ಕನ್ನಡಪ್ರಭ ವಾರ್ತೆ ಆನಂದಪುರ
ಅವರು ಇಲ್ಲಿಗೆ ಸಮೀಪದ ಮುರುಘಾಮಠದಲ್ಲಿ ನಡೆದ 1171 ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿ ವೃತ್ತಿ ಮತ್ತು ಪ್ರವೃತ್ತಿಯನ್ನು ಒಂದಾಗಿಸಿಕೊಂಡು ಬದುಕಿನ ಶಿಸ್ತನ್ನು ಸಮಾಜಕ್ಕೆ ನೀಡಿದ ಶರಣರ ಸಂದೇಶಗಳು ಇಂದಿಗೂ ಸರ್ವಕಾಲಿಕವಾಗಿವೆ.
12ನೇ ಶತಮಾನದಲ್ಲಿ ಬಸವಾದಿ ಶಿವಶರಣರ ಸಂಪರ್ಕಕ್ಕೆ ಬಂದವರೆಲ್ಲರೂ ಶರಣರೇ ಆದರು. ತಳವರ್ಗದಿಂದ ಬಂದ ಕಾಯಕಜೀವಿಗಳು ಸಹ ಬಸವಣ್ಣ, ಅಲ್ಲಮ, ಅಕ್ಕ, ಚನ್ನಬಸವಣ್ಣನವರಂತೆ ಅನುಭಾವಿಗಳಾದರು. ಜಗತ್ತಿನ ಯಾವ ಧಾರ್ಮಿಕ ಪರಂಪರೆಯಲ್ಲೂ ಇಂಥ ಪರಿವರ್ತನೆ ಕಾಣಲು ಸಾಧ್ಯವಿಲ್ಲ. ಶಿವಶರಣರು ರಚಿಸಿದ ವಚನ ಸಾಹಿತ್ಯ ಮನುಷ್ಯನ ಬದುಕಿಗೆ ಪೂರಕವಾಗಿವೆ ಎಂದರು.ಮನುಷ್ಯನ ನಿತ್ಯ ಬದುಕಿಗೆ ಹತ್ತಿರವಾದ ಸಂಗತಿಗಳು ವಚನಗಳಲ್ಲಿ ಒಂದಾಗಿದೆ. ಶರಣರ ಬದುಕು ನಡೆನುಡಿ ಒಂದಾಗಿದ್ದರಿಂದಲೇ ವಚನಗಳ ಮೂಲಕ ಒಳ್ಳೆಯದನ್ನು ಸಮಾಜಕ್ಕೆ ನೀಡಲು ಸಾಧ್ಯವಾಗಿದೆ. ಸಂಸ್ಕೃತ ಮತ್ತು ವಚನ ಸಾಹಿತ್ಯದ ನಡುವಿನ ಸಂಬಂಧವು ಭಾಷೆ ತತ್ವಜ್ಞಾನ ಮತ್ತು ಸಾಮಾಜಿಕ ಚಿಂತನೆಗೆ ಸಂಬಂಧಿಸಿದ ಆಳವಾದ ವಿಷಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ದಾಸೋಹ ಮತ್ತು ಕಾಯಕವನ್ನು ಮಾಡಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ನೀಡುವಂತಹ ನಮಸ್ಕಾರವನ್ನು ಕಲಿಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಬರಲು ಸಾಧ್ಯ ಎಂದರು.
---------------------