ಸೌಟು ಹಿಡಿಯುವ ಕೈಯಲ್ಲಿ ಬ್ಯಾಟ್ ಹಿಡಿದು ಪ್ರಜ್ವಲಿಸಿ: ಲಕ್ಷ್ಮೀ

KannadaprabhaNewsNetwork |  
Published : Mar 22, 2024, 01:04 AM ISTUpdated : Mar 22, 2024, 01:05 AM IST
ಸೌಟು ಹಿಡಿಯುವ ಕೈಯಲ್ಲಿ ಬ್ಯಾಟ್ ಹಿಡಿದು ಪ್ರಜ್ವಲಿಸಿ-ಲಕ್ಷ್ಮಿ | Kannada Prabha

ಸಾರಾಂಶ

ಇತ್ತೀಚೆಗೆ ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸಿ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಇನ್ನು ಕೆಲವು ಕ್ರೀಡೆಗಳಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಪ್ರಗತಿ ಆಗುತ್ತಿಲ್ಲ. ಸೌಟು ಹಿಡಿಯುವ ಕೈಯಲ್ಲಿ ಬ್ಯಾಟ್ ಹಿಡಿದು ಪ್ರಜ್ವಲಿಸಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಇತ್ತೀಚೆಗೆ ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸಿ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಇನ್ನು ಕೆಲವು ಕ್ರೀಡೆಗಳಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಪ್ರಗತಿ ಆಗುತ್ತಿಲ್ಲ. ಸೌಟು ಹಿಡಿಯುವ ಕೈಯಲ್ಲಿ ಬ್ಯಾಟ್ ಹಿಡಿದು ಪ್ರಜ್ವಲಿಸಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮೀ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ನಗರದ ಜಿಲ್ಲಾ ಪೋಲಿಸ್ ಆಟದ ಮೈದಾನದಲ್ಲಿ ನಡೆದ ೨೦೨೩-೨೪ನೇ ಸಾಲಿನ ಚಾಮರಾಜನಗರ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವೈಜ್ಞಾನಿಕವಾಗಿ ಪ್ರಪಂಚ ಮುಂದುವರಿದಿದ್ದು, ಮಹಿಳೆಯರು ಅಂತರಿಕ್ಷಕ್ಕೂ ಹೋಗಿ ಬಂದಿದ್ದಾರೆ. ಇನ್ನು ಲೆಮನ್ ಆ್ಯಂಡ್ ಸ್ಪೂನ್ ರೇಸ್, ಮ್ಯೂಸಿಕಲ್ ಚೇರ್ ಅಂತ ಕೂರಬಾರದು. ಬ್ಯಾಟ್ ಹಿಡಿಯಬೇಕು, ವಾಲಿಬಾಲ್, ಪುಟ್ಪಾಲ್‌ನಂತಹ ಕ್ರೀಡೆಗಳಲ್ಲಿ ತಮ್ಮ ಸಾಮರ್ಥ್ಯ ತೋರಬೇಕು. ಮಹಿಳಾ ಕ್ರೀಡಾ ಸಾಧಕರು ನಿಮಗೆ ಸ್ಪೂರ್ತಿ ಆಗಬೇಕು ಎಂದು ಧೈರ್ಯ ತುಂಬಿದರು. ಕ್ರೀಡೆಯಲ್ಲಿ ತೊಡಗಿಕೊಂಡು ಮಹಿಳೆಯರು ಮಾನಸಿಕವಾಗಿ ಸಾಕಷ್ಟು ಸದೃಡರಾಗಬೇಕು. ಮಹಿಳೆಯರು ಕ್ರೀಡೆಯಲ್ಲಿ ನಾವೇನು ಕಡಿಮೆ ಇಲ್ಲವೆನ್ನುವುಂತೆ ಅಂತಾರಾಷ್ಟೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಮಹಿಳಾ ಕ್ರೀಡಾಕೂಟವನ್ನು ಆಯೋಜಿಲಸಲಾಗಿದ್ದು, ಇಲ್ಲಿ ವಿಜೇತರಾದವರಿಗೆ ೨೬ ರಂದು ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದರು.ಮಹಿಳೆಯರಿದ್ದಲ್ಲಿ ಜಗಳ ಎನ್ನುತ್ತಾರೆ ಅದನ್ನು ಹೋಗಲಾಡಿಸಬೇಕು. ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡ ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ, ಮಹಿಳೆಯರು ಸ್ಟ್ರಾಂಗ್ ಎನ್ನುವುದನ್ನು ನಿರೂಪಿಸಿ ಎಂದು ಶುಭ ಹಾರೈಸಿದರು. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲೂಕಿನ ವಿದ್ಯಾರ್ಥಿನಿಯರು ಹಾಗೂ ಸಂಘ ಸಂಸ್ಥೆಗಳ ಯುವತಿಯರು, ಮಹಿಳೆಯರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಂಗನವಾಡಿ, ಆಶಾ ಕಾಯಕರ್ತೆತಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಲೆಮನ್ ಆ್ಯಂಡ್ ಸ್ಪೂನ್ ರೇಸ್, ಮ್ಯೂಸಿಕಲ್ ಚೇರ್, ಲಕ್ಕಿ ಸ್ಟೇಷನ್, ಗುಂಪು ಸ್ಪರ್ಧೆ, ಹಗ್ಗ ಜಗ್ಗಾಟ, ಕ್ರಿಕೆಟ್ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ, ನಾಗರಾಜು, ಎಸ್ಪಿ ಕಚೇರಿಯ ಮಂಜುಳಾ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಸುಶೀಲ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌