ಶರೀಫರ ಅಭಿವೃದ್ಧಿ ಪ್ರಾಧಿಕಾರ ಬೇಡಿಕೆ ಈಡೇರಿಲ್ಲ

KannadaprabhaNewsNetwork |  
Published : Feb 27, 2026, 02:45 AM IST
ಪೊಟೋ ಪೈಲ್ ನೇಮ್  ೨೫ಎಸ್‌ಜಿವಿ೧ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿಧ್ಯಾಲಯ ಕನಕದಾಸರ ಹೇಸರು ನಿಯೋಜನೆಯನ್ನು ಮಾಡಬೇಕು.೨೫ಎಸ್‌ಜಿವಿ೧-೧ ತಾಲೂಕಿನ ಬಂಕಾಪೂರ ನೂತನ ತಾಲೂಕಾ ಘೋಷಣೆ ಮಾಡಬೇಕಾಗುವ ಬಂಕಾಪೂರದ ನಗರೇಶ್ವರ ದೇವಸ್ಥಾನ .  ೨೫ಎಸ್‌ಜಿವಿ೧-೧ ತಾಲೂಕಿನ  ಶಿಶುವಿನಹಾಳ ಶರೀಫಗಿರಿಯ ದೃಶ್ಯ  | Kannada Prabha

ಸಾರಾಂಶ

ಪ್ರಸಕ್ತ ಬಜೆಟ್‌ನಲ್ಲಿ ಶಿಗ್ಗಾಂವಿ-ಸವಣೂರ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟು ವಿಶೇಷ ಯೋಜನೆಗಳ ಘೋಷಣೆ, ಧಾರ್ಮಿಕ ಕ್ಷೇತ್ರ ಶಿಶುವಿನಾಳ ಶರೀಫರ ಹಾಗೂ ಗುರು ಗೋವಿಂದ ಭಟ್ಟರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅನುದಾನ ಮೀಸಲಿಡುವುದು ಕ್ಷೇತ್ರದ ತುರ್ತು ಅಗತ್ಯವಾಗಿದೆ.

ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಪ್ರಸಕ್ತ ಬಜೆಟ್‌ನಲ್ಲಿ ಶಿಗ್ಗಾಂವಿ-ಸವಣೂರ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟು ವಿಶೇಷ ಯೋಜನೆಗಳ ಘೋಷಣೆ, ಧಾರ್ಮಿಕ ಕ್ಷೇತ್ರ ಶಿಶುವಿನಹಾಳ ಶರೀಫರ ಹಾಗೂ ಗುರು ಗೋವಿಂದ ಭಟ್ಟರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅನುದಾನ ಮೀಸಲಿಡುವುದು ಕ್ಷೇತ್ರದ ತುರ್ತು ಅಗತ್ಯವಾಗಿದೆ. ಶಿಶುವಿನಾಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ರಚಿಸಬೇಕು ಎಂದು ತಾಲೂಕು ಜನತೆ ದಶಕಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದಾರೆ.

ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಇನ್ನೂ ಸಹ ವಸತಿ ರಹಿತ ಬಡವರು ಇದ್ದು, ಹೆಚ್ಚಿನ ಮನೆಗಳನ್ನು ಮಂಜೂರು ಮಾಡಬೇಕು, ಅಲ್ಲದೆ ಪಟ್ಟಾಗಳನ್ನು ನೀಡುವ ಯೋಜನೆಯು ಮಾರ್ಚಗೆ ಮುಕ್ತಾಯಗೊಳ್ಳುತ್ತಿದ್ದು, ಸಮಯವನ್ನು ವಿಸ್ತರಿಸಬೇಕು, ಈಗಾಗಲೇ ಕುಡಿಯುವ ನೀರಿನ ಯೋಜನೆಯ ಕೆಲಸ ಪ್ರಗತಿಯಲ್ಲಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ತೀವ್ರ ಒತ್ತಡವಿದೆ.

ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಕ್ಷೇತ್ರದಲ್ಲಿರುವ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ಇಡುವಂತೆ ಈ ಭಾಗದ ಸಾರ್ವಜನಿಕರ ಆಗ್ರವಾಗಿದೆ. ಶಿಗ್ಗಾಂವಿ ತಾಲೂಕು ಪ್ರವಾಸಿ ತಾಣವಾಗಿದ್ದು, ಕನಕದಾಸರ ಕರ್ಮ ಭೂಮಿ ಗುಡ್ಡದ ಚನ್ನಾಪುರ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಮನವಿ ಮಾಡುತ್ತಲೇ ಬರಲಾಗಿದೆ.

ಕ್ಷೇತ್ರದಲ್ಲಿ ಇನ್ನೂ ಐದು ಕೆಪಿಎಸ್‌ಸಿ ಶಾಲೆಗಳನ್ನು ಮಂಜೂರು ಮಾಡುವಂತೆ ವಿನಂತಿಸಲಾಗಿದ್ದು, ಹಾಗೆಯೇ ಎರಡು ವಸತಿ ಶಾಲೆಗಳನ್ನು ಮಂಜೂರು ಮಾಡುವಂತೆ ವಿನಂತಿಸಲಾಗಿದೆ, ಹುಲಸೊಗ್ಗಿ ಹಾಗೂ ಬಂಕಾಪುರ ಸಮೀಪದಲ್ಲಿ ಎರಡು ರೆಸಿಡೆನ್ಸಿ ಶಾಲೆಯನ್ನು ಮಂಜೂರಾತಿಗೆ ಮನವಿ ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಜನರಿಗೆ ಸರಿಯಾದ ಆರೋಗ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಹುಲಗೂರು ಕಾರಡಗಿ ಹಾಗೂ ತಡಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ ಹೋತನಳ್ಳಿ ಗ್ರಾಮಕ್ಕೆ ನೂತನವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಡಿಕೆ ಇದೆ.ಸವಣೂರ ಪುರಸಭೆ ಇದ್ದದ್ದನ್ನು ಮೇಲ್ದರ್ಜೆಗೆ ಏರಿಸಿ ನಗರಸಭೆಯನ್ನು ಮಾಡಬೇಕು, ತಡಸ ಹಾಗೂ ಹುಲಗೂರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಗ್ರಾಮಸ್ಥರು ಕೋರಿದ್ದಾರೆ.ವರದಾ ಏತ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಬಜೆಟ್‌ನಲ್ಲಿ ಹೆಚ್ಚಿನ ದುಡ್ಡನ್ನು ಮೀಸಲಿಡಬೇಕು. ಕೇವಲ ಕಾಗಿನೆಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಅದೆ ಮಾದರಿಯಲ್ಲಿ ಕನಕದಾಸರ ಹುಟ್ಟೂರಾದ ಬಾಡ – ಗುಡ್ಡದಚೆನ್ನಾಪೂರ ಸ್ಥಳಕ್ಕೆ ಹೆಚ್ಚಿನ ಅಭಿವೃದ್ಧಿ ಮಾಡಲು ಮುಂದಾಗಬೇಕು, ಬಂಕಾಪುರವು ಈ ಹಿಂದೆ ತಾಲೂಕು ಕೇಂದ್ರವಿತ್ತು. ಅದನ್ನು ಮರಳಿ ತಾಲೂಕು ಕೇಂದ್ರ ಎಂದು ಘೋಷಣೆ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಶಶಿಧರ ಹೊಣ್ಣನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ