ಯುವ ನಾಯಕ, ಯಶಸ್ವೀ ಉದ್ಯಮಿ, ಹಲವಾರು ಸಮಾಜ ಮುಖಿ ಕೆಲಸಗಳ ಮೂಲಕ ಗಮನ ಸಳೆದಿರುವ ಕೊಡಗಿನ ಅವರೆಮಾದಂಡ ಶರಣ್ ಪೂಣಚ್ಚ ಜಿಲ್ಲೆಯಲ್ಲಿ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜಕೀಯ ಪಕ್ಷವೊಂದರಲ್ಲಿ ಸಂಪರ್ಕದಲ್ಲಿರುವ ಅವರು ಮುಂದಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ:
ಯುವ ನಾಯಕ, ಯಶಸ್ವೀ ಉದ್ಯಮಿ, ಹಲವಾರು ಸಮಾಜ ಮುಖಿ ಕೆಲಸಗಳ ಮೂಲಕ ಗಮನ ಸಳೆದಿರುವ ಕೊಡಗಿನ ಅವರೆಮಾದಂಡ ಶರಣ್ ಪೂಣಚ್ಚ ಜಿಲ್ಲೆಯಲ್ಲಿ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜಕೀಯ ಪಕ್ಷವೊಂದರಲ್ಲಿ ಸಂಪರ್ಕದಲ್ಲಿರುವ ಅವರು ಮುಂದಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಯಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಕಾಂತೂರು-ಮೂರ್ನಾಡು ಸಮೀಪದ ಶರಣ್ ಪೂಣಚ್ಚ ಯಶಸ್ವಿ ಉದ್ಯಮಿಯಾಗಿದ್ದಾರೆ. ಕೊಡಗು ಹಾಗೂ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶರಣ್ ಪೂಣಚ್ಚ, 2016ರಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕಷ್ಟ ಎಂದು ಬಂದವರಿಗೆ ನೆರವಾಗಿ ನಿಂತಿದ್ದಾರೆ.
ಸರಳ ಕುಟುಂಬದಲ್ಲಿ ಜನಿಸಿದ ಶರಣ್ ಅವರ ಬದುಕಿನ ಪಯಣವೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಕೆಳ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಅವರು, ಬಾಲ್ಯದಲ್ಲೇ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದರು. ಕೆಲ ಸಂದರ್ಭಗಳಲ್ಲಿ ಶಾಲಾ ಶುಲ್ಕ ಪಾವತಿಸುವುದಕ್ಕೂ ಕಷ್ಟಪಟ್ಟಿದ್ದ ಅವರು, ಕಷ್ಟಗಳಿಗೆ ತಲೆಬಾಗದೆ ಶಿಕ್ಷಣದ ಜೊತೆಗೆ ಹಲವು ಅರೆಕಾಲಿಕ ಹಾಗೂ ಪೂರ್ಣಕಾಲಿಕ ಉದ್ಯೋಗಗಳನ್ನು ಮಾಡುತ್ತಾ ತಮ್ಮ ಪದವಿ ಪೂರ್ಣಗೊಳಿಸಿದರು.ಪದವಿ ನಂತರ ಒಂದು ವರ್ಷ ಉದ್ಯೋಗ ಮಾಡಿದ ಬಳಿಕ, ತಮ್ಮದೇ ಆದ ಕಂಪ್ಯೂಟರ್ ನೆಟ್‌ವರ್ಕಿಂಗ್ ಸಂಸ್ಥೆ ಆರಂಭಿಸಿದರು. ಆರಂಭದಲ್ಲಿ ಎದುರಾದ ಸವಾಲುಗಳನ್ನು ಪರಿಶ್ರಮ, ಪ್ರಾಮಾಣಿಕತೆ, ನಾಯಕತ್ವ, ವ್ಯವಹಾರಿಕ ಚಾತುರ್ಯ ಮತ್ತು ದೂರದೃಷ್ಟಿಯಿಂದ ಎದುರಿಸಿದ ಅವರು, ತಮ್ಮ ಸಂಸ್ಥೆಯನ್ನು ಯಶಸ್ವಿ ಉದ್ಯಮವನ್ನಾಗಿ ರೂಪಿಸಿದರು.ಉದ್ಯಮ ಕ್ಷೇತ್ರದಲ್ಲಿನ ಯಶಸ್ಸಿನ ಬಳಿಕ ಲಾಜಿಸ್ಟಿಕ್ಸ್, ಚಲನಚಿತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಅವರು ಹೆಜ್ಜೆ ಇಟ್ಟು ಯಶಸ್ಸು ಕಂಡಿದ್ದಾರೆ. ಆದರೆ ಆರ್ಥಿಕ ಯಶಸ್ಸು ಹೆಚ್ಚಾದಂತೆ ತಮ್ಮ ಬೇರುಗಳಿಂದ ದೂರವಾಗದೆ, ಸಮಾಜದೊಂದಿಗೆ ತಮ್ಮ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವುದು ಶರಣ್ ಅವರ ವಿಶೇಷತೆ.2028ರ ವಿಧಾನಸಭಾ ಚುನಾವಣೆಗೆ ಬಹುತೇಕ ಮಡಿಕೇರಿ ಕ್ಷೇತ್ರದಿಂದಲೇ ಸ್ಪರ್ಧೆ ಬಯಸಿರುವುದು ನಿಶ್ಚಳವಾಗಿದ್ದು, ಈಗಾಗಲೇ ಶರಣ್ ಅವರ ಹಿತೈಷಿಗಳು, ಅಭಿಮಾನಿಗಳು ತೆರೆ ಮರೆಯಲ್ಲಿ ಶರಣ್ ಅವರ ಪರ ಕೆಲಸ ಆರಂಭಿಸಿದ್ದು, ಶರಣ್ ಅವರ ನಡೆ ಜನರ ಕಡೆ ಎಂಬಂತೆ ಗೋಚರಿಸುತ್ತಿದೆ. ಸಮಾಮುಖಿ ವ್ಯಕ್ತಿತ್ವ:
ತಾನು ಮಾಡುವ ಸಮಾಜ ಸೇವೆ ಯಾರಿಗೂ ಗೊತ್ತಾಗಬಾರದು, ಎಂದು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 50ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳಿಗೆ ನೆರವಾಗಿರುವ ಶರಣ್, ಶಾಲಾ ಮಕ್ಕಳಿಗೆ ನೆರವು, ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ನವೋದ್ಯಮ ಕಲ್ಪಿಸಿಕೊಟ್ಟಿದ್ದಾರೆ. ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶರಣ್, ಜಾತಿ-ಧರ್ಮದ ಭೇದವಿಲ್ಲದೆ ಅಗತ್ಯವಿರುವವರಿಗೆ ನೆರವಾಗಿದ್ದಾರೆ. ತಮ್ಮ ಸಹಾಯವನ್ನು ಪ್ರಚಾರದ ಸಾಧನವನ್ನಾಗಿ ಮಾಡಿಕೊಳ್ಳದೆ, ಸಾಧ್ಯವಾದಷ್ಟು ತೆರೆಮರೆಯಲ್ಲಿಯೇ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ.ಸಮಾಜ ಸೇವೆಯ ಮೂಲಕ ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ನೆರವಾಗಿರುವ ಅವರು, ವಿಶೇಷವಾಗಿ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿದ್ದವರಿಗೆ ಸಹಾಯ ಹಸ್ತ ಚಾಚಿ ಹಲವರ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ. ಕೊಡಗಿನ ಸಾಂಸ್ಕೃತಿಕ ಪುನರುಜ್ಜೀವನಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅವರು, ತಮ್ಮ ನೆಲದ ಪರಂಪರೆ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.ಕೊಡಗು ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಕಂಡುಬರುತ್ತಿದೆ. ಆದ್ದರಿಂದ ರಾಜಕೀಯ ಪ್ರವೇಶಕ್ಕೆ ತಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ತಂಡ ಈಗಾಗಲೇ ಎಲ್ಲ ಕೆಲಸವನ್ನು ಮಾಡುತ್ತಿದೆ. ತಾನೂ ಕಷ್ಟದಿಂದಲೇ ಜೀವನ ನಡೆಸಿಕೊಂಡು ಬಂದವನು. ಹಗಲು ರಾತ್ರಿ ಎನ್ನದೇ ದುಡಿದ ಅನುಭವಗಳು ನನಗಿದೆ. ಆದರೂ ಛಲ ಬಿಡದೆ ನಾನು ಉದ್ಯಮವನ್ನು ಕಟ್ಟಿ ಯಶಸ್ವಿಯಾಗಿದ್ದೇನೆ. ಸಮಾಜ ಸೇವೆ ಮಾಡುವುದು ನನಗೆ ಹೊಸದಲ್ಲ. ಆದ್ದರಿಂದ ಜನಪ್ರತಿನಿಧಿಯಾಗುವ ಮೂಲಕ ಮತ್ತಷ್ಟು ಸಮಾಜ ಸೇವೆ ಮಾಡಲು ಮುನ್ನಡೆಯುತ್ತೇನೆ ಎನ್ನುತ್ತಾರೆ ಶರಣ್.
ಹೊಸ ಅಲೆ ಸೃಷ್ಟಿಸುತ್ತಾರಾ ಶರಣ್!?
ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಯಲ್ಲಿರುವ ಶರಣ್, ಈಗಾಗಲೇ ರಾಷ್ಟ್ರೀಯ ಪಕ್ಷವೊಂದರ ಪ್ರಮುಖರೊಂದಿಗೆ ಚರ್ಚೆಯಲ್ಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಉತ್ಸಾಹ ಹೊಂದಿದ್ದಾರೆ. ಪಕ್ಷದಿಂದ ಟಿಕೆಟ್ ದೊರೆತಲ್ಲಿ ಚುನಾವಣೆ ಅಖಾಡಕ್ಕೆ ಇಳಿಯುವುದು ದೃಢವಾಗಿದೆ. ಅಲ್ಲದೆ ಶರಣ್ ಕೊಡಗಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ವಿವಿಧ ಸಂಘಟನೆಯಲ್ಲಿ ಸಕ್ರಿಯ!ಶರಣ್ ಪೂಣಚ್ಚ ಅವರು ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಡಿಕೇರಿ ಕೋಟೆ ಮಹಾ ಗಣಪತಿ ದೇವಾಲಯದ 50ನೇ ದಸರಾ ಸಮಿತಿಯ ಅಧ್ಯಕ್ಷರು, ಕೊಡಗು ಜಿಲ್ಲಾ ಕಬಡ್ಡಿ ಅಕಾಡೆಮಿ ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷರು ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಟೀಂ ಕೊಡವ ಟ್ರೈಬ್ ತಂಡವನ್ನು ಕಟ್ಟಿದ್ದಾರೆ. ಮಹಿಳೆಯರಿಗೆ ಕಿರು ಉದ್ಯಮದ ಮೂಲಕ ಉದ್ಯೋಗ ಹಾಗೂ ಆದಾಯ ಸೃಷ್ಟಿಸುವುದು, ಹೊಸ ಉದ್ಯಮಿಗಳಿಗೆ ಅವಕಾಶ ನೀಡುವುದು, ಶಾಲಾ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವು ಹೀಗೆ ಹಲವು ಸಮಾಜಮುಖಿ ಕೆಲಸದಲ್ಲಿ ಶರಣ್ ಮುಂದಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ಈ ಹಿಂದಿನಿಂದಲೂ ನೀಡಿಕೊಂಡು ಬರುತ್ತಿದ್ದಾರೆ.ರಾಜಕೀಯಕ್ಕೆ ಬಂದರೆ ಮತ್ತಷ್ಟು ಕೆಲಸ!
ಯಾವುದೇ ಪ್ರಚಾರ ಬಯಸದೆ ಸದ್ದಿಲ್ಲದೇ ಶರಣ್ ಅವರು 2016ರಿಂದಲೇ ಹಲವಾರು ಜನಪರ ಕಾಳಜಿಯ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಯಾವುದೇ ಪ್ರತಿಫಲ ಬಯಸದೇ ಕೆಲಸ ಮಾಡುತ್ತಿದ್ದಾರೆ. ಶರಣ್ ಅವರು ರಾಜಕೀಯಕ್ಕೆ ಆಗಮಿಸಿ ಜನಪ್ರತಿನಿಧಿಯಾದಲ್ಲಿ ಮತ್ತಷ್ಟು ಸಾಮಾಜಿಕ ಕಳಕಳಿಯ ಕೆಲಸ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಶರಣ್ ಅವರ ಹಿತೃಷಿಗಳು. ಕೊಡಗು ಜಿಲ್ಲೆಯಲ್ಲಿ ರಸ್ತೆ, ಕಟ್ಟಡಗಳ ಅಭಿವೃದ್ಧಿ ಮಾತ್ರವಲ್ಲ. ಜಿಲ್ಲೆಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸುವ ಯೋಜನೆ, ಕೊಡಗಿನ ಜನರಿಗೆ ಎಲ್ಲ ವೈದ್ಯಕೀಯ ಸೇವೆಗಳು ಜಿಲ್ಲೆಯಲ್ಲಿಯೇ ಸಿಗಲು ವ್ಯವಸ್ಥೆ. ಕೊಡಗಿನ ಸಂಸ್ಕೃತಿಯನ್ನು ನಮ್ಮವರಿಗೆ ಪರಿಚಯಿಸಿ ಅದನ್ನು ಉಳಿಸುವ ಕೆಲಸ ಮಾಡಬೇಕು. ಹಾಕಿ ಕ್ರೀಡೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಉತ್ತೇಜನ ನೀಡಬೇಕು. ಕಿರು ಉದ್ಯಮದ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಬೇಕು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ನನ್ನ ಗುರಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.