ಜೋಯಿಡಾ: ಬಸ್ ಶೆಲ್ಟರ್(ಕಬ್ಬಿಣದ ಶೆಲ್ಟರ್) ಉರುಳಿಬಿದ್ದ ಪರಿಣಾಮ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬರ ಕಾಲು ಮುರಿದ ಘಟನೆ ತಾಲೂಕಿನ ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿಯ ನಾಗೋಡಾ ಕ್ರಾಸ್ ಬಳಿ ಬುಧವಾರ ನಡೆದಿದೆ.
ಕೂಡಲೇ ಅವರನ್ನು ಜೋಯಿಡಾ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಎಲುಬು ಕೀಲು ವೈದ್ಯರು ಇಲ್ಲದೇ ಪ್ರಥಮ ಚಿಕಿತ್ಸೆ ಮಾತ್ರ ದೊರೆಯಿತು. ನಂತರ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಅಭಿವೃದ್ಧಿ ಪಥ ಹೆಸರಲ್ಲಿ ತಾಲೂಕಿನ ಅನೇಕ ಕಡೆ ಇಂತಹ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಆಸನಗಳು ಸರಿಯಿಲ್ಲ. ಚಾವಣಿಗೆ ಹಾಕಿದ ಸೀಟು, ಕಬ್ಬಿಣದ ಕಂಬಗಳು ತುಕ್ಕು ಹಿಡಿದಿವೆ. ನೆಲೆಗಟ್ಟು ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಹಳಿಯಾಳದಲ್ಲಿ ಲಾಂಗು ಹಿಡಿದು ಬರ್ತ್‌ಡೇ: 8 ಜನರ ವಿರುದ್ಧ ಕೇಸ್ಹಳಿಯಾಳ: ಜನ್ಮದಿನದ ಆಚರಣೆ ಹೆಸರಿನಲ್ಲಿ ಕೈಯಲ್ಲಿ ಲಾಂಗು- ಮಚ್ಚು ಹಿಡಿದು, ಕೇಕ್ ಕತ್ತರಿಸಿ ಅಟ್ಟಹಾಸ ಮೆರೆದು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ 8 ಮಂದಿ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹನುಮಂತಪ್ಪ ಕದರಮಂಡಲಗಿ ಅವರು ನೀಡಿದ ದೂರಿನ ಮೇರೆಗೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.ಆರೋಪಿತರಾದ ಮಲ್ಲಿಕ್ ರೆಹಾನ್ ಮಕಾನದಾರ್, ಸೌರಭ್, ನವಾಫ್ ಮುಲ್ಲಾ, ಸದಾಶಿವ ಫಿರವಾಲೆ ಸೇರಿದಂತೆ ಒಟ್ಟು 8 ಮಂದಿ ನ. 24ರಂದು ಸಂಜೆ ಜನ್ಮದಿನ ಆಚರಣೆ ವೇಳೆ ಲಾಂಗು, ಮಚ್ಚಿನಂತಹ ಮಾರಕ ಆಯುಧಗಳನ್ನು ಹಿಡಿದು, ಕೇಕ್ ಕತ್ತರಿಸಿ, ಕೂಗಾಡುತ್ತಾ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.