ಕನ್ನಡಪ್ರಭ ವಾರ್ತೆ ಆನಂದಪುರ
ಮುರುಘಾ ಮಠದಲ್ಲಿ ಶರಣು ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ ಮತ್ತು ಕಂಚಿನ ರಥ ದೀಪೋತ್ಸವ ಕಾರ್ಯಕ್ರಮ ಡಿ.12ರಿಂದ ನಡೆಯಲಿದೆ ಎಂದು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.ಆನಂದಪುರ ಮುರುಘಾ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.12ರಂದು ಬೆಳಗ್ಗೆ 10ಕ್ಕೆ ಶರಣ ಸಾಹಿತ್ಯ ಸಮ್ಮೇಳನ ಹಾಗೂ 573ನೇ ಮಾಸಿಕ ಶಿವಾನುಭವ ಗೋಷ್ಠಿ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತದೆ ಎಂದು ಹೇಳಿದರು.
ಗೋಣಿಬೀಡು ಶಿವಯೋಗಿ ಆಶ್ರಮದ ಡಾ.ಸಿದ್ದಲಿಂಗ ಸ್ವಾಮಿಗಳು ಶರಣು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ತಾಳಗುಪ್ಪದ ಕೂಡಲಿ ಮಠದ ಶ್ರೀ ಸಿದ್ಧವೀರ ಮಹಾಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಧನಂಜಯ್ ಸರ್ಜಿ ಆಸ್ಪತ್ರೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಶ್ ಸುರುಗೀಹಳ್ಳಿ ಉದ್ಘಾಟಸಲಿದ್ದಾರೆ. ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ ಖಾನ್, ಆನಂದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಾ ದಿನೇಶ್, ಹಾಗೂ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಆರೋಗ್ಯ ತಪಾಸಣಾ ಶಿಬಿರ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎನ್. ಮಹಾರುದ್ರ ಅವರಿಂದ ಉಪನ್ಯಾಸ ನಡೆಯಲಿದೆ. ಸುಮಾ ವಿ. ಹೆಗಡೆ ಅವರಿಂದ ವಚನ ಸಂಗೀತ, ನಾಟ್ಯ ತರಂಗ ಟ್ರಸ್ಟ್ ವತಿಯಿಂದ ವಚನ ನೃತ್ಯರೂಪಕ ನಡೆಯಲಿದೆ.ಸಂಜೆ 4 ಗಂಟೆಗೆ ಹೊoಬಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮಿಗಳ ಸಮ್ಮುಖ ಭಾವೈಕ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಅವರಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಗುತ್ತದೆ. ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಹಾಗೂ ಚಲನಚಿತ್ರ ನಟ ದೊಡ್ಡಣ್ಣ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುತ್ತದೆ ಎಂದರು.
ಈ ಬಾರಿಯ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹರನಾಥ್ ರಾವ್ ಮತ್ತಿಕೊಪ್ಪ, ಜಿಎಸ್ ಶಶಿಧರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಪೌಜಿ ಶರಾವತ್, ಕೆ ಟಿ ತಿಮ್ಮೇಶಿ, ಶ್ರೇಣಿಗೆ ರುದ್ರಪ್ಪ ಗೌಡ, ಆರ್.ವಿನಯ್ ಕುಮಾರ್, ಕೆ.ಸಿ.ದೇವಪ್ಪ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರತಿನಿಧಿಗಳು, ಮಠಾಧೀಶರು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಭೆ ನಂತರ ಕಂಚಿನ ರಥ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.ದೀಪೋತ್ಸವ ಸಮಿತಿ ಅಧ್ಯಕ್ಷರಾದ ನಾಗರಾಜ್ ಗೌಡ ಹರತಾಳ, ಕಾರ್ಯದರ್ಶಿ ದೇವೇಂದ್ರ ಗೌಡ, ಕೋಶಾಧ್ಯಕ್ಷರಾದ ರಿಪ್ಪನ್‌ಪೇಟೆಯ ಚಂದ್ರಪ್ಪ ಗೌಡ, ಕುಮಾರ್ ಗೌಡ ಕೋಣೆ ಹೊಸೂರು, ರಾಜೇಂದ್ರ ಮುರುಘಾ ಮಠ ಉಪಸ್ಥಿತರಿದ್ದರು.
- - --10ಎಎನ್‌ಪಿ1: ಆನಂದಪುರ ಸಮೀಪದ ಮುರುಘಾ ಮಠದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು.
-10ಎಎನ್,ಪಿ2 : ಮುರುಘಾ ಮಠದಲ್ಲಿ ದೀಪೋತ್ಸವಕ್ಕೆ ಸಜ್ಜಾಗಿರುವ ಕಂಚಿನ ರಥ.