ಕನ್ನಡಪ್ರಭ ವಾರ್ತೆ ಮೂಲ್ಕಿ
ಶಿಬರೂರು ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ರೂಪವಾಗಿ ರು. 10 ಲಕ್ಷ ಬಂದಿರುವುದು ಸಂತಸ ತಂದಿದೆ ಎಂದು ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಹೇಳಿದ್ದಾರೆ.ಶಿಬರೂರು ಶ್ರೀ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡಮಾಡಿದ ರು. 10 ಲಕ್ಷ ಚೆಕ್ ಸ್ವೀಕರಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಅಭಯಚಂದ್ರಜೈನ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ 10 ಲಕ್ಷ ಬಂದ ನಂತರ ಶಿಬರೂರು ಕ್ಷೇತ್ರಕ್ಕೆ ಬರುವ ಎಲ್ಲ ಅನುದಾನಗಳು ಕೂಡಿ ಬರುತ್ತದೆ, ಕ್ಷೇತ್ರಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಅನುದಾನ, ಉದ್ಯಮಿಗಳ ಸಹಕಾರ ಬರಲಿ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಚೆಕ್ ಹಸ್ತಾಂತರಿಸಿದರು. ಶಿಬರೂರುಗುತ್ತು ಪ್ರಶಾಂತ್ ಶೆಟ್ಟಿ , ಸುಧಾಕರ ಶೇಣವ ದೇಂದೊಟ್ಟುಗುತ್ತು, ಜೀತೇಂದ್ರ ಶೆಟ್ಟಿ ಕೊರ್ಯಾರುಗುತ್ತು, ಶಿವಾನಂದ ಶೆಟ್ಟಿ ಪಡುಮನೆ, ಜಗದೀಶ್ ಶೆಟ್ಟಿ ಪರ್ಲಬೈಲು ಗುತ್ತು, ಸುಧಾಕರ ಶೆಟ್ಟಿ ಬಾಂಗಾವು, ಸೂರಿಂಜೆ ಪಂಚಾಯಿತಿ ಅಧ್ಯಕ್ಷೆ ಗೀತಾ ಶೆಟ್ಟಿ, ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬಜಪೆ ತಾಲೂಕು ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಮೇಲ್ವಿಚಾರಕ ಅರಣಾ ಸಾಲಿಯಾನ್, ಅಧ್ಯಕ್ಷ ರವೀಂದ್ರ ಭಟ್, ಕಾರ್ಯದರ್ಶಿಗಳಾದ ಆಶಾ ಶೆಟ್ಟಿ ಶಿಬರೂರು, ಸುಜಾತಾ ಶೆಟ್ಟಿ ಕೊರ್ಯಾರು, ರೋಹಿತಾಶ್ವ ಆಚಾರ್ಯ, ಸುಮನ್ ಶೆಟ್ಟಿ, ವಿನೀತ್ ಶೆಟ್ಟಿ, ಗೀತಾ ಮಡಿವಾಳ, ಸುರೇಶ್ ಕೈಯೂರು, ದಿನೇಶ್ ಕುಲಾಲ್, ನಿತ್ಯನ್ ಶೆಟ್ಟಿ ಶಿಬರೂರು ಗುತ್ತು, ಪ್ರಭಾಕರ ಶೆಟ್ಟಿ ಪೊಸಕಟ್ಟ ಮತ್ತಿತರರು ಇದ್ದರು.
24ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳ ವಾರ್ಷಿಕ ಜಾತ್ರೆಮೂಲ್ಕಿ ಸೀಮೆ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ 24ರಿಂದ 31ರ ವರೆಗೆ ನಡೆಯಲಿದೆ. 23ರಂದು ಅಂಕುರಾರೋಹಣ, 24 ರಂದು ಮಧ್ಯಾಹ್ನ 11.30ಕ್ಕೆ ಧ್ವಜಾರೋಹಣ, ಬಪ್ಪನಾಡು ಶ್ರೀ ದೇವಿ ಮತ್ತು ಸಸಿಹಿತ್ತುಶ್ರೀ ಭಗವತಿ ಯವರ ಭೇಟಿ, ರಾತ್ರಿ 7 ಗಂಟೆಗೆ ಉತ್ಸವ ಬಲಿ ನಡೆಯಲಿದೆ.
25ರಂದು ರಾತ್ರಿ 7ಕ್ಕೆ ಉತ್ಸವ ಬಲಿ, 26ರಂದು ರಾತ್ರಿ 7ಕ್ಕೆ ಪೇಟೆ ಸವಾರಿ, 27ರಂದು ರಾತ್ರಿ 7ಕ್ಕೆ ಕೊಪ್ಪಲ ಸವಾರಿ, 28ರಂದು ರಾತ್ರಿ 7ಕ್ಕೆ ಬಾಕಿಮಾರು ದೀಪೋತ್ಸವ, 29ರಂದು ರಾತ್ರಿ 7ರಿಂದ ಕೆರೆ ದೀಪೋತ್ಸವ, 30ರಂದು ಮಧ್ಯಾಹ್ನ 12 ಗಂಟೆಗೆ ಹಗಲು ರಥೋತ್ಸವ, ರಾತ್ರಿ 7.30ರಿಂದ ಉತ್ಸವ ಬಲಿ ಹಾಗೂ ಶಯನೋತ್ಸವ,31ರಂದು ಬೆಳಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಸಂಜೆ 7 ಗಂಟೆಗೆ ಉತ್ಸವ ಬಲಿ,ರಾತ್ರಿ ಓಕುಳಿ, ಬಪ್ಪನಾಡು ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯರ ಭೇಟಿ, ಮಹಾರಥೋತ್ಸವ, ಜಳಕದ ಬಲಿ, ಅವಭೃತ, ಧ್ವಜಾವರೋಹಣ ನಡೆಯಲಿದೆ. ದೇವಿಗೆ ಹರಕೆ ಯಾಗಿ ಬಂದಿರುವ ಸೀರೆಗಳನ್ನು 29ರಂದು ಬೆಳಗ್ಗೆ 10 ಗಂಟೆಯಿಂದ ಬಹಿರಂಗ ಏಲಂ ಮಾಡಲಾಗುವುದು.ಏ.1ಂರಂದು ಭಕ್ತಾದಿಗಳಿಂದ ಹಣ್ಣುಕಾಯಿ ಸಮರ್ಪಣೆ, ಸೇವಾದಿಗಳು, ಏ.2ರಂದು ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಏ.4ರಂದು ದೇವಳದ ಆಡಳಿತಕ್ಕೆ ಒಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ತಾನದಲ್ಲಿ ಶ್ರೀ ಜಾರಂದಾಯ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ಆನುವಂಶಿಕ ಮೊಕ್ತೇಸರ ಮೂಲ್ಕಿ ಅರಮನೆ ದುಗ್ಗಣ್ಣ ಸಾವಂತರು, ಆನುವಂಶಿಕ ಹಾಗೂ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ ,ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.