ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಶಿವಮೊಗ್ಗ ಹಬ್ಬ

KannadaprabhaNewsNetwork |  
Published : Sep 25, 2024, 12:57 AM IST
ಪೊಟೋ: 23ಎಸ್‌ಎಂಜಿಕೆಪಿ08ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಸೋಮವಾರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ(ಎಸ್‌ಡಿಸಿಸಿಐ) ಅಧ್ಯಕ್ಷರಾಗಿ ಬಿ.ಗೋಪಿನಾಥ್ ಆಯ್ಕೆಯಾಗಿದ್ದಾರೆ.

ಬಿ.ಗೋಪಿನಾಥ್ ಅವರು 19 ವರ್ಷಗಳಿಂದ ಎಸ್‌ಡಿಸಿಸಿಐ ಸದಸ್ಯರಾಗಿದ್ದು, 4 ವರ್ಷ ನಿರ್ದೇಶಕರಾಗಿ, 5 ವರ್ಷ ಕಾರ್ಯದರ್ಶಿ ಹಾಗೂ 3 ವರ್ಷ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಬಿ.ಗೋಪಿನಾಥ್, ಎಲ್ಲ ಸದಸ್ಯರ ಸಹಕಾರದಿಂದ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಲು ಶ್ರಮಿಸುತ್ತೇನೆ. ಸಂಘದಿಂದ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಮುಂದುವರೆಸುವ ಜತೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಎರಡು ವರ್ಷಗಳ ಅವಧಿಯಲ್ಲಿ ಜಾಗೃತಿ ಕಾರ್ಯಕ್ರಮ, ತರಬೇತಿ ಶಿಬಿರ, ಕಾರ್ಯಾಗಾರ ಹಾಗೂ ವಿಶೇಷ ಸಭೆಗಳನ್ನು ನಡೆಸಲಾಗುವುದು. ಎಲ್ಲ ವರ್ಗದ ಉದ್ಯಮಿಗಳೊಂದಿಗೆ ಚರ್ಚಿಸಿ ಆಗಬೇಕಿರುವ ಕೆಲಸಗಳನ್ನು ಎಂಎಲ್‌ಎ, ಎಂಎಲ್‌ಸಿ, ಎಂಪಿ ಗಳ ಗಮನಕ್ಕೆ ತರಲಾಗುವುದು. ಶಿವಮೊಗ್ಗ ಬ್ರ್ಯಾಂಡ್ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಶಿವಮೊಗ್ಗ ಹಬ್ಬ ಆಯೋಜಿಸಲಾಗುವುದು ಎಂದರು.

ಅಡ್ವಾನ್ಸ್ಡ್‌ ಸ್ಕಿಲ್ ಅಕಾಡೆಮಿಯ ತರಬೇತಿಗಳನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸಲು ಶ್ರಮಿಸಲಾಗುವುದು. ಪ್ರವಾಸೋದ್ಯಮ ಸರ್ಕ್ಯೂಟ್ ರಚನೆ, ಇ-ವೇಸ್ಟ್ ಪ್ರಾಜೆಕ್ಟ್ ಸೇರಿ ವಿಶೇಷ ಯೋಜನೆಗಳನ್ನು ಸಾಕಾರಗೊಳಿಸಲಾಗುವುದು. ಅಧ್ಯಯನ ದೃಷ್ಟಿಯಿಂದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಬೆಳವಣಿಗೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮಹತ್ವ ಪಾತ್ರ ವಹಿಸುವುದು. ಎಸ್‌ಡಿಸಿಸಿಐ ನಿಯೋಗ ಸಮಿತಿ ರಚಿಸುವುದು. ಶಿವಮೊಗ್ಗ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿ, ಶಾಸಕರು, ಸಚಿವರೊಂದಿಗೆ ಪದಾಧಿಕಾರಿಗಳು ಸಮಾಲೋಚನೆ ನಡೆಸುತ್ತೇವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಲ್ಲ ಹಿರಿಯರು ಜ್ಞಾನ, ಅನುಭವವನ್ನು ಹಂಚಿಕೊಂಡು ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಹಕಾರ ನೀಡಬೇಕು. ಎಸ್.ರುದ್ರೇಗೌಡ, ವಸಂತಕುಮಾರ್, ಅಶ್ವತ್ಥ್ ನಾರಾಯಣ ಶೆಟ್ಟಿ, ಮಹೇಂದ್ರಪ್ಪ, ಡಿ.ಎಸ್.ಅರುಣ್, ಶಂಕರಪ್ಪ, ಜೆ.ಆರ್.ವಾಸುದೇವ್, ಎನ್.ಗೋಪಿನಾಥ್ ಹಾಗೂ ಎಲ್ಲ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನೂತನ ಪದಾಧಿಕಾರಿಗಳು

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ಎಸ್‌ಡಿಸಿಸಿಐ) ನೂತನ ಪದಾಧಿಕಾರಿಗಳು:

ಬಿ.ಗೋಪಿನಾಥ್-ಅಧ್ಯಕ್ಷ, ಜಿ.ವಿಜಯಕುಮಾರ್-ಉಪಾಧ್ಯಕ್ಷ, ಸುರೇಶ್.ಎ.ಎಂ-ಕಾರ್ಯದರ್ಶಿ, ಸುಕುಮಾರ್.ಕೆ.ಎಸ್.-ಜಂಟಿ ಕಾರ್ಯದರ್ಶಿ, ಮನೋಹರ.ಆರ್-ಖಜಾಂಚಿ, ಎನ್.ಗೋಪಿನಾಥ್-ನಿಕಟಪೂರ್ವ ಅಧ್ಯಕ್ಷ.

ಯಾರ್‍ಯಾರಿಗೆ ಯಾವ್ಯಾವ ಸಮಿತಿ ?

ವಿವಿಧ ಉಪಸಮಿತಿಗಳ ಅಧ್ಯಕ್ಷರು: ವಸಂತ ಹೋಬಳಿದಾರ್-ಅಡ್ವಾನ್ಸ್ಡ್‌ ಸ್ಕಿಲ್ ಅಭಿವೃದ್ಧಿ ಸಮಿತಿ, ಎಸ್.ಎಸ್‌. ಉದಯಕುಮಾರ-ರೈಲ್ವೆ ಅಭಿವೃದ್ಧಿ ಸಮಿತಿ, ಪಿ.ರುದ್ರೇಶ್-ಪ್ರವಾಸೋದ್ಯಮ ಸಮಿತಿ, ಪ್ರದೀಪ್ ಯಲಿ-ಎಂಎಸ್‌ಎಂಇ ಮತ್ತು ಸರ್ಕಾರದ ಯೋಜನೆಗಳ ಜಾಗೃತ ಸಮಿತಿ, ಮಂಜೇಗೌಡ-ಸದಸ್ಯತ್ವ ಅಭಿವೃದ್ಧಿ ಸಮಿತಿ, ಗಣೇಶ ಅಂಗಡಿ-ಮೂಲಸೌಕರ್ಯ ಅಭಿವೃದ್ಧಿ ಸಮಿತಿ, ನರೇಂದ್ರ-ಎಕ್ಸ್‌ಪೋರ್ಟ್ ಮತ್ತು ಐಪಿ ಫೆಸಿಲಿಟೆಷನ್ ಸೆಂಟರ್ ಸ್ಟಾರ್ಟ್ಅಪ್ ಇನ್ನೋವೆಟಿವ್ ಸಮಿತಿ, ವಿ.ಕೆ.ಜೈನ್-ಟ್ರೇಡ್ ಫೆಸಿಲಿಟೆಷನ್ ಸಮಿತಿ, ರಾಜಶೇಖರ ಕೆ.ಎನ್-ಎಪಿಎಂಸಿ ಮತ್ತು ಕೃಷಿ ಸಮಿತಿ, ಕಿರಣ್-ಕೈಗಾರಿಕಾ ಅಭಿವೃದ್ಧಿ ಸಮಿತಿ, ಶಿವಕುಮಾರ್-ಪರಿಸರ ಸಮಿತಿ, ಶಂಕರ ಎಸ್.ಪಿ-ಜಿಲ್ಲಾ ಮತ್ತು ತಾಲೂಕು ಅಭಿವೃದ್ಧಿ ಸಮಿತಿ, ಸಿ.ಎ.ಶರತ್-ಪ್ರೋಗ್ರಾಂ ಕಮಿಟಿ ಮತ್ತು ತೆರಿಗೆ ಸಮಿತಿ, ಲಕ್ಷ್ಮೀದೇವಿ ಗೋಪಿನಾಥ್-ಮಹಿಳಾ ಅಭಿವೃದ್ಧಿ ಸಮಿತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!