ಸುದ್ದಿಗೋಷ್ಠಿಯಲ್ಲಿ ಕೆಪಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ಕನ್ನಡಪ್ರಭ ವಾರ್ತೆ ಕಾರವಾರ
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಯೋಜನೆಗೆ ಕೇವಲ 100.645 ಹೆಕ್ಟೇರ್ ಪ್ರದೇಶ ಬಳಸಲಾಗುತ್ತಿದ್ದು, ಅದರಲ್ಲಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದೆ. ಯೋಜನೆಗೆ ಈಗಾಗಲೇ ಇರುವ ಗೇರುಸೊಪ್ಪ ಹಾಗೂ ತಲಕಳಲೆ ಅಣೆಕಟ್ಟುಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತೂ ಹೊಸದಾಗಿ ಆಣೆಕಟ್ಟು ನಿರ್ಮಿಸುವುದಿಲ್ಲ ಎಂದರು.
ಯೋಜನೆಯಿಂದ ಭೂ ಕುಸಿತದ ಆತಂಕ ಜನರಲ್ಲಿದೆ. ಆದರೆ ಇಂತಹ ಯಾವುದೇ ಅಪಾಯಗಳು ಇಲ್ಲ ಎನ್ನುವುದನ್ನು ಭೂಸರ್ವೇಕ್ಷಣಾ ಇಲಾಖೆ ಹಾಗೂ ಕೇಂದ್ರ ವಿದ್ಯುತ್ ಪ್ರಾಧಿಕಾರ ವೈಜ್ಞಾನಿಕವಾಗಿ ಖಚಿತಪಡಿಸಿದೆ ಎಂದು ತಿಳಿಸಿದರು.ಈ ಯೋಜನೆಗೆ ಒಮ್ಮೆ ಮಾತ್ರ 0.37 ಟಿಎಂಸಿ ನೀರನ್ನು ಬಳಸಲಾಗುತ್ತದೆ. ಇದರಿಂದ ನದಿಯಲ್ಲಿ ನೀರಿನ ಹರಿವು ಅಥವಾ ಶರಾವತಿ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಕೃಷಿ, ಕುಡಿಯುವ ನೀರು, ಮೀನುಗಾರಿಕೆ ಅಥವಾ ಸಮುದ್ರದ ನೀರಿನ ಗುಣಮಟ್ಟದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ವಿವರಿಸಿದರು.
ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ರಾಜ್ಯ ಹಾಗೂ ಕೇಂದ್ರ ವನ್ಯಜೀವಿ ಮಂಡಳಿಗಳೂ ಯೋಜನೆಗೆ ಅನುಮತಿ ನೀಡಿವೆ ಎಂದರು.
ಎಂಜಿನಿಯರ್‌ಗಳಾದ ಶ್ರೀಲಕ್ಷ್ಮೀ, ಮಾದೇಶ, ಪ್ರದೀಪ್, ಎಸ್.ಎಂ. ಗಿರೀಶ್ ಇದ್ದರು.