ಹತ್ತು ದಿನದಲ್ಲಿ ಶರಣ್ ಪಂಪ್‌ವೆಲ್ ಜಿಲ್ಲೆಗೆ: ಮಹೇಂದ್ರ

KannadaprabhaNewsNetwork |  
Published : Jul 09, 2025, 12:26 AM IST
೦೮ಬಿಹೆಚ್‌ಆರ್ ೩: ಮಹೇಂದ್ರ | Kannada Prabha

ಸಾರಾಂಶ

ಬಾಳೆಹೊನ್ನೂರು, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಜಿಲ್ಲೆಗೆ ಬಾರದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಇನ್ನು ಹತ್ತು ದಿನಗಳ ಒಳಗೆ ಅವರನ್ನು ಸಂಘಟನೆಯಿಂದ ಜಿಲ್ಲೆಗೆ ಅದ್ಧೂರಿ ಸ್ವಾಗತ ಕೋರಿ ಮೆರವಣಿಗೆ ನಡೆಸಲಾಗುವುದು ಎಂದು ವಿಹಿಂಪ ಹಾಸನ ವಿಭಾಗದ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದ್ದಾರೆ.

ಸಂವಿಧಾನ ಹತ್ತಿಕ್ಕಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಜಿಲ್ಲಾಡಳಿತಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಜಿಲ್ಲೆಗೆ ಬಾರದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಇನ್ನು ಹತ್ತು ದಿನಗಳ ಒಳಗೆ ಅವರನ್ನು ಸಂಘಟನೆಯಿಂದ ಜಿಲ್ಲೆಗೆ ಅದ್ಧೂರಿ ಸ್ವಾಗತ ಕೋರಿ ಮೆರವಣಿಗೆ ನಡೆಸಲಾಗುವುದು ಎಂದು ವಿಹಿಂಪ ಹಾಸನ ವಿಭಾಗದ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದ್ದಾರೆ. ಶರಣ್ ಪಂಪ್‌ವೆಲ್ ಮೇಲಿದ್ದ 22 ಪ್ರಕರಣಗಳಲ್ಲಿ 15 ಪ್ರಕರಣಗಳನ್ನು ನ್ಯಾಯಾಲಯ ಈಗಾಗಲೇ ವಜಾ ಮಾಡಿದೆ. ಇನ್ನು 7 ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ. ಆದರೆ ಇದನ್ನು ಗಮನಿಸದ ಜಿಲ್ಲಾಡಳಿತ ಕಾನೂನು ಉಲ್ಲಂಘಿಸಿ ಸಂವಿಧಾನ ವಿರುದ್ಧವಾಗಿ ಸಮಾಜದ ಒಬ್ಬ ಹೋರಾಟಗಾರನನ್ನು ಜಿಲ್ಲೆಗೆ ಬರದಂತೆ ತಡೆಯೊಡ್ಡಲಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ನೀಡಿದ್ದ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸ ಜಿಲ್ಲಾಡಳಿತ ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಚಿಕ್ಕಮಗಳೂರು ನಗರದಲ್ಲಿ ಸಂಘಟನೆ ವಿಸ್ತಾರ ಮಾಡುವ ಉದ್ದೇಶದಿಂದ ತಿಂಗಳ ಬೈಠಕ್‌ಗೆ ಬರಬೇಕಿತ್ತು. ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆ ಭಾಗದಲ್ಲೂ ಕಾರ್ಯಕ್ರಮ ನಿಶ್ಚಯವಾಗಿತ್ತು. ಇದು ಒಳಾಂಗಣ ಕಾರ್ಯಕ್ರಮವೂ ಆಗಿತ್ತು. ಆದರೆ ಏಕಾಏಕಿ ಜಿಲ್ಲಾಡಳಿತ ಸುಮಾರು ಒಂದು ತಿಂಗಳ ಕಾಲ ಜಿಲ್ಲೆಗೆ ಶರಣ್ ಅವರಿಗೆ ನಿರ್ಬಂಧ ಹೇರಿದೆ. ಇದು ಖಂಡನೀಯ. ವಿಹಿಂಪ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಶರಣ್ ಪಂಪ್‌ವೆಲ್ ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರುತ್ತಿಲ್ಲ. ಸುಮಾರು 20 ವರ್ಷಗಳಿಂದ ನಿರಂತರವಾಗಿ ಜಿಲ್ಲೆಗೆ ಬರುತ್ತಿ ದ್ದಾರೆ. ಸಂಘಟನೆ ವಿಸ್ತರಣೆ, ಪ್ರತಿಭಟನೆ, ವ್ಯಕ್ತಿ ಸಂಪರ್ಕದಲ್ಲಿ ನಿರಂತರವಾಗಿ ಇದ್ದಾರೆ. ಆದರೆ ಈವರೆಗೂ ಸಹ ಶರಣ್ ಪಾಲ್ಗೊಂಡ ಪ್ರತಿಭಟನೆ, ಬೈಠಕ್‌ಗಳಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಯಾವುದೋ ಒಬ್ಬ ಪ್ರಮುಖರ ಭಾಷಣವನ್ನು ಕೇಳಿ ಸಮಾಜದಲ್ಲಿ ಅಹಿತಕರ ಘಟನೆ ಮಾಡುವ ಸಣ್ಣ ವ್ಯಕ್ತಿತ್ವ ಮಲೆನಾಡು ಜನರಲ್ಲಿ ಇಲ್ಲ. ಭಾಷಣ ಮುಖಾಂತರ ಅಹಿತಕರ ಘಟನೆ ಮಾಡುವವರು ವಿಹಿಂಪದಲ್ಲಿ ಇಲ್ಲ. ಜಿಲ್ಲಾಡಳಿತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾರನ್ನೋ ಮೆಚ್ಚಿಸಲು ಹೋಗಿ ಕಾನೂನು ಗಾಳಿಗೆ ತೂರಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿ ಭೇಟಿಗೆ ಸೋಮವಾರ ತೆರಳಿದಾಗ ಡಿಸಿ ಕಚೇರಿಗೆ ಬ್ಯಾರಿಕೇಡ್ ಹಾಕಿ ನೂರಾರು ಪೊಲೀಸರನ್ನು ಬಂದೋಬಸ್ತ್‌ ಮಾಡಿ ವಿಹಿಂಪ ಕಾರ್ಯಕರ್ತರನ್ನು ತಡೆಯಲಾಯಿತು. ನಂತರ ಅದನ್ನು ವಿರೋಧಿಸಿದಾಗ ಕೇವಲ ಹತ್ತು ಜನರನ್ನು ಒಳಗೆ ಬಿಟ್ಟು ಚರ್ಚಿಸಲು ಅವಕಾಶ ನೀಡಿದರು. ಚರ್ಚೆ ಬಳಿಕ ನಿರ್ಬಂಧವನ್ನು ರಾತ್ರಿ 8 ಗಂಟೆ ಒಳಗೆ ವಾಪಾಸ್ ತೆಗೆದು ಕೊಳ್ಳುವುದಾಗಿ ಹೇಳಿ, ರಾತ್ರಿ ವೇಳೆ ವಾಪಾಸ್ ತೆಗೆಯಲು ಆಗಲ್ಲ ಎಂದು ಹೇಳಿದ್ದಾರೆ. ನಿರ್ಬಂಧ ತೆಗೆಯದಿದ್ದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗಲಿದೆ ಎಂದರು.

ಚಿಕ್ಕಮಗಳೂರಿನ ಜನ ಶಾಂತಿಯುತ ಜನರು ಎಂಬುದನ್ನು ಜಿಲ್ಲಾಡಳಿತ ಅರಿಯಬೇಕಿದೆ. ಬಜರಂಗದಳ, ವಿಹಿಂಪ ಸಮಾಜ ದಲ್ಲಿ ಸಂಘಟನೆ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಅದನ್ನು ಸಹಿಸದೆ ಹೋರಾಟದ ಸ್ವರೂಪವನ್ನು ಜಿಲ್ಲಾಡಳಿತವೇ ಬದಲಿಸಲು ಹೊರಟಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಪ್ರಶ್ನಿಸಲಾಗುವುದು. ನ್ಯಾಯಾಲಯದ ಮೇಲೆ ನಮಗೆ ನಂಬಿಕೆಯಿದೆ ಅಲ್ಲಿ ನಮಗೆ ಜಯ ದೊರೆಯಲಿದೆ ಎಂದು ತಿಳಿಸಿದರು.

ವಿಹಿಂಪ, ಬಜರಂಗದಳ ಸಮಾಜದ ಪರವಾಗಿ ಹಲವಾರು ಕೆಲಸ ಮಾಡಿಕೊಂಡು ಬಂದಿದ್ದು, ಎಂದಿಗೂ ಸಹ ಅಶಾಂತಿ ಉಂಟು ಮಾಡುವ ಕೆಲಸ ಮಾಡಿಲ್ಲ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸೇರಿ ಹಲವು ಸಮಾಜಪರ ಕೆಲಸವನ್ನು ಸಂಘಟನೆ ನಿರ್ವಹಿಸಿದೆ. ಈವರೆಗೆ ಯಾವುದೇ ಜಿಲ್ಲಾಧಿಕಾರಿ ಸಂಘಟನೆಯನ್ನು ಈ ರೀತಿ ನಡೆಸಿ ಕೊಂಡಿಲ್ಲ. ಮುಂದಿನ ದಿನಗಳಿಂದ ಸಂಘಟನೆ ಪ್ರಮುಖರು ಯಾರೂ ಸಹ ಜಿಲ್ಲೆಗೆ ಬರದಂತೆ ತಡೆಯೊಡ್ಡಲು ಜಿಲ್ಲಾಡಳಿತ ನಿರ್ಧರಿಸಿದರೂ ಅಚ್ಚರಿಯಿಲ್ಲ ಎಂದು ಹೇಳಿದರು.

೦೮ಬಿಹೆಚ್‌ಆರ್ ೩: ಮಹೇಂದ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ದಾಳಿಗೆ ಮೇಕೆ ಬಲಿ: ಅರಣ್ಯ ಇಲಾಖೆ ಎದುರು ಪ್ರತಿಭಟನೆ
ಸತ್ಯಾಗ್ರಹ ಸೌಧ ಅಭಿವೃದ್ಧಿ: ನೀಲನಕ್ಷೆ ತಯಾರಿಗೆ ಪರಿಶೀಲನೆ