ಮನ್ಮುಲ್‌ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ನಿಂದ ಶಿವಕುಮಾರ್ ಅಭ್ಯರ್ಥಿ

KannadaprabhaNewsNetwork |  
Published : Dec 24, 2024, 12:46 AM IST
23ಕೆಎಂಎನ್ ಡಿ13,14 | Kannada Prabha

ಸಾರಾಂಶ

ಸ್ಥಳೀಯ ಸಂಸ್ಥೆಗಳ ಜೊತೆಗೆ ಮನ್ಮುಲ್ ಚುನಾವಣೆಗಳು ಪಕ್ಷ ಸಂಘಟನೆಗೆ ಪ್ರಮುಖವಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸರ್ವಾನುಮತದಿಂದ ಸಿ.ಶಿವಕುಮಾರ್ ಅವರನ್ನು ಆಯ್ಕೆಮಾಡಲಾಗಿದೆ. ಎಲ್ಲರು ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮನ್ಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರ ಅಣ್ಣ ದಿ.ಚಿಕ್ಕರಾಮೇಗೌಡ ಪುತ್ರ ಸಿ.ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ಇರುವ ರುತ್ವಿಅಕ್ಷಯ್ ಕನ್ವೆನ್ಷನ್ ಹಾಲ್‌ನಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧವಾಗಿ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್ ಅವರ ಅಧ್ಯಕ್ಷತೆ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆದ ಪಕ್ಷದ ಮುಖಂಡರು, ಡೇರಿ ಡೆಲಿಗೆಟ್ಸ್ (ಮತದಾರರ) ಸಭೆಯಲ್ಲಿ ಚರ್ಚಿಸಿ ಎಲ್ಲರೂ ಸರ್ವಾನುಮತದಿಂದ ಚಿನಕುರಳಿ ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿ ಘೋಷಿಸಿದರು.

ಮನ್ಮುಲ್ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಎಲ್ಲಾ ಡೇರಿ ಡೆಲಿಗೆಟ್ಸ್ ಹಾಗೂ ಮುಖಂಡರು, ಕಾರ್ಯಕರ್ತರ ಸಭೆ ನಡೆಯುತ್ತಿದೆ. ಆಕಾಂಕ್ಷಿತರು ತಮ್ಮ ಹೆಸರು ಪ್ರಾಸ್ತಾಪಿಸಬೇಕೆಂದು ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್ ತಿಳಿಸಿದರು.

ಸಭೆಯಲ್ಲಿ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ಕಣಿವೆಕೊಪ್ಪಲು ಜಯರಾಮು, ಚಿಕ್ಕಾಡೆ ಗಿರೀಗೌಡ ಹಾಗೂ ಚಿನಕುರಳಿಯ ಸಿ.ಶಿವಕುಮಾರ್ ಅವರು ನಾವು ಆಕಾಂಕ್ಷಿತರು ಎಂಬುದಾಗಿ ಸಭೆಗೆ ತಿಳಿಸಿದರು. 3 ಮಂದಿ ಆಕಾಂಕ್ಷಿತರು ಇದ್ದ ಕಾರಣ ಪಕ್ಷದ ಅಧ್ಯಕ್ಷರು ಹಾಗೂ ಕೆಲವು ಮುಖಂಡರು ಸಭೆಯಲ್ಲಿದ್ದ ಡೇರಿ ಡೆಲಿಗೆಟ್ಸ್, ಕಾರ್ಯಕರ್ಯರ ಅಭಿಪ್ರಾಯ ಸಂಗ್ರಹಿಸಿದರು.

ಬಳಿಕ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್ ಅವರು, ಮೂರು ಮಂದಿ ಆಕಾಂಕ್ಷಿತರರೊಂದಿಗೆ ಗುಪ್ತವಾಗಿ ಚರ್ಚಿಸಿ ಅಂತಿಮವಾಗಿ ಎಲ್ಲರ ಅಭಿಪ್ರಾಯದಂತೆ ಸಿ.ಶಿವಕುಮಾರ್ ಅವರ ಅಭ್ಯರ್ಥಿ ಎಂದು ಘೋಷಿಸಿದರು. ಇದಕ್ಕೆ ಉಳಿದ ಇನ್ನಿಬ್ಬರು ಆಕಾಂಕ್ಷಿತ ಅಭ್ಯರ್ಥಿಗಳು ಸಹ ಬೆಂಬಲ ಸೂಚಿಸಿದರು.

ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಜೊತೆಗೆ ಮನ್ಮುಲ್ ಚುನಾವಣೆಗಳು ಪಕ್ಷ ಸಂಘಟನೆಗೆ ಪ್ರಮುಖವಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸರ್ವಾನುಮತದಿಂದ ಸಿ.ಶಿವಕುಮಾರ್ ಅವರನ್ನು ಆಯ್ಕೆಮಾಡಲಾಗಿದೆ. ಎಲ್ಲರು ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಮನವಿಮಾಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಪಕ್ಷ ಸಂಘಟನೆಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ಪ್ರಮುಖವಾಗಿದೆ. ಪಕ್ಷ ತಾಯಿ ಇದ್ದಂತೆ ಯಾರು ಪಕ್ಷಕ್ಕೆ ಮೋಸ ಮಾಡಬೇಡಿ. ಚುನಾವಣೆ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಲಾಗಿದೆ. ಅಧ್ಯಕ್ಷರು ಆಯ್ಕೆ ಮಾಡುವ ಅಭ್ಯರ್ಥಿಯ ಗೆಲುವಿಗೆ ಎಲ್ಲರು ಶ್ರಮಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ಲಿಂಗರಾಜು, ಸಿ.ಎಸ್.ಗೋಪಾಲಗೌಡ, ಆನಂದ್, ಹುಚ್ಚೇಗೌಡ, ಶ್ರೀನಿವಾಸ್, ರಾಜಪ್ಪ, ದ್ಯಾವಪ್ಪ, ಮಹದೇವು, ವಿ.ಎಸ್.ನಿಂಗೇಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಇತ್ಯರ್ಥಕ್ಕೆ ಕಾಂಗ್ರೆಸ್‌ ಶಾಸಕರಿಂದ ಒತ್ತಡ
ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ