ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷ್ಣರಾಜಪೇಟೆ ತಾಲೂಕು ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.
ಸೊಸೈಟಿಯಲ್ಲಿ ಕೇವಲ 400 ಜನ ಪದವೀಧರರು ಷೇರುದಾರರಾಗಿದ್ದು, ಸೊಸೈಟಿಯು ಏಳೂವರೆ ಲಕ್ಷ ರು.ಗೂ ಹೆಚ್ಚಿನ ಲಾಭಗಳಿಸಿ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಪದವೀಧರ ಬಂಧುಗಳ ಅವಶ್ಯಕತೆಗೆ ಪೂರಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ.ಪ್ರಗತಿ ದಿಕ್ಕಿನಂತ ಸಾಗುತ್ತಿರುವ ಸಂಘದಿಂದ ನಿರುದ್ಯೋಗಿ ಪದವೀಧರರಿಗೆ ಆರ್ಥಿಕವಾಗಿ ಶಕ್ತಿ ಬಂದಿದೆ. ಸ್ವಾಬಲಂಬನೆ ಸಾಧಿಸಿ ಮುನ್ನಡೆಯಲು ದಾರಿ ದೀಪವಾಗಿದೆ. ತಾಲೂಕಿನಲ್ಲಿರುವ ಎಲ್ಲಾ ಪದವೀಧರರು ಕಡ್ಡಾಯವಾಗಿ ಸಂಘಕ್ಕೆ ಶೇರುದಾರರಾಗುವ ಮೂಲಕ ಸಂಘವು ಇನ್ನೂ ಬೆಳೆದು ಹೆಮ್ಮರವಾಗಿ ಪರಿವರ್ತನೆ ಹೊಂದುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದರು.
ಸಂಘದ ಉಪಾಧ್ಯಕ್ಷ ಡಿ.ಆರ್.ಮರಿಸ್ವಾಮಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಪದ್ಮೇಶ್, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಶಿಕ್ಷಣ ಇಲಾಖೆ ವಿಶ್ರಾಂತ ಆಯುಕ್ತರಾದ ಕೆ.ಗೋಪಾಲ್, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ನಾಗರಾಜು, ಮುತ್ತುರಾಜು, ಪುಟ್ಟಸ್ವಾಮಿ, ಸಿ.ನಿರಂಜನ್, ಎಚ್.ಟಿ.ಮಹದೇವ, ಡಿ.ಆರ್. ನಾಗೇಶ್, ಕೆ.ಆರ್.ಮಹೇಶ್, ಅನಿಲ್ ಕುಮಾರ್.ಸಿ.ಎಂ, ಸುಮಾ, ವಿ.ಕೆ. ಸ್ವರೂಪ, ಚಂದ್ರು ಸೇರಿದಂತೆ ನೂರಾರು ಷೇರುದಾರರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.