ಶಿವಮೊಗ್ಗ ಸಂಚಾರಿ ವಿಧಿ-ವಿಜ್ಞಾನ ಲ್ಯಾಬ್‌ ಹೊಂದಿದ ಮೊದಲ ಜಿಲ್ಲೆ

KannadaprabhaNewsNetwork |  
Published : Jul 17, 2026, 01:45 AM IST
ಪೊಟೋ 16ಎಸ್‌ಎಂಜಿಕೆಪಿ07ಶಿವಮೊಗ್ಗ ನಗರದ ಡಿಎಆರ್ ಆವರಣದಲ್ಲಿ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ವಾಹನಕ್ಕೆ ಎಸ್ಪಿ ಬಿ.ನಿಖಿಲ್‌ ಚಾಲನೆ ನೀಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹಿಸಿ ಅಪರಾಧಗಳನ್ನು ಪತ್ತೆ ಮಾಡಿ ಬಂಧಿಸಲು ನೆರವಾಗುವ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯದ ವಾಹನವನ್ನು ಕೇಂದ್ರ ಸರ್ಕಾರದ ಅನುದಾನದಡಿ ಪೊಲೀಸ್ ಇಲಾಖೆಗೆ ನೀಡಲಾಗಿದ್ದು, ರಾಜ್ಯದಲ್ಲೇ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಶಿವಮೊಗ್ಗದ್ದಾಗಿದೆ ಎಂದು ಎಸ್ಪಿ ಬಿ.ನಿಖಿಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ಸಂಗ್ರಹಿಸಿ ಅಪರಾಧಗಳನ್ನು ಪತ್ತೆ ಮಾಡಿ ಬಂಧಿಸಲು ನೆರವಾಗುವ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯದ ವಾಹನವನ್ನು ಕೇಂದ್ರ ಸರ್ಕಾರದ ಅನುದಾನದಡಿ ಪೊಲೀಸ್ ಇಲಾಖೆಗೆ ನೀಡಲಾಗಿದ್ದು, ರಾಜ್ಯದಲ್ಲೇ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಶಿವಮೊಗ್ಗದ್ದಾಗಿದೆ ಎಂದು ಎಸ್ಪಿ ಬಿ.ನಿಖಿಲ್ ಹೇಳಿದರು.

ನಗರದ ಡಿಎಆರ್ ಆವರಣದಲ್ಲಿ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರಿಮಿನಲ್ ಅಪರಾಧ ಸಂಭವಿಸಿದಾಗ ಪತ್ತೆಗೆ ಬೇಕಾಗುವ ಎಲ್ಲ ಅತ್ಯಾಧುನಿಕ ಸಲಕರಣೆಗಳು ವಾಹನದಲ್ಲಿದ್ದು, ಅಪರಾಧಗಳನ್ನು ಬಂಧಿಸಲು ಸಾಕ್ಷ್ಯ ಒದಗಿಸಲಿದೆ ಎಂದು ತಿಳಿಸಿದರು.

ನುರಿತ ವಿಧಿ ವಿಜ್ಞಾನ ತಜ್ಞರ ತಂಡ ವಾಹನದಲ್ಲಿರುವರು. ಪೊಲೀಸರು ಮಾಹಿತಿ ನೀಡಿದ ತಕ್ಷಣ ತಂಡ ಘಟನಾ ಸ್ಥಳಕ್ಕೆ ಧಾವಿಸಿ ನೆರವು ನೀಡಲಿದೆ. ಅಪರಾಧಗಳು ಸಂಭವಿಸಿದಾಗ ಸ್ಥಳದಲ್ಲಿ ಸಾಕ್ಷ್ಯ ನಾಶವಾಗದಂತೆ ನೋಡಿಕೊಳ್ಳಬೇಕು. ಸೂಕೋ ತಂಡವನ್ನು ಕರೆಯಿಸಿ ಮಾಹಿತಿ ನೀಡಬೇಕು ಎಂದರು.

ಡಿಎಆರ್ ಸಭಾಂಗಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾತ್ಯಕ್ಷಿಕೆಯನ್ನು ತಜ್ಞರು ನೆರವೇರಿಸಿದರು. ಎಎಸ್‌ಪಿ ಎ.ಜಿ.ಕಾರಿಯಪ್ಪ, ಡಿವೈಎಸ್‌ಪಿ ಶೀಲವಂತ ಹೊಸ್ಮನಿ, ಸಂಜೀವ್‌ಕುಮಾರ್ ಇತರರಿದ್ದರು.

--

ಬಾಕ್ಸ್

ದೊಡ್ಡಪೇಟೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಯುವ ಪೀಳಿಗೆಗೆ ಜಾಗೃತಿ ಮೂಡಿಸಲು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಶಾಲೆ ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿ ಕಾನೂನು ಪಾಲನೆ ಹಾಗೂ ನಾಗರಿಕ ಜವಾಬ್ದಾರಿ ಕುರಿತು ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಾಗಾರದಿಂದ ತರಲಾಗಿದ್ದ ರೈಫಲ್ಸ್, ಪಿಸ್ತೂಲ್ ಸೇರಿ ವಿವಿಧ ಆಯುಧಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ದೊಡ್ಡಪೇಟೆ ಠಾಣೆಯ ಕೆಲಸದ ವಾತಾವರಣ, ಸಿಬ್ಬಂದಿ ಕಾರ್ಯವೈಖರಿ ಮತ್ತು ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಮಾದಕವಸ್ತುಗಳಿಂದ ದೂರವಿರಲು ‘ಬೇಡ ಬ್ರೋ ಅಭಿಯಾನ’, ನಾಗರಿಕ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಎಸ್ಪಿ ಬಿ.ನಿಖಿಲ್ ಮಾಹಿತಿ ನೀಡಿದರು. ಡಿವೈಎಸ್ಪಿ ಸಂಜೀವ್‌ಕುಮಾರ್, ದೊಡ್ಡಪೇಟೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ್ ಇತರರಿದ್ದರು.

-------------------

ಪೊಟೋ 16ಎಸ್‌ಎಂಜಿಕೆಪಿ07

ಶಿವಮೊಗ್ಗ ನಗರದ ಡಿಎಆರ್ ಆವರಣದಲ್ಲಿ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ವಾಹನಕ್ಕೆ ಎಸ್ಪಿ ಬಿ.ನಿಖಿಲ್‌ ಚಾಲನೆ ನೀಡಿದರು.

------------------

ಪೊಟೋ 16ಎಸ್‌ಎಂಜಿಕೆಪಿ08

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಆದಿಚುಂಚನಗಿರಿ ಶಾಲೆ ವಿದ್ಯಾರ್ಥಿಗಳು ಭೇಟಿ ನೀಡಿದ್ದ ಸಂದರ್ಭ ಬೇಡ ಬ್ರೋ ಅಭಿಯಾನ, ನಾಗರಿಕ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಎಸ್ಪಿ ಬಿ.ನಿಖಿಲ್ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ
ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ