, 2025, 03:30 AM IST
ಕಾರ್ಯಕ್ರಮದಲ್ಲಿ ಎಂ.ಎಚ್.ಸವದತ್ತಿ ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2777ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಮಾತನಾಡಿದರು.

ಗದಗ: ವಚನಗಳು ಕೇವಲ ಭಕ್ತಿಯ ಮತ್ತು ಧಾರ್ಮಿಕ ಅಭಿವ್ಯಕ್ತಿಯಲ್ಲ. ಅವು ವೈಜ್ಞಾನಿಕ, ತಾರ್ಕಿಕ, ಮಾನವೀಯತೆ ಮತ್ತು ವೈಚಾರಿಕತೆಯ ಜೀವಂತ ರೂಪವಾಗಿವೆ. ಆದ್ದರಿಂದ ಶರಣರು ಜಗತ್ತಿನ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿಗಳು ಎಂದು ಜ. ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2777ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಚನಕಾರರು ಧರ್ಮವನ್ನು, ಸಮಾಜವನ್ನು, ಅಧ್ಯಾತ್ಮವನ್ನು ಕುರಿತು ವಿಶ್ಲೇಷಣೆ ಮಾಡಿದರು. ಸಮಾಜ ಜಾತಿಯಿಂದ ಮುಕ್ತವಾಗಿರಬೇಕು ಎಂದರು. ಶರಣರು ಜಗತ್ತಿನ ವಿಜ್ಞಾನದ ಬಗ್ಗೆ ವಚನಗಳ ಮೂಲಕ ತಿಳಿಸಿದರು. ಚಂದ್ರೋದಯಕೆ ಅಂಬುದಿ ಹೆಚ್ಚುವುದಯ್ಯಾ - ಈ ವಚನದಲ್ಲಿ ವಿಜ್ಞಾನದ ವಿಷಯವನ್ನು ಹೇಳಿದ್ದಾರೆ ಎಂದು ಹೇಳಿದರು.ಎಂ.ಎಚ್. ಸವದತ್ತಿ ಮಾತನಾಡಿ, ಲಿಂಗಪೂಜೆಯಲ್ಲಿ ವಿಜ್ಞಾನವಿದೆ. ಲಿಂಗಪೂಜೆಯಲ್ಲಿ ಆಯುಷ್ಯ ವೃದ್ಧಿ ಇದೆ. ಲಿಂಗಪೂಜೆಯನ್ನು ಬೆಳಗಾಗುವುದರೊಳಗೆ ಮಾಡಬೇಕು. ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಎಂಬ ವಚನದಲ್ಲಿ ಬೆಳಕು ಎಲ್ಲದಕ್ಕೂ ಮೂಲ. ಪಕ್ಷಿಗಳು ಹಾಡುತ್ತವೆ. ಹೂವುಗಳು ಅರಳುತ್ತವೆ. ರೆಂಬೆ-ಕೊಂಬೆಗಳು ಚಿಗುರುತ್ತವೆ, ಇವುಗಳೆಲ್ಲವೂ ವಿಜ್ಞಾನದ ಕೊಡುಗೆ. ಅಂದು ಗುಡಿ ಕಟ್ಟಿದರು, ಅದರ ಮುಂದೆ ಆಲದ ಮರ ನೆಟ್ಟರು, ಆಲದ ಮರ ಆಮ್ಲಜನಕ ಕೊಡುತ್ತದೆ. ಪರಾತ್ಪರದಲ್ಲಿ ಶಕ್ತಿ ಇದೆ. ಅದು ಶಿವಶಕ್ತಿ. ಅದಕ್ಕೆ ಅಕ್ಕಮಹಾದೇವಿ ಸಂಘದಿಂದಲ್ಲದೆ ಅಗ್ನಿ ಹುಟ್ಟದು ಎಂದರು. ನೀಲದ ಮಣಿಯೊಂದು ಮಾಣಿಕ್ಯ ನುಂಗಿದಡೆ ಈ ವಚನದಲ್ಲಿ ಭೌತಶಾಸ್ತ್ರದ ವಿಶ್ಲೇಷಣೆ ಮಾಡಿದ್ದಾರೆ ಬಸವಣ್ಣನವರು. ನೀಲದ ಮಣಿ ಎಂದರೆ ಆಮ್ಲಜನಕ. ಕಲ್ಲ ನಾಗರ ಕಂಡರೆ ಹಾಲನೆರೆಯಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರು ಇದು ಸರಿಯಲ್ಲ. ಜಗತ್ತಿನಲ್ಲಿ ೫೦೦೦ ಹಾವಿನ ಪ್ರಭೇದಗಳಿವೆ. ಅದರಲ್ಲಿ 50 ಮಾತ್ರ ವಿಷಕಾರಿ. ಹಾವುಗಳು ರೈತರ ಗೆಳೆಯರು. ರೈತ ಬಿತ್ತಿದ ಬೆಳೆಯನ್ನು ಇಲಿಗಳು ತಿಂದು ಹಾಳು ಮಾಡುತ್ತಿವೆ. ಹಾವುಗಳು ಇಲಿಗಳನ್ನು ತಿನ್ನುತ್ತವೆ. ಇದರಿಂದ ರೈತನ ಬೆಳೆ ಸುರಕ್ಷಿತ. ಹಾವುಗಳನ್ನು ಕೊಲ್ಲಬಾರದು ಎಂದು ಅನೇಕ ವಿಜ್ಞಾನದ ವಿಸ್ಮಯ ಜಗತ್ತನ್ನು ವಚನಗಳೊಂದಿಗೆ ಸಮೀಕರಿಸಿ ಕೂತೂಹಲಕಾರಿಯಾಗಿ ಎಂದು ಹೇಳಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ಸೇವೆ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಭರತ ಎಂ. ಹರ್ಲಾಪೂರ ಹಾಗೂ ವಚನ ಚಿಂತನವನ್ನು ಚಂದನ ಕೆ. ಬಳಿಗೇರ ಮಂಡಿಸಿದರು. ದಾಸೋಹ ಸೇವೆಯನ್ನು ಗದಗ ಶಿವಗಂಗಾ ಇಂಡಸ್ಟ್ರೀಸ್‌ನ ಬಸವರಾಜ ಶಿವಪ್ಪ ಅಂಗಡಿ ಹಾಗೂ ಕುಟುಂಬ ವರ್ಗದವರಾದ ಮಹಾಂತೇಶ ಅಂಗಡಿ ಹಾಗೂ ರೇಖಾ ಅಂಗಡಿ ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಇದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ