ಸಾಧನ ಆಶ್ರೀತ್ ರಿಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್

KannadaprabhaNewsNetwork |  
Published : Apr 03, 2024, 01:31 AM IST
ಸಾಧನಾ1 | Kannada Prabha

ಸಾರಾಂಶ

ಸಾಧನ ಆಶ್ರಿತ್‌ ಅವರಿಗೆ ಶೇರೋ ಇಂಡಿಯನ್‌ ಲೇಜೆಂಡರಿ ಅವಾರ್ಡ್‌ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಂಕಣಕಾರ ಇಂದ್ರಜಿತ್‌ ಲಂಕೇಶ್‌ ಇದ್ದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ, ವಸ್ತ್ರ ವಿನ್ಯಾಸಕಿ ಸಾಧನ ಆಶ್ರೀತ್ ಅವರಿಗೆ ಸುಧಾ ವೆಂಚರ್ಸ್ ಬೆಂಗಳೂರು ಹಾಗೂ ಎಸ್.ವಿ.ಫಿದಾ ಇಂಡಿಯನ್ ಲೇಜೆಂಡರಿ ಆಶ್ರಯದಲ್ಲಿ, ತಮ್ಮ ಫ್ಯಾಷನ್ ಶಿಕ್ಷಣ ಸಂಸ್ಥೆ ಮೂಲಕ ವಿಕಲಾಂಗ ವಿದ್ಯಾರ್ಥಿನಿಯರಿಗೆ ಮೌಲ್ಯಾಧಾರಿತ ಶಿಕ್ಷಣ, ಸ್ವಉದ್ಯೋಗಕ್ಕೆ ಪ್ರೋತ್ಸಾಹ, ಸಾಲ ಸೌಲಭ್ಯಕ್ಕೆ ಸಹಾಯ ಮಾಡಿರುವುದನ್ನು ಗುರುತಿಸಿ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024 ನೀಡಿ ಗೌರವಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನ ಡಾ ಧರಣಿದೇವಿ ಮಾಲಗತ್ತಿ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭ ಮಾಜಿ ಲೋಕಾಯುಕ್ತ ಡಾ.ಎನ್.ಸಂತೋಷ್ ಹೆಗ್ಡೆ, ಖ್ಯಾತ ಅಂಕಣಕಾರ ಇಂದ್ರಜಿತ್ ಲಂಕೇಶ್, ಚಲನಚಿತ್ರ ನಟರಾದ ಅನಿರುದ್ಧ ಜತಕರ ಮತ್ತು ತರುಣ್ ಸುಧೀರ್, ನಟಿ ಹರ್ಷಿಕಾ ಪೂಣಚ್ಚ, ಮಿಸಸ್ ಯುನಿವರ್ಸ್ ಸುಧಾ ಎಂ., ನಿರೂಪಕ ನಿರಂಜನ್ ಉಪಸ್ಥಿತರಿದ್ದರು.

ಸಾಧನಾ ಅವರು ಕೇವಲ 5 ವರ್ಷಗಳಲ್ಲಿ ಕಾರ್ಕಳ, ಹಗರಿಬೊಮ್ಮನಹಳ್ಳಿ, ಬೆಂಗಳೂರು ಹಾಗೂ ಮಂತ್ರಾಲಯದಲ್ಲಿ ಫ್ಯಾಷನ್ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ನೆಲೆಯಲ್ಲಿ ಉಚಿತ ಟೈಲರಿಂಗ್, ಉಚಿತ ಫ್ಯಾಶನ್ ವಿನ್ಯಾಸ ತರಬೇತಿ, ಬ್ಯಾಗ್ ತಯಾರಿಕೆ, ಗಾರ್ಮೆಂಟ್ ಫ್ಯಾಬ್ರಿಕ್ ಪೈಂಟಿಂಗ್, ಜುವೆಲ್ಲರಿ ಮೇಕಿಂಗ್ ತರಬೇತಿ ನೀಡುತ್ತಿದ್ದಾರೆ.

ಮೂಗ ಕಿವುಡ ವಿದ್ಯಾರ್ಥಿನಿಯರಿಗೆ, ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ಜೊತೆಗೆ ಸ್ವಉದ್ಯೋಗ ಮತ್ತು ಸಾಲ ಸೌಲಭ್ಯಕ್ಕೆ ಸಹಾಯ, ಶಿಕ್ಷಣ ಮುಗಿದ ಕೂಡಲೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಿ ಮಾನವೀಯತೆ ಹಾಗೂ ಸಮಾಜಸೇವೆ ಮೆರೆಯುತ್ತಿದ್ದಾರೆ.

ಅವರಿಗೆ ಈ ಹಿಂದೆ ಗೋಲ್ಡನ್ ಆಚಿವರ್ ಅವಾರ್ಡ್, ಶಿಕ್ಷಣ ರಾಷ್ಟ್ರೀಯ ರತ್ನ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಕೇಸರಿ ರತ್ನ ಪ್ರಶಸ್ತಿ, ಮಹಾತ್ಮ ಗಾಂಧಿ ಸಧ್ಬಾವನಾ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಹೆಮ್ಮೆಯ ಕನ್ನಡಿಗ, ರೋಟರಿ ಎಂಟಪ್ರಿನರ್ ಐಕಾನ್ ಅವಾರ್ಡ್ ಕೂಡ ದೊರೆತಿದೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ