ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ 27 ಜಿಲ್ಲೆಗಳಿಂದ ಪ್ರತಿ ಜಿಲ್ಲೆಗೆ ಓರ್ವ ಸದಸ್ಯರಂತೆ 27 ಸದಸ್ಯರ ಆಯ್ಕೆಗೆ ಅವಕಾಶವಿದ್ದು, 15 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಜ.18 ರಂದು ನಿಗದಿಪಡಿಸಿದ ಚುನಾವಣೆಯಲ್ಲಿ ಉಳಿದ ಸದಸ್ಯರು ಚುನಾವಣೆ ಮೂಲಕ ಆಯ್ಕೆಯಾಗುವರು.
ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆ ಮಾಡಿದ ಸಮಾಜದ ಹಿರಿಯರಾದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲಕುಮಾರ್, ಮಾಹಿತಿ ಆಯೋಗದ ಮಾಜಿ ಆಯುಕ್ತರಾದ ಎಲ್.ಕೃಷ್ಣಮೂರ್ತಿ, ಮಾಜಿ ಸಚಿವರ ಪುತ್ರಆರ್.ಲೋಕೇಶ, ಪ್ರಭುರಾವ ತಲಮಡಗಿ ಸೇರಿದಂತೆ ಸರ್ವ ಮುಖಂಡರಿಗೆ ಧನ್ಯವಾದಗಳು. ನನ್ನ ಜಿಲ್ಲೆಯ ಸಮಾಜದವರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನದಿಂದ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತೇನೆ. ಸಂಘ ನೀಡಿದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತೇನೆ. ನನ್ನ ಮೇಲಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿಯನ್ನು ಸದಾಕಾಲ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.-ಶಿವಾನಂದ ಮಖಣಾಪೂರ, ಬಿಜೆಪಿ ಮುಖಂಡರು, ನಾಗಠಾಣ ಮೀಸಲು ವಿಧಾನಸಭಾ ಮತಕ್ಷೇತ್ರ.