ಕನ್ನಡಪ್ರಭ ವಾರ್ತೆ ಮಾಲೂರು
ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರ
ಶಿವಾಚಾರ ವೈಶ್ಯ ನಗರ್ತರ ಸಮುದಾಯವು ಕಡಿಮೆ ಸಂಖ್ಯೆ ಹೊಂದಿದ್ದು, ಅರ್ಥಿಕ,ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಯಾವುದೇ ಸಮುದಾಯ ಮುಂದು ವರೆಯಬೇಕಾದರೆ ಪ್ರಮುಖ ಆಸ್ತ್ರವೇ ಶಿಕ್ಷಣ. ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಜವಾಬ್ದಾರಿ ವಹಿಸಬೇಕು. ಹಾಗೇಯೇ ಮಕ್ಕಳು ಸಹ ಓದಿನ ಕಡೆ ಗಮನ ನೀಡಿ ತಮಗೆ ಸಿಗುವ ಸರ್ಕಾರದ ಸವಲತ್ತು ಹಾಗೂ ದಾನಿಗಳ ಸಹಕಾರವನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದರು.ನಗರ್ತ ಲಿಂಗಾಯಿತರೆಂದೇ ನಮೂದಿಸಿ
ನಮ್ಮ ಸಮುದಾಯವು ನಗರ್ತ ಲಿಂಗಾಯಿತ ವೀರಶೈವ ಸಮುದಾಯದ ಒಂದು ಉಪ ಪಂಗಡವಾಗಿದೆ. ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಾಮಾಜಿಕ ಮೀಸಲಾತಿಯನ್ನು ಪುನರ್ ಪರಿಶೀಲಿಸಿ ಮತ್ತೂಮ್ಮೆ ಸಮೀಕ್ಷೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿರುವುದರಿಂದ ನಮ್ಮ ಸಮುದಾಯದ ಬಡವರಿಗೆ ಸಹಕಾರವಾಗಲಿದೆ. ಸಮೀಕ್ಷೆದಾರರು ಮನೆ ಬಾಗಿಲಿಗೆ ಬಂದಾಗ ಆಯೋಧ್ಯ ನಗರ ಶಿವಾಚಾರ ನಗರ್ತ ಸಮುದಾಯದವರು ನಗರ್ತ ಲಿಂಗಾಯಿತರು ಎಂದು ನಮೂದಿಸಿ ಎಂದರು.ಸಮುದಾಯದ ಹಿರಿಯರಾದ ಜಿ.ಎಸ್ ,ಗುಂಡಪ್ಪ,ಸಿ.ಎಲ್.ಆರ್.ನಾಗರಾಜಪ್ಪ ಅವರನ್ನು ನೂಟವೇ ಗ್ರಾ.ಪಂ.ಅಧ್ಯಕ್ಷರಾಗಿರುವ ಪಲ್ಲವಿ ವಿಶ್ವನಾಥ್ ಅವರನ್ನು ಅತ್ಮೀಯವಾಗಿ ಅಭಿನಂದಿಸಲಾಯಿತು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿಯುಸಿ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ತಾಲೂಕು ಅಧ್ಯಕ್ಷ ಜೆ.ಎಂ.ಪ್ರೇಮ್ ಕುಮಾರ್,ಕಾರ್ಯದರ್ಶೀ ರಾಜಣ್ಣ ,ನಿರ್ದೇಶಕರಾದ ಎಬಿ ವಿಜಿ ಕುಮಾರ್ ,ಎನ್.ಸಿ.ಎನ್.ಧನರಾಜಪ್ಪ ಇನ್ನಿತರರು ಇದ್ದರು.