ವಿವೇಕಾನಂದ ಜಯಂತಿಯ ಅಂಗವಾಗಿ ‘ಶತ ಜಯಘೋಷ್’ ಪರಿಕಲ್ಪನೆಯಲ್ಲಿ ಘೋಷ್ ಪಥಸಂಚಲನ ಕಾರ್ಯಕ್ರಮ ಮಂಗಳವಾರ ಪುತ್ತೂರಿನಲ್ಲಿ ನಡೆಯಿತು.
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಇಲ್ಲಿನ ಸಮೂಹ ಸಂಸ್ಥೆಗಳು ಪ್ರತಿವರ್ಷ ನಿರಂತರವಾಗಿ ರಾಷ್ಟ್ರ ಸಂತ ವಿವೇಕಾನಂದರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಈ ಭಾರಿ ವಿವೇಕಾನಂದ ಜಯಂತಿಯ ಅಂಗವಾಗಿ ‘ಶತ ಜಯಘೋಷ್’ ಪರಿಕಲ್ಪನೆಯಲ್ಲಿ ಘೋಷ್ ಪಥಸಂಚಲನ ಕಾರ್ಯಕ್ರಮ ಮಂಗಳವಾರ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು ಪುತ್ತೂರಿನ ಅಟಲ್ ಉದ್ಯಾನ ಕೊಂಬೆಟ್ಟು ಇಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ನಂತರ ಕಲ್ಲಾರೆ ಹಾಗೂ ಬೊಳುವಾರಿನಿಂದ ಏಕಕಾಲದಲ್ಲಿ ಪಥಸಂಚಲನ ಆರಂಭಗೊಂಡು ಪುತ್ತೂರಿನ ಮುಖ್ಯರಸ್ತೆಯಿಂದ ಸಂಚರಿಸಿ, ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಪನ್ನಗೊಂಡಿತು.
ವಿವೇಕಾನಂದ ವಿದ್ಯಾಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು ೧೫೦೦ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಅನಕ, ಪಣವ, ಶಂಖ, ವಂಶಿ, ತ್ರಿಭುಜ ಮತ್ತು ಜಲ್ಲರಿ, ಕೊಳಲು ಮೊದಲಾದ ವಾದ್ಯಪರಿಕರಗಳ ಜೊತೆ ಸಂಚಲನದಲ್ಲಿ ಭಾಗವಹಿಸಿದ್ದರು. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ರಥಬೀದಿಯಲ್ಲಿ ಜಯಘೋಷ್ ಪಥ ಸಂಚಲನದ ಸಮಾರೋಪ ಸಮಾರಂಭ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.