- 15ರಲ್ಲಿ ಬಾಕಿ 6 ಸ್ಥಾನಗಳಿಗೆ ಚುನಾವಣೆ । 2 ಕ್ಷೇತ್ರ ಫಲಿತಾಂಶ ಘೋಷಣೆಗೆ ತಡೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
6 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಘೋಷಣೆ ಮಾಡಲಾಗಿದೆ. ಉಳಿದ ಚೀಲೂರು ಮತ್ತು ಸಾಸ್ವೇಹಳ್ಳಿ ಕ್ಷೇತ್ರಗಳ ಫಲಿತಾಂಶ ಉಚ್ಛ ನ್ಯಾಯಾಲಯ ಆದೇಶದ ರೀತ್ಯಾ ಘೋಷಣೆ ತಡೆಹಿಡಿಯಲಾಗಿದೆ ಎಂದು ಚುನಾವಣಾಧಿಕಾರಿ ನವೀನ್‌ಕುಮಾರ್ ತಿಳಿಸಿದ್ದಾರೆ.
ವಿಜೇತರು:ಬೆನಕನಹಳ್ಳಿ (ಸಾಮಾನ್ಯ) ಎಚ್.ಜಿ. ರುದ್ರೇಶ್- 162 ಮತಗಳು, ಕುಂದೂರು ಕ್ಷೇತ್ರ (ಮಹಿಳಾ) ಗೀತಾ ಜಿ. ಗುರುರಾಜ್- 89 ಮತಗಳು, ಬೆಳಗುತ್ತಿ ಕ್ಷೇತ್ರ (ಹಿಂ ವರ್ಗ ಬ) ನಾಗರಾಜಪ್ಪ ಟಿ.- 69 ಮತಗಳು, ಸುರಹೊನ್ನೆ (ಸಾ) ಕ್ಷೇತ್ರ ಎಸ್. ಸದಾಶಿವಪ್ಪ- 49 ಮತ ಪಡೆದು ಜಯಗಳಿಸಿದ್ದಾರೆ ಎಂದು ತಿಳಿಸಿದರು.
ಎ.ಜಿ. ಪ್ರಕಾಶ್- ಅರಬಗಟ್ಟೆ ಕ್ಷೇತ್ರ, ಡಿ.ಪಿ. ರಂಗನಾಥ್- ಹೊನ್ನಾಳಿ ಕ್ಷೇತ್ರ, ಬಿ.ಜಿ. ಶಿವಮೂರ್ತಿ- ಅರಕೆರೆ ಕ್ಷೇತ್ರ, ಎಂ.ಜಿ. ಲೋಕೇಶ್- ಕೂಲಂಬಿ ಕ್ಷೇತ್ರ, ಮಂಜುಳಾ ವೀರಭದ್ರ ಪಾಟೀಲ್- ಗೋವಿನಕೋವಿ ಕ್ಷೇತ್ರ, ಗದ್ದಿಗೇಶಾಚಾರ್- ನ್ಯಾಮತಿ ಕ್ಷೇತ್ರ, ಗೋಪಾಲ ನಾಯ್ಕ- ಎಸ್ಸಿ ಮೀಸಲು ಕ್ಷೇತ್ರ, ಟಿ.ಎಂ. ಶಿವಾನಂದ್- ಎಸ್.ಟಿ. ಮೀಸಲು ಕ್ಷೇತ್ರ, ಟಿ.ಚಂದ್ರಪ್ಪ- ಸವಳಂಗ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ನವೀನ್‌ಕುಮಾರ್ ತಿಳಿಸಿದ್ದಾರೆ.
- - -
- - -
ಹೊನ್ನಾಳಿ ಶಿವ ಬ್ಯಾಂಕ್‌ಗೆ ನಡೆದ ಚುನಾವಣೆ ವಿಜೇತ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.