ಶಿವಮೊಗ್ಗ ಏರ್ಪೋರ್ಟಲ್ಲಿ ಮೊದಲ ವಿಮಾನ ತರಬೇತಿ ಸಂಸ್ಥೆ ಸ್ಥಾಪನೆ

Published : May 31, 2025, 12:28 PM IST
Shivamogga airport

ಸಾರಾಂಶ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಯುಯಾನ ತರಬೇತಿ ಸಂಸ್ಥೆ (ಎಫ್‌ಟಿಒ) ಸ್ಥಾಪನೆಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಯೋಜನೆ ರೂಪಿಸಿದೆ.

  ಬೆಂಗಳೂರು : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಯುಯಾನ ತರಬೇತಿ ಸಂಸ್ಥೆ (ಎಫ್‌ಟಿಒ) ಸ್ಥಾಪನೆಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಯೋಜನೆ ರೂಪಿಸಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎಫ್‌ಟಿಒ ಸ್ಥಾಪನೆಗಾಗಿ 3,500 ಚದರ ಮೀ. ವಿಸ್ತೀರ್ಣದ ಜಾಗ ನೀಡಲಾಗುತ್ತಿದ್ದು, ಅದರಲ್ಲಿ 1,500 ಚದರ ಮೀ. ಅನ್ನು ವಿಮಾನಗಳ ಹ್ಯಾಂಗರ್‌ಗಳಿಗೆ, 2 ಸಾವಿರ ಚದರ ಮೀ. ತರಗತಿ ಕೊಠಡಿ, ಕಚೇರಿಗಳಿಗೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲಿಯೇ ಸಿಮ್ಯುಲೇಟರ್‌ಗಳು, ಗ್ರಂಥಾಲಯ, ರೇಡಿಯೋ ಟೆಲಿಫೋನಿ ತರಬೇತಿ ಕೇಂದ್ರ, ಪರೀಕ್ಷಾ ಕೊಠಡಿ, ಬ್ರೀಫಿಂಗ್‌ ಸೌಲಭ್ಯ ಸೇರಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

 ವಾರ್ಷಿಕ 100 ಕೆಡೆಟ್‌ಗಳಿಗೆ ಪೈಲಟ್‌ ತರಬೇತಿ ನೀಡುವ ಗುರಿಯೊಂದಿಗೆ ಎಫ್‌ಟಿಒ ಆರಂಭಿಸಲಾಗುತ್ತಿದ್ದು, ಮೊದಲ ವರ್ಷ 50 ಕೆಡೆಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಶುಲ್ಕ ರಿಯಾಯಿತಿಯೊಂದಿಗೆ ಶೇ. 25ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.

ಎಫ್‌ಟಿಒ ನಿರ್ವಹಣೆಗೆ ಸಂಬಂಧಿಸಿ ಏಜೆನ್ಸಿ ನಿಯೋಜಿಸಲು ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಅದರಲ್ಲಿ ಆಯ್ಕೆಯಾಗುವ ಏಜೆನ್ಸಿ ಎಫ್‌ಟಿಒ ಕಾರ್ಯಾಚರಣೆ, ಅಭ್ಯರ್ಥಿಗಳ ಪ್ರವೇಶ ಸೇರಿದಂತೆ ಮತ್ತಿತರ ಕಾರ್ಯಗಳನ್ನು ನಿರ್ವಹಿಸಲಿದೆ. ಅದಕ್ಕೆ ಕೆಎಸ್‌ಐಐಡಿಸಿ ವಾಯು ಸಂಚಾರ ನಿಯಂತ್ರಣ (ಎಟಿಸಿ), ಸುರಕ್ಷತೆ ಮತ್ತು ನಿರ್ವಹಣೆ ಸೇರಿ ಇನ್ನಿತರ ಮೂಲಸೌಕರ್ಯವನ್ನು ಒದಗಿಸಲಿದೆ. ಮುಂದಿನ ಮೂರು ತಿಂಗಳಲ್ಲಿ ವಿಮಾನ ನಿಯೋಜನೆ ಆರಂಭಿಸುವ ಗುರಿ ಹೊಂದಲಾಗಿದ್ದು, ಒಂಭತ್ತು ತಿಂಗಳೊಳಗೆ ಎಫ್‌ಟಿಒ ಪೂರ್ಣ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ.

ಶಿವಮೊಗ್ಗ ವಿಮಾನನಿಲ್ದಾಣದಲ್ಲಿ ವಿಮಾನ ತರಬೇತಿ ಸಂಸ್ಥೆ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಇದು ಕೆಎಸ್‌ಐಐಡಿಸಿ ಮೂಲಕ ಆರಂಭಿಸಲಾಗುತ್ತಿರುವ ಮೊದಲ ವಾಯುಯಾನ ತರಬೇತಿ ಯೋಜನೆಯಾಗಿರಲಿ. ಈ ಯೋಜನೆಯಿಂದಾಗಿ ಸ್ವಾವಲಂಬಿ ವಾಯುಯಾನ ತರಬೇತಿ ಮತ್ತು ಕೌಶಲ್ಯಪೂರ್ಣ ಪ್ರತಿಭೆಗಳನ್ನು ಪೋಷಿಸುವಲ್ಲ ಮಹತ್ವದ ಹೆಜ್ಜೆಯಾಗಿದೆ.

ಎಂ.ಬಿ. ಪಾಟೀಲ್‌,

ಮೂಲಸೌಕರ್ಯ ಅಭಿವೃದ್ಧಿ ಸಚಿವ

PREV
Read more Articles on

Recommended Stories

ಡಯಾನ ಬುಕ್ ಗ್ಯಾಲರಿಗೆ ಮಾಜಿ ಸಿಎಂ ಬಿಎಸ್‌ವೈ ಭೇಟಿ
ಗೊಬ್ಬರದ ಅಂಗಡಿಗೆ ತಹಸೀಲ್ದಾರ್ ಧೀಡಿರ್ ಭೇಟಿ