ನಂ 33 ಮಾಜಿ ಸೈನಿಕರ ಸಂಘ ಟಿ. ಶೆಟ್ಟಿಗೇರಿ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಪಟ್ಟಣದ ವೃತ್ತದಲ್ಲಿರುವ ಅಮರ ಜವಾನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಮಂಗಲ: ನಂ 33 ಮಾಜಿ ಸೈನಿಕರ ಸಂಘ ಟಿ. ಶೆಟ್ಟಿಗೇರಿ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿನ ಆಚರಿಸಲಾಯಿತು. ಪಟ್ಟಣದ ವೃತ್ತದಲ್ಲಿರುವ ಅಮರ ಜವಾನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಉಪಾಧ್ಯಕ್ಷ ಮನ್ನೇರ ರಮೇಶ್, ಕಾರ್ಯದರ್ಶಿ ಚಂಗುಲಂಡ ಸತೀಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ, ಖಜಾಂಚಿ ಚೆಟ್ಟಂಗಡ ವಿಜಯ ಕಾರ್ಯಪ್ಪ, ನಿರ್ದೇಶಕರಾದ ಮಚ್ಚಮಾಡ ಮನು ಕುಶಾಲಪ್ಪ, ಮಂದಮಾಡ ಬೆಳ್ಯಪ್ಪ, ಮೀದೇರಿರ ಸುರೇಶ, ಚೊಟ್ಟೆಯಂಡಮಾಡ ಅರಸು ಗೋಕುಲ, ಕರ್ನಂಡ ಕುಶಾಲಪ್ಪ, ಚೆಟ್ಟಂಗಡ ಪುಣ್ಯವತಿ, ಗೌರವ ಸಲಹೆಗಾರರಾದ ಕೈಬುಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ ಮತ್ತು ಸಂಘದ ಸದಸ್ಯರು, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ, ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಮತ್ತು ಸದಸ್ಯರು, ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಂಘದ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ ಮತ್ತು ಸದಸ್ಯರು, ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮತ್ತು ಟಿ. ಶೆಟ್ಟಿಗೇರಿ ಪ್ರೌಢಶಾಲೆ ಮಕ್ಕಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.