ಮಾಲೀಕನ ಶವ ಕಂಡು ಪ್ರಾಣ ಬಿಟ್ಟ ಶ್ವಾನ

Published : Nov 04, 2025, 11:29 AM IST
Bhadravathi dog dies after owner death

ಸಾರಾಂಶ

ಮನೆ ಮಾಲೀಕನ ಮೃತದೇಹ ನೋಡಿ ಆತನ ಪ್ರೀತಿಯ ಶ್ವಾನ ಕೂಡ ಪ್ರಾಣ ಬಿಟ್ಟ ಘಟನೆ ಮನಕುಲಕುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್ (61) ಅವರು ನಾಯಿ  ಪ್ರೀತಿಯಿಂದ ಸಾಕಿದ್ದರು.

 ಭದ್ರಾವತಿ :  ಮನೆ ಮಾಲೀಕನ ಮೃತದೇಹ ನೋಡಿ ಆತನ ಪ್ರೀತಿಯ ಶ್ವಾನ ಕೂಡ ಪ್ರಾಣ ಬಿಟ್ಟ ಘಟನೆ ಮನಕುಲಕುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಾಲೀಕನ ಶವ ಕಂಡು ಶವದ ಪಕ್ಕದಲ್ಲೇ ಮಲಗಿ ತೀವ್ರವಾಗಿ ವ್ಯಥೆ

ನಗರದ ಜಿಂಕ್ ಲೈನ್ ನಿವಾಸಿ ಲಾರೆನ್ಸ್ (61) ಅವರು ನಾಯಿಯೊಂದನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಇತ್ತೀಚೆಗೆ ಲಾರೆನ್ಸ್‌ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಮನೆಗೆ ತಂದಾಗ ನೆಚ್ಚಿನ ಮಾಲೀಕನ ಶವ ಕಂಡು ಶವದ ಪಕ್ಕದಲ್ಲೇ ಮಲಗಿ ತೀವ್ರವಾಗಿ ವ್ಯಥೆ ಪಟ್ಟಿತು. ಬಳಿಕ ಶ್ವಾನವು ಅಲ್ಲಿಯೇ ಕೊನೆಯುಸಿರೆಳೆಯಿತು. ಲಾರೆನ್ಸ್ ಅಂತ್ಯಕ್ರಿಯೆ ಬಳಿಕ ಅವರೊಟ್ಟಿಗೆ ಸಾವನ್ನಪ್ಪಿದ ಶ್ವಾನದ ಮೃತದೇಹವನ್ನು ಮನೆಯ ಹಿಂಭಾಗದಲ್ಲಿಯೇ ಮಣ್ಣು ಮಾಡಲಾಗಿದೆ.

ಬಿಟ್ಟಿರಲಾರದ ಸಂಬಂಧ

ಮನುಷ್ಯರ ಜೊತೆ ಮೂಕ ಪ್ರಾಣಿಗಳು ಸಹ ಬಿಟ್ಟಿರಲಾರದ ಸಂಬಂಧ ಹೊಂದಿರುತ್ತವೆ. ಅದರಲ್ಲೂ ಅವರೊಂದಿಗೆ ಕುಟುಂಬದ ಸದಸ್ಯರಂತೆಯೇ ಬದುಕುತ್ತಿರುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

PREV
Stay informed with the latest news and developments from Shivamogga district (ಶಿವಮೊಗ್ಗ ನ್ಯೂಸ್) — covering local politics, community issues, environment, tourism, culture, crime and civic matters in Shivamogga district on Kannada Prabha News.
Read more Articles on

Recommended Stories

ರಾಜ್ಯದಲ್ಲಿ ಮತ್ತೊಂದು ಖಾಸಗಿ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿ!
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿ