ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಮಹಾರಾಜರ ಮೆರವಣಿಗೆ

KannadaprabhaNewsNetwork |  
Published : Feb 20, 2026, 02:30 AM IST
ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. | Kannada Prabha

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಕ್ಷತ್ರಿಯ ಮರಾಠ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರ ಸಹಯೋಗದಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಗುರುವಾರ ಜರುಗಿತು.

ರಟ್ಟೀಹಳ್ಳಿ:ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಕ್ಷತ್ರಿಯ ಮರಾಠ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರ ಸಹಯೋಗದಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ಗುರುವಾರ ಜರುಗಿತು.

ಸಂಜೆ 4 ಗಂಟೆಗೆ ಧರ್ಮಗಿರಿ ಬಾರಾಮಹಲ್ ಮಠದ ಆವರಣದಲ್ಲಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಹಳೇ ಬಸ್ಟ್ಯಾಂಡ್ ಸರ್ಕಲ್, ಕೋಟೆ ಓಣಿ, ಹಳೇ ಪೇಟಿ, ಕುಮಾರೇಶ್ವರ ಕಾಲೇಜ್ ರಸ್ತೆ, ಕುರಬಗೇರಿ, ಸಂಗೋಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ಸರ್ಕಲ್ ಭಗತ್‌ಸಿಂಗ ಸರ್ಕಲ್, ಶಿವಾಜಿ ನಗರ ಮುಖಾಂತರ ಬಾರಾಮಹಲ್ ಮಠದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳಾದ ಪೂರ್ವಿಕಾ ಮಹಿಳಾ ಡೊಳ್ಳಿನ ತಂಡ, ಸಂಚಾರಿ ಆರ್ಕೇಸ್ಟ್ರಾ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಕೇಂದ್ರ ಬಿಂದುಗಳಾಗಿದ್ದವು.

ಮುಂಜಾನೆ 9 ಗಂಟೆಗೆ ಶಿವಾಜಿ ಮಹಾರಾಜರ ತೊಟ್ಟಿಲು ಕಾರ್ಯಕ್ರಮ ಹಾಗೂ ವಿವಿಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ನಂತರ ಮಧ್ಯಾಹ್ನ 12.ಗಂಟೆಯಿಂದ ಅನ್ನ ಸಂತರ್ಪಣೆ ಜರುಗಿತು.

ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಮರಾಠ ಸಮಾಜದ ಅಧ್ಯಕ್ಷ ಅಣ್ಣಪ್ಪ ಸಾಳುಂಕೆ, ಪ್ರವೀಣ ಜಮೇದಾರ, ಶ್ರೀನಿವಾಸ ಬೈರಪ್ಪನವರ, ಎಲ್ಲಪ್ಪ ಮರಾಠೆ, ಬಸಣ್ಣ ಬಾಗೋಡಿ, ಕಿಟ್ಟಪ್ಪ ಬಾಜಿರಾಯರ, ಪ್ರಶಾಂತ ಬಾಜಿರಾಯರ, ಶಿವರಾಜ ಗೂಳಪ್ಪನವರ, ವಾಸಣ್ಣ ದ್ಯಾವಕ್ಕಳವರ ಹಾಗೂ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕ ಮಧ್ಯಂತರ ಚುನಾವಣೆ- ಭಾರತದ ಮೇಲೇನು ಎಫೆಕ್ಟ್‌?
ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಕಾಫಿ, ಟೀ ಬೆಲೆ ಏರಿಕೆ