ಸಾವಳಗಿ: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಬಳಿಕ ದೇಶ-ವಿದೇಶಗಳಲ್ಲೂ ಖ್ಯಾತಿ ಗಳಿಸಿರುವ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಕೆತ್ತನೆಯ ನಂದಿ ವಿಗ್ರಹ, ಶಿವನ ಮೂರ್ತಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿದೆ.
ಕನ್ನಡಪ್ರಭ ವಾರ್ತೆ ಸಾವಳಗಿ
ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಬಳಿಕ ದೇಶ-ವಿದೇಶಗಳಲ್ಲೂ ಖ್ಯಾತಿ ಗಳಿಸಿರುವ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಕೆತ್ತನೆಯ ನಂದಿ ವಿಗ್ರಹ, ಶಿವನ ಮೂರ್ತಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿದೆ.
ಸಾವಳಗಿಯಿಂದ ಕನ್ನೊಳ್ಳಿ ಮಾರ್ಗವಾಗಿ 2 ಕಿ.ಮೀ ಅಂತರದಲ್ಲಿ ದಿ.ಕೆ.ಕೆ.ಬ್ಯಾಡಗಿ ಅವರ ಕುಟುಂಬಸ್ಥರ ಕೃಷಿ ಭೂಮಿಯಲ್ಲಿ ಶಿವ, ನಂದಿಯ ಮಂಟಪ ಕಾಣಸಿಗುತ್ತದೆ. ಸುತ್ತಮುತ್ತಲ್ಲಿರುವ ಹಚ್ಚ ಹಸುರಿನ ಸಿರಿಯ ಪ್ರಕೃತಿ ಸೌಂದರ್ಯದಿಂದ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ವಿಜಯಪುರ ಜ್ಞಾನ ಯೋಗಾಶ್ರಮ ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳ ಅಮೃತ ಹಸ್ತದಿಂದ 17-8-2018ರಂದು ಉದ್ಘಾಟನೆಗೊಂಡ 6 ಅಡಿ ಎತ್ತರ, 8 ಅಡಿ ಉದ್ದದ ಕೃಷ್ಣ ಶಿಲೆಯಲ್ಲಿನ ಸಂದರವಾದ ನಂದಿ ವಿಗ್ರಹ, ಶಿವನ ವಿಗ್ರಹ ನೋಡಲು ಆಕರ್ಷಕವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.