ಗದಗ:ಶರಣರ ತತ್ವ ಸಿದ್ಧಾಂತ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ಅಜೀವ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಹಾಗೂ ದತ್ತಿದಾನಿಗಳು ತಮ್ಮ ಮನೆಯ ಹಿರಿಯರ ಹೆಸರಿನಲ್ಲಿ ಸೇವಾ ಮನೋಭಾವನೆಯಿಂದ ಪರಿಷತ್ತಿಗೆ ದತ್ತಿನಿಧಿ ನೀಡುವ ಮೂಲಕ ಗದಗ ಜಿಲ್ಲೆಯಲ್ಲಿ ಶರಣ ಸಾಹಿತ್ಯ ಹೆಚ್ಚೆಚ್ಚು ಪ್ರಸಾರವಾಗಬೇಕೆಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಪ್ರಕಾಶ ಅಸುಂಡಿ ಹೇಳಿದರು.
ಹೆಚ್ಚೆಚ್ಚು ಮಹಾಮನೆ ಪತ್ರಿಕೆಗೆ ಸದಸ್ಯರಾಗುವ ಮೂಲಕ ಉತ್ತಮ ಮೌಲಿಕ ಲೇಖನ ವಿಚಾರಗಳನ್ನು ಮಹಾಮನೆ ಪತ್ರಿಕೆಯಿಂದ ನಾವೆಲ್ಲರೂ ಪಡೆಯಬಹುದು ಹಾಗೂ ಇಂದಿನ ಯುವ ಜನಾಂಗ ನಮ್ಮ ಪರಿಷತ್ತಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಾಲಾ-ಕಾಲೇಜುಗಳಲ್ಲಿ ತಾಲೂಕಿನ ಗ್ರಾಮಗಳಲ್ಲಿ ಇನ್ನು ಹೆಚ್ಚಿನ ಬಹುಮುಖ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ 12ನೇ ಶತಮಾನದ ಶರಣರ ತತ್ವ ಸಿದ್ಧಾಂತ ಇಂದಿನ ಯುವ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಗದಗ ಜಿಲ್ಲೆ, ಎಲ್ಲ ತಾಲೂಕು, ಕ್ರಿಯಾಶೀಲ ಚಟುವಟಿಕೆಗಳು ನಡೆಯಬೇಕು ಹಾಗೂ ತಮ್ಮೆಲ್ಲರ ಸಹಾಯ ಸಹಕಾರದ ಮೂಲಕ ಸೇವಾ ಮನೋಭಾವನೆಯಿಂದ ಕಾರ್ಯಪ್ರವೃತ್ತನಾಗುತ್ತೇನೆ. ಜತೆಗೆ ಅಜೀವ ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ನಾವೆಲ್ಲರೂ ಗಮನ ಹರಿಸಬೇಕು ಎಂದರು.ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಒಂದು ಭಾಗವಾಗಿ ಕದಳಿ ಮಹಿಳಾ ವೇದಿಕೆಯು ಗದಗ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಶರಣರ ವಿಚಾರಧಾರೆ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಜನ ಮಾನಸ ತಲುಪಿಸುವ ಕೆಲಸ ನಡೆಯುತ್ತಿದೆ ಜತೆಗೆ ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ, ಮಹಾಮನೆ ಪತ್ರಿಕೆ, ದತ್ತಿನಿಧಿ ಸಂಗ್ರಹದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ಚಟ್ಟಿ, ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಕೆ. ಲಮಾಣಿ, ರತ್ನಕ್ಕ ಪಾಟೀಲ, ಶೇಖಣ್ಣ ಕವಳಿಕಾಯಿ, ನಾಗರತ್ನ ಅಸುಂಡಿ, ಮಹಾಂತೇಶ ಅಂಗಡಿ, ಶೇಖಣ್ಣ ಕಳಸಾಪುರಶೆಟ್ರು, ನ್ಯಾ.ಕೆ.ಪಿ.ಕೋಟೆಗೌಡ್ರ, ಅ.ದ. ಕಟ್ಟಿಮನಿ, ಎಸ್.ಎ. ಮುಗದ, ಜಿ.ಪಿ. ಕಟ್ಟಿಮನಿ, ರೇಣುಕಾ ಹಾಸಿಲಕರ, ರಾಜೇಂದ್ರ ಗಡಾದ, ಡಿ.ಎಸ್. ಬಾಪುರೆ, ಶಾಂತಾ ಮುಂದಿನಮನಿ, ಜ್ಯೋತಿ ಹೇರಲಗಿ, ಗೌರಕ್ಕ ಬಡಿಗಣ್ಣನವರ, ಪ್ರಾ.ಎನ್.ಪಿ. ಪವಾಡಿಗೌಡ್ರ, ಎಂ.ಆರ್. ಚನ್ನಪ್ಪಗೌಡ್ರ, ಎಸ್.ಜಿ. ಹಂಚಿನಾಳ, ಸಂಗಮೇಶ ಎಂ. ಹಾದಿಮನಿ, ಬಸವರಾಜ ಶೆಲಿಯಪ್ಪನವರ, ಉಮಾ ಗದಗ ಸೇರಿದಂತೆ ಇತರರು ಇದ್ದರು.