ಕಲಬುರಗಿ ಯುವತಿ ಜತೆ 24ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೊಮ್ಮಗನ ನಿಶ್ಚಿತಾರ್ಥ

Published : Mar 14, 2025, 11:57 AM IST
BSY Thumb 1

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೊಮ್ಮಗ ಸುಭಾಶ್ ಅವರ ನಿಶ್ವಿತಾರ್ಥ ಮಾ.24ರಂದು ಕಲಬುರಗಿ ದಾಸೋಹ ಪರಿವಾರದ ಲಿಂಗರಾಜಪ್ಪ ಅಪ್ಪ- ದೀಪಾಲಿ ಪುತ್ರಿ ಶ್ರಾವಣಾ ಅವರೊಂದಿಗೆ ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ.

  ಕಲಬುರಗಿ :  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೊಮ್ಮಗ ಸುಭಾಶ್ ಅವರ ನಿಶ್ವಿತಾರ್ಥ ಮಾ.24ರಂದು ಕಲಬುರಗಿ ದಾಸೋಹ ಪರಿವಾರದ ಲಿಂಗರಾಜಪ್ಪ ಅಪ್ಪ- ದೀಪಾಲಿ ಪುತ್ರಿ  ಶ್ರಾವಣಾ ಅವರೊಂದಿಗೆ ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ.

ಯಡಿಯೂರಪ್ಪ ಅವರು ಈಗಾಗಲೇ ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಲಬುರಗಿಯ ಉದ್ಯಮಿ ಶಿವಾನಂದ ಮಾನ್ಕರ್‌ ಅವರ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ ಮಾಡಿದ್ದರು. ಇದೀಗ ತಮ್ಮ ಮೊಮ್ಮಗ ಸುಭಾಶ್‌ನಿಗೂ ಕಲಬುರಗಿಯಿಂದಲೇ ಸಂಬಂಧ ಹುಡುಕಿ ಗಮನ ಸೆಳೆದಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಪುತ್ರ, ಸಂಸದ ಬಿ.ವೈ. ರಾಘವೇಂದ್ರ -ತೇಜಸ್ವಿನಿ ದಂಪತಿಯ ಪುತ್ರ ಸುಭಾಶ್‌ನಿಗೂ ಹಾಗೂ ಶ್ರಾವಣಾ (ಕಾನೂನು ಪದವೀಧರೆ) ಅವರಿಗೂ ಮಾ.24ರಂದು ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಈ ಬೆಳವಣಿಗೆಯೊಂದಿಗೆ ಮಾಜಿ ಸಿಎಂ ಬಿಎಸ್‌ವೈ ಹಾಗೂ ದಾಸೋಹ ಮನೆತನದ ಲಿಂಗರಾಜಪ್ಪ ಪರಿವಾರದ ನಡುವಿನ ವೈವಾಹಿಕ ಸಂಬಂಧ ಬೀಗತನದ ಬೆಸುಗೆ ಸುದ್ದಿಗೆ ಗ್ರಾಸವಾಗಿದೆ.

PREV

Recommended Stories

ಡಯಾನ ಬುಕ್ ಗ್ಯಾಲರಿಗೆ ಮಾಜಿ ಸಿಎಂ ಬಿಎಸ್‌ವೈ ಭೇಟಿ
ಗೊಬ್ಬರದ ಅಂಗಡಿಗೆ ತಹಸೀಲ್ದಾರ್ ಧೀಡಿರ್ ಭೇಟಿ