ನಾಗದೇವತೆ ವಾರ್ಷಿಕೋತ್ಸವದಲ್ಲಿ ಮಿಂದೆದ್ದ ಶಿವಗಣ

KannadaprabhaNewsNetwork |  
Published : Feb 18, 2026, 01:15 AM IST
ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್‌. | Kannada Prabha

ಸಾರಾಂಶ

ರಾಮನಗರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಸಮಾಜ ಸೇವಕ ಭೋಜರಾಜು ಕುಟುಂಬದವರಿಂದ ನಡೆದ ಧಾರ್ಮಿಕ ಪೂಜಾ ಕಾರ್ಯಗಳು, ಅನ್ನಸಂತರ್ಪಣೆ, ಅಂಬಾರಿ ಉತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನೆರವೇರಿದವು

ರಾಮನಗರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಸಮಾಜ ಸೇವಕ ಭೋಜರಾಜು ಕುಟುಂಬದವರಿಂದ ನಡೆದ ಧಾರ್ಮಿಕ ಪೂಜಾ ಕಾರ್ಯಗಳು, ಅನ್ನಸಂತರ್ಪಣೆ, ಅಂಬಾರಿ ಉತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಯಶಸ್ವಿಯಾಗಿ ನೆರವೇರಿದವು.

ಶ್ರೀ ಅರ್ಕೇಶ್ವರ ದೇವಾಲಯ ಮತ್ತು ನಾಗದೇವಾಲಯವನ್ನು ವಿವಿಧ ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ನೆರವೇರಿಸಿದ ನಂತರ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದ ಭೋಜರಾಜು, ಹಲವು ವರ್ಷಗಳಿಂದ ನಮ್ಮ ತಾಯಿಯವರ ಆಸೆಯಂತೆ ಮಹಾಶಿವರಾತ್ರಿ ಹಬ್ಬದಲ್ಲಿ ಪಶ್ಚಿಮಾಭಿಮುಖವಾಗಿ ಭಕ್ತರಿಗೆ ದರ್ಶನ ನೀಡುತ್ತಿರುವ ಶ್ರೀ ಅರ್ಕೇಶ್ವರಸ್ವಾಮಿ ಸನ್ನಿಧಿಯಲ್ಲಿ ಎರಡು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ, ವಿಶೇಷ ಪೂಜೆ, ಅನ್ನಸಂತರ್ಪಣೆ ನೆರವೇರಿಸುವ ಸಂಪ್ರದಾಯವನ್ನು ನಮ್ಮ ಕುಟುಂಬವು ನಡೆಸಿಕೊಂಡು ಬಂದಿದೆ ಎಂದರು.

ನಾಗದೇವಾಲಯದ 7ನೇ ವರ್ಷದ ವಾರ್ಷಿಕೋತ್ಸವ ಮತ್ತು 5ನೇ ವರ್ಷದ ಆನೆಗಳ ಮೇಲೆ ದೇವರ ಉತ್ಸವ ಕಾರ್ಯಕ್ರಮಗಳು ನೆರವೇರುತ್ತಿದೆ. ಈ ವರ್ಷವೂ ಸಹ 10 ಸಾವಿರಕ್ಕೂ ಹೆಚ್ಚು ಜನರು ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತಸ ತಂದಿದೆ. ರಾಮನಗರದ ಮಿನಿ ದಸರಾದಂತೆ ನಡೆದ ಈ ಕಾರ್ಯಕ್ರಮಕ್ಕೆ ಜನಪದ ಕಲೆಗಳು, ಎರಡು ಆನೆಗಳು ಹಾಗೂ ವಿದ್ಯುತ್ ದ್ವೀಪದ ಅಲಂಕಾರ ವಿಶೇಷ ಮೆರಗು ನೀಡಿವೆ. ನನಗೆ ಇದರಿಂದ ಮತ್ತಷ್ಟು ಕೆಲಸಗಳು ಮಾಡಲು ಸ್ಫೂರ್ತಿ ಸಿಕ್ಕಿದಂತಾಗಿದೆ ಎಂದು ಹೇಳಿದರು.

ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ವಿವಿಧ ಅಲಂಕಾರ ಮಾಡಲಾಗಿತ್ತು, ದೇವಾಲಯದ ಮುಂಭಾಗ ತೇರು ಬೀದಿಯವರೆಗೆ ಸಿಂಗರಿಸಿದ್ದ ಕಮಾನು ಮಂಟಪ, ವಿದ್ಯುತ್ ದೀಪಲಂಕಾರಗಳು ಆಕರ್ಷಣೆಯಿಂದ ಕೂಡಿತ್ತು. ಆ ಮೂಲಕ ಆಗಮಿಸಿದ ಎಲ್ಲ ಭಕ್ತರಿಗೆ ಧಾರ್ಮಿಕ ಸಂಭ್ರಮದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ಸಾವಿರಾರು ಭಕ್ತರಿಗೆ ಅನ್ನದಾನ ನಡೆಯಿತು.

ಈ ವೇಳೆ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ ಕುಮಾರ್, ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್‌ನಾಗರಾಜು, ಕಬ್ಬಡಿಬಾಬು, ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ, ಮುಖಂಡರಾದ ಶಿವುಗೌಡ, ವೆಂಕಟೇಶ್, ಸುರೇಶ್, ಸ್ನೇಕ್‌ಹರೀಶ್, ಶೇಷಣ್ಣ ಸೇರಿದಂತೆ ಭೋಜ್‌ರಾಜ್ ಕುಟುಂಬ ವರ್ಗದವರು ಪಾಲ್ಗೊಂಡಿದ್ದರು.

ಸಂಜೆ ಕೆಂಪೇಗೌಡ ವೃತ್ತದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಎರಡು ಆನೆಗಳ ಮೇಲೆ ಶ್ರೀ ಅರ್ಕೇಶ್ವರಸ್ವಾಮಿ ಮತ್ತು ವೇಣುಗೋಪಾಲಸ್ವಾಮಿ ದೇವರುಗಳನ್ನು ವಿವಿಧ ಜನಪದ ಕಲೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವೀರಗಾಸೆ, ಡೊಳ್ಳುಕುಣಿತ, ಪಟಕುಣಿತ, ಕಂಸಾಳೆ, ಕೋಳಿ ನೃತ್ಯ, ಕೀಲು ಕುದುರೆಯಂತಹ ಹತ್ತು ಹಲವು ವೈವಿದ್ಯಮಯ ಕಲಾ ಪ್ರದರ್ಶನಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನತೆ ಶಿವ ಭಕ್ತ ಸಾಗರದಲ್ಲಿ ಮಿಂದೆದ್ದರು.

ಕೋಟ್ ..............

ನಮ್ಮ ತಾಯಿಯವರ ಆಸೆಯಂತೆ ನನ್ನ ಸ್ವಂತ ಖರ್ಚಿನಲ್ಲಿ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಅಂಬಾರಿ ಮೆರವಣಿಗೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರಿಗೆ ತೃಪ್ತಿಯಾಗುವಂತೆ ನೆರವೇರಿಸಿರುವ ತೃಪ್ತಿ ನನಗಿದೆ. ೭ನೇ ವರ್ಷದ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕರು, ಚುನಾಯಿತ ಪ್ರತಿನಿಧಿಗಳು, ಸಮಾಜ ಸೇವಕರು, ಸ್ನೇಹಿತರು ಹಾಗೂ ಭಕ್ತರು ಆಗಮಿಸಿ ಯಶಸ್ವಿಗೊಳಿಸಿ ರುವುದಕ್ಕೆ ಕೃತಜ್ಙತೆ ಸಲ್ಲಿಸುತ್ತೇನೆ.

-ಬೋಜರಾಜು, ಸಮಾಜ ಸೇವಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವೆ: ಬಿ.ವೈ.ವಿಜಯೇಂದ್ರ
ಸುಬ್ಬಾರೆಡ್ಡಿ ಅನರ್ಹ: ಮರು ಚುನಾವಣೆಗೆ ಸಿಪಿಐಎಂ ಒತ್ತಾಯ