ಶಿವಮೊಗ್ಗ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಸಿಬ್ಬಂದಿ ಮೇಲೆ ನಾಯಿ ದಾಳಿ ಮಾಡಿ ಕಚ್ಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ವೇಳೆ ಶಿಕ್ಷಕಿ ಕಾಲಿನಲ್ಲಿ ರಕ್ತ ಬಂದಿದೆ. ಆದರೂ ಅವರು ಗಣತಿ ಕಾರ್ಯವನ್ನು ಮುಗಿಸಿ ಬಳಿಕ ಚಿಕಿತ್ಸೆ ಪಡೆದು ಕರ್ತವ್ಯ ಪ್ರಜ್ಞೆ ಮಾಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ ಉಮಾರಾಣಿ ಅವರ ಮೇಲೆ ನಾಯಿ ದಾಳಿ ಮಾಡಿದೆ. ಆದರೂ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆಗಿದ್ದೇನು?:
ಮಂಗಳವಾರ ಉಮಾರಾಣಿ ಅವರು ಗಣತಿ ಕಾರ್ಯಕ್ಕಾಗಿ ನಿಯೋಜನೆಗೊಂಡಿದ್ದರು. ಅದರಂತೆ ಶಿವಮೊಗ್ಗದ ರವಿವರ್ಮ ಬೀದಿ, ಆಜಾದ್ ನಗರ ಭಾಗದಲ್ಲಿ ಸರ್ವೆಗೆ ತೆರಳಿದ್ದರು. ಈ ವೇಳೆ ಅವರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿದೆ. ಉಮಾದೇವಿ ಅವರ ಎಡಗಾಲಿಗೆ ನಾಯಿ ಕಚ್ಚಿದೆ. ಇದರಿಂದ ಅವರ ಕಾಲಿನಿಂದ ರಕ್ತ ಬರಲು ಆರಂಭವಾಗಿದೆ. ಆದರೂ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕಾಲಿನಲ್ಲಿ ರಕ್ತ ಬಂದರೂ ತಕ್ಷಣವೇ ಆಸ್ಪತ್ರೆಗೆ ತೆರಳದೆ, ಗಣತಿ ಕಾರ್ಯವನ್ನು ಅವರು ಮುಗಿಸಿದ್ದಾರೆ. ಬಳಿಕ ಅವರು ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಗೆ ಜನರು ಶಹಬ್ಬಾಷ್ ಹೇಳಿದ್ದಾರೆ.