ಕನ್ನಡಪ್ರಭ ವಾರ್ತೆ ಬ್ಯಾಡಗಿ
ತಾಲೂಕಿನ ಚಿಕ್ಕಬಾಸೂರಿನಲ್ಲಿ ಜ. 14 ಮತ್ತು 15ರಂದು ಎರಡು ದಿನಗಳ ಕಾಲ ನಡೆಯಲಿರುವ 851ನೇ ಸಿದ್ಧರಾಮೇಶ್ವರ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ನೊಳಂಬ ಲಿಂಗಾಯತ ಸಮಾವೇಶ ಹಿನ್ನೆಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಳಿ ಮನವಿ:ಸುಮಾರು 800 ವರ್ಷಗಳ ಹಿಂದೆಯೇ ತಮ್ಮ ಜೀವಿತದ ಅವಧಿಯಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ಕಾಯಕಯೋಗಿ ಎನಿಸಿಕೊಂಡಿದ್ದ ಶ್ರೀಗುರು ಸಿದ್ಧರಾಮೇಶ್ವರರು ಮಾಡಿದ ಸಮಾಜಮುಖಿ ಕೆಲಸಗಳು ಇಂದಿಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತಿವೆ. ಹೀಗಾಗಿ ಶ್ರೀಗಳ ಹೆಸರಿನಲ್ಲೇ ರಾಜ್ಯದಲ್ಲಿ ಬೃಹತ್ ಯೋಜನೆಯೊಂದನ್ನು ಘೋಷಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ಸಕಲ ಸಿದ್ಧತೆ:
5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದ್ದು, ಸಮಾವೇಶಕ್ಕೆ ಆಗಮಿಸಿದ ಭಕ್ತರಿಗೆ ಊಟ, ವಸತಿ, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಯಂತಿಗೆ ಅಗಮಿಸುವ ಜನರಿಗೆ ಸಾರಿಗೆ ಸೌಲಭ್ಯ ಹಾಗೂ ಖಾಸಗಿ ವಾಹನಗಳಲ್ಲಿ ಬಂದವರಿಗೆ ಪಾರ್ಕಿಂಗ್ ವ್ಯವಸ್ಥೆ, ನಿರಂತರ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ದಿನದ 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ಕಲ್ಪಿಸಲು ಶಾಸಕರು, ಸಚಿವರು ಭರವಸೆ ನೀಡಿದ್ದು ಸಮಾವೇಶ ಅದ್ಧೂರಿಯಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರನ್ನೂ ದೂರವಿಡುವಂತಹ ಪ್ರಶ್ನೆಯೇ ಇಲ್ಲ. ಶ್ರೀಗುರು ಸಿದ್ಧರಾಮೇಶ್ವರರ ಶರಣ ಸಂಸ್ಮೃತಿ ಆಚಾರ ವಿಚಾರಗಳನ್ನು ಒಪ್ಪಿಕೊಂಡು ಬರುವಂತಹ ಎಲ್ಲ ಸಮಾಜಗಳನ್ನು ಶ್ರೀಮಠವು ಅಪ್ಪಿಕೊಳ್ಳುತ್ತಿದೆ. ಇದರಲ್ಲಿ ಅವರು ಇವರು ಎನ್ನುವ ಪ್ರಶ್ನೆಯೇ ಇಲ್ಲ. ಹೀಗಾಗಿ ಭೋವಿ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗಿದೆ ಎಂದರು.
ವಿ.ಜಿ. ಯಳಗೇರಿ, ಪ್ರಭುಲಿಂಗ ದೊಡ್ಮನಿ, ಮಾರುತಿ ಕೆಂಪಗೊಂಡರ, ಚಂದ್ರು ಕರಿಯಪ್ಪನವರ, ಸಿ.ಬಿ. ಮಧ್ಯಾಹ್ನದ, ಪರಮೇಶ ಕರಿನಾಗಣ್ಣನವರ, ಮಲ್ಲೇಶಪ್ಪ ಅಡವಿ, ಶ್ರೀಕಾಂತ ಗೌರಾಪುರ, ಶಿವನಗೌಡ ದೊಡ್ಡಗೌಡ್ರ ಇತರರಿದ್ದರು.